ಎರಡನೇ ದಿನಕ್ಕೆ ಕಾಲಿಟ್ಟ ಬಿಜೆಪಿಯ ಬೆಂಗಳೂರು ರಕ್ಷಿಸಿ ಪಾದಯಾತ್ರೆ
ಬೆಂಗಳೂರು, ಮಾರ್ಚ್ 3: ಕರ್ನಾಟಕ ಬಿಜೆಪಿ ಆಯೋಜಿಸಿರುವ ಬೆಂಗಳೂರು ರಕ್ಷಿಸಿ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಯಾತ್ರೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೆ.ಆರ್.ಪುರಂ ನಲ್ಲಿ ಉದ್ಘಾಟಿಸಿದರು.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೂ ಯಾತ್ರೆ ನಡೆಯಲಿದ್ದು, ಮಹಾನಗರ ಎದುರಿಸುತ್ತಿರುವ 10 ಪ್ರಮುಖ ಸಮಸ್ಯೆಗಳು ಮತ್ತು ಅದನ್ನು ನಿಭಾಯಿಸುವಲ್ಲಿ ರಾಜ್ಯಸರ್ಕಾರ ವಿಫಲವಾಗಿರುವ ಕುರಿತು ಯಾತ್ರೆಯಲ್ಲಿ ಧ್ವನಿ ಎತ್ತಲಾಗುತ್ತದೆ.
ಇಂದಿನ ಯಾತ್ರೆಯಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷೆ, ಜಾತಿಯ ಆಧಾರದ ಮೇಲೆ ಜನರಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ದುರಾಡಳಿತದಿಂದ ಬೆಂಗಳೂರು ರಕ್ಷಿಸಿ ಪಾದಯಾತ್ರೆಯು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಸಂಜೆ 4.30 ಕ್ಕೆ ಮುಂದುವರಿಯಲಿದೆ. ಅವಿನ್ಯೂ ರಸ್ತೆ, ಸಿಟಿ ಮಾರ್ಕೆಟ್ ಜಂಕ್ಷನ್, ಚಂದ್ರಭವನ ಹೋಟೆಲ್ ಹತ್ತಿರ ದಿಂದ ಪ್ರಾರಂಭವಾಗಲಿದೆ. ಈ ಪಾದಯಾತ್ರೆಯಲ್ಲಿಅನಂತಕುಮಾರ್ ರವರು, ಆರ್.ಅಶೋಕ ರವರು, ಪಿ.ಸಿ.ಮೋಹನ್ ರವರು, ಅರವಿಂದ ಲಿಂಬಾವಳಿ ರವರು ಮುಂತಾದವರು ಭಾಗವಹಿಸಲಿದ್ದಾರೆ.

ಮಾರಚ್ 02 ರಿಂದ ಆರಂಬವಾಗಿರುವ ಯಾತ್ರೆ ಮಾರ್ಚ್ 15 ರವರೆಗೆ ನಡೆಯಲಿದೆ.












Click it and Unblock the Notifications