ಬೆಂಗಳೂರಿಗೆ ಬರಲಿದ್ದಾರೆ 30 ಸಾವಿರ ಜನ; ಬಿಬಿಎಂಪಿಗೆ ದೊಡ್ಡ ಸವಾಲು

ಬೆಂಗಳೂರು, ಮೇ 13 : ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಬಿಬಿಎಂಪಿಗೆ ಮತ್ತೊಂದು ದೊಡ್ಡ ಸವಾಲ ಎದುರಾಗಿದೆ. ಬೆಂಗಳೂರು ನಗರಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದು, ಕ್ವಾರಂಟೈನ್ ಮಾಡುವುದು ಎಲ್ಲಿ? ಎಂಬ ಪ್ರಶ್ನೆ ಎದುರಾಗಿದೆ.

ಬೇರೆ ರಾಜ್ಯ ಮತ್ತು ವಿದೇಶದಿಂದ ಬೆಂಗಳೂರಿಗೆ ಬರುವವರಿಗೆ ಕ್ವಾರಂಟೈನ್ ಕಡ್ಡಾಯವಾಗಿದೆ. ದೆಹಲಿಯಿಂದ ವಿಶೇಷ ರೈಲು, ವಿದೇಶದಿಂದ ಬರುವವರು ಸೇರಿ ಒಟ್ಟು 30 ಸಾವಿರ ಜನರು ಈ ವಾರಂತ್ಯ ಮತ್ತು ಮುಂದಿನ ವಾರದಲ್ಲಿ ಬೆಂಗಳೂರು ನಗರಕ್ಕೆ ಬರಲಿದ್ದಾರೆ.

ಸೇವಾ ಸಿಂಧು ಮೂಲಕ ಈಗಾಗಲೇ ಬೆಂಗಳೂರಿಗೆ ಬರುವ ಜನರ ಲೆಕ್ಕ ಬಿಬಿಎಂಪಿಗೆ ಸಿಕ್ಕಿದೆ. ಪಾಲಿಕೆ ಇಷ್ಟು ಜನರನ್ನು ಎಲ್ಲಿ ಕ್ವಾರಂಟೈನ್ ಮಾಡಬೇಕು ಎಂದು ಚಿಂತನೆ ನಡೆಸುತ್ತಿದೆ. ಅವರನ್ನು ತವರು ಜಿಲ್ಲೆಗೆ ಕಳಿಸಬೇಕೆ? ಅಥವ ಇಲ್ಲಿ ಕ್ವಾರಂಟೈನ್ ಮಾಡಿ ಬಳಿಕ ಕಳಿಸಬೇಕೆ ಎಂಬ ಚರ್ಚೆ ನಡೆದಿದೆ.

30 Thousand People Come To Bengaluru Quarantine Challenge For BBMP

ಒಂದು ವೇಳೆ ಬೇರೆ ಜಿಲ್ಲೆಗೆ ಕಳಿಸಬೇಕು ಎಂದಾದರೆ ಸಾರಿಗೆ ವ್ಯವಸ್ಥೆ ಆಗಬೇಕು. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಬೆಂಗಳೂರಿನಿಂದ ಅಲ್ಲಿಗೆ ತೆರಳುವ ವ್ಯವಸ್ಥೆಯನ್ನು ಮಾಡಬೇಕಿದೆ.

ಒಂದು ವೇಳೆ ಬೆಂಗಳೂರಿನಲ್ಲಿಯೇ ಕ್ವಾರಂಟೈನ್ ಮಾಡುವುದು ಎಂದಾದರೆ ಎಲ್ಲಿ ಮಾಡಬೇಕು ಎಂಬುದು ಪ್ರಶ್ನೆಯಾಗಿದೆ. ಈಗಾಗಲೇ ಬಿಬಿಎಂಪಿ ಹೋಟೆಲ್, ಕಲ್ಯಾಣ ಮಂದಿರ, ಹಾಸ್ಟೆಲ್, ಸಮುದಾಯ ಭವನಗಳನ್ನು ಕ್ವಾರಂಟೈನ್‌ಗಾಗಿಯೇ ಗುರುತಿಸಿದೆ.

ವಿದೇಶದಿಂದ ಮೊದಲ ವಿಮಾನದಲ್ಲಿ ಬಂದವರಿಗೆ ಹೋಟೆಲ್‌ನಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. 12 ದಿನಗಳ ಬಳಿಕ ಇವರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ವರದಿ ನೆಗೆಟಿವ್ ಎಂದು ಬಂದರೆ ಅವರನ್ನು ಮನೆಗೆ ಕಳಿಸಲಾಗುತ್ತದೆ.

ಅತ್ತಿಬೆಲೆ ಸೇರಿದಂತೆ ಬೇರೆ ರಾಜ್ಯಗಳ ಮೂಲಕ ಸೇವಾ ಸಿಂಧುವಿನಲ್ಲಿ ಪಾಸು ಪಡೆದು ಬೆಂಗಳೂರಿಗೆ ಬರುವವರಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ನಿಯಮ ಜಾರಿಗೊಳಿಸಲಾಗಿದೆ. ಅಕ್ಕಪಕ್ಕದ ರಾಜ್ಯಗಳಿಗೆ ನೀವು ಪ್ರವೇಶ ಮಾಡಿದರೂ ಕ್ವಾರಂಟೈನ್ ಕಡ್ಡಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+