ಸುದೀಪ್, ರಮೇಶ್ ಅರವಿಂದ್ ಸೇರಿ 300 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ
ಬೆಂಗಳೂರು, ಆಗಸ್ಟ್ 16: ಬಿಬಿಎಂಪಿ ಕೊಡಮಾಡುವ ಕೆಂಪೇಗೌಡ ಪ್ರಶಸ್ತಿ ಪ್ರಕಟವಾಗಿದ್ದು, 300 ಜನ ಸಾಧಕರಿಗೆ ಈ ಬಾರಿ ಪ್ರಶಸ್ತಿ ವಿತರಿಸಲಾಗುತ್ತಿದೆ.
ಕ್ರೀಡೆ, ಸಮಾಜ ಸೇವೆ, ರಂಗಭೂಮಿ, ಸಾಹಿತ್ಯ, ಶಿಕ್ಷಣ, ಹೊರ ನಾಡ ಕನ್ನಡಿಗರ ಸೇವೆ, ಸಂಗೀತ, ರಾಜಕೀಯ, ಚಲನಚಿತ್ರ, ವಿಭಾಗಗಳಲ್ಲೂ ತಮ್ಮ ಸೇವೆಯಿಂದ ಗುರುತಿಸಿಕೊಂಡ 300 ಜನರನ್ನು ಈ ಬಾರಿ ಆಯ್ಕೆ ಮಾಡಲಾಗಿದೆ.
ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಚಿತ್ರನಟರಾದ ಸುದೀಪ್, ರಮೇಶ್ ಅರವಿಂದ್, ಸೃಜನ್ ಲೋಕೇಶ್, ಡಿ.ಎನ್.ಸೀತಾರಾಮ್ ಸಹ ಇದ್ದಾರೆ. ಜೊತೆಗೆ ಮೋರಿಯಲ್ಲಿ ಸಿಕ್ಕ ಮಗುವಿಗೆ ಹಾಲುಣಿಸಿ ಮಾನವೀಯತೆ ಮೆರೆದಿದ್ದ ಪೇದೆ ಅರ್ಚನಾ ಅವರಿಗೂ ಪ್ರಶಸ್ತಿ ನೀಡಲಾಗುತ್ತಿದೆ.

ಸಿಎಂ ಕುಮಾರಸ್ವಾಮಿ ಅವರು ಪ್ರಶಸ್ತಿ ವಿಜೇತರಿಗೆ ಶುಭಾಷಯ ಕೋರಿದ್ದದಾರೆ. ಇಂದು ಸಂಜೆ ಬಿಬಿಎಂಪಿ ಆವರಣದ ರಾಜಕುಮಾರ ಗಾಜಿನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.












Click it and Unblock the Notifications