ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಚಿತ್ರಸಂತೆಯಲ್ಲಿ ಮಾರಾಟವಾದ ಕಲಾಕೃತಿಗಳು ಎಷ್ಟು ಗೊತ್ತಾ?

|
Google Oneindia Kannada News

ಬೆಂಗಳೂರು, ಜನವರಿ 5: ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರ ಸಂತೆಯಲ್ಲಿ ವಿವಿಧ ಚಿತ್ರ ಕಲಾವಿದರ ಕಲಾಕೃತಿಗಳು ಭಾರೀ ಮಾರಾಟವಾಗಿವೆ.

ಚಿತ್ರಸಂತೆಯಲ್ಲಿ ಕಂಡ ಬಣ್ಣ ಬಣ್ಣದ ಚಿತ್ತಾರಗಳು

ಒಂದೇ ದಿನದಲ್ಲಿ ಸುಮಾರು 3 ಕೋಟಿ ರುಪಾಯಿ ವಹಿವಾಟು ನಡೆದಿದ್ದು, 3 ಲಕ್ಷಕ್ಕೂ ಅಧಿಕ ಸಂಖ್ಯೆಯ ಕಲಾಸಕ್ತರೂ ಬೆಂಗಳೂರು ಚಿತ್ರಸಂತೆಯನ್ನು ಕಣ್ತುಂಬಿಕೊಂಡಿದ್ದಾರೆ. ಸಾವಿರಕ್ಕೂ ಅಧಿಕ ಕಲಾವಿದರ ಕಲಾಕೃತಿಗಳು ಮಾರಾಟವಾಗಿವೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ ಎಲ್ ಶಂಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಲಾವಿದ ವಿಜಯ್ ಎನ್ನುವರು ರಚಿಸಿದ್ದ ದೇವಸ್ಥಾನದ ಕಲಾಕೃತಿಯೊಂದು 12 ಲಕ್ಷ ರುಪಾಯಿಗೆ ಮಾರಾಟಕ್ಕಿತ್ತು. ಆದರೆ ಈ ಕಲಾಕೃತಿ ಮಾರಾಟವಾಗಲಿಲ್ಲ.

3 Crore Business In Bengaluru Chitra Sante

ಚಿತ್ರ ಸಂತೆಯಲ್ಲಿ ಮಿಂದೆದ್ದ ಬೆಂಗಳೂರು ಜನ...!ಚಿತ್ರ ಸಂತೆಯಲ್ಲಿ ಮಿಂದೆದ್ದ ಬೆಂಗಳೂರು ಜನ...!

"ಮನೆಗೊಂದು ಕಲಾಕೃತಿ' ಶೀರ್ಷಕೆಯಡಿ ಆಯೋಜಿಸಿದ್ದ ಈ ಚಿತ್ರಸಂತೆಯನ್ನು ಲಕ್ಷಾಂತರ ಬೆಂಗಳೂರು ಜನ ಕಣ್ತುಂಬಿಕೊಂಡಿದ್ದರು. ರೈತರಿಗೆ ಈ ಸಾರಿಯ ಚಿತ್ರಸಂತೆಯನ್ನು ಅರ್ಪಣೆ ಮಾಡಲಾಗಿತ್ತು. ಕುಮಾರಕೃಪ ರಸ್ತೆಯಿಂದ ಕ್ರಸೆಂಟ್​ ರಸ್ತೆ ತನಕ ರಸ್ತೆ ಬಂದ್​ ಮಾಡಲಾಗಿತ್ತು. ಚಿತ್ರ ಸಂತೆಯಲ್ಲಿ ರಾಜ್ಯದ ಕಲಾವಿದರು ಸೇರಿ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಒಡಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದ 1500ಕ್ಕೂ ಹೆಚ್ಚಿ ಕಲಾವಿದರು ಭಾಗಿಯಾಗಿದ್ದರು. ಅಪರೂಪದ ಕಲಾಕೃತಿಗಳು ಗಮನ ಸೆಳೆದವು.

English summary
3 Crore Business In Bengaluru Chitra Sante On Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X