Property Price: ಬೆಂಗಳೂರಿನ ಈ ಭಾಗಗಳಲ್ಲಿ ಭೂಮಿ ಖರೀದಿಸುವವರಿಗೆ ಖುಲಾಯಿಸಲಿದೆ ಅದೃಷ್ಟ; ಕಾರಣ ಇಲ್ಲಿದೆ ತಿಳಿಯಿರಿ

Property Price: ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಿದಂತೆಲ್ಲ ಬೆಂಗಳೂರು ವಿಸ್ತರಣೆ ಆಗುತ್ತಲೇ ಇದೆ. ಅಲ್ಲದೆ ನಗರದ ಸಮೀಪದ ಕೆಲವು ಪ್ರದೇಗಳಲ್ಲಿ ಭೂಮಿ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲೂ ಬೆಂಗಳೂರು-ಮೈಸೂರು ಹೆದ್ದಾರಿ, ಪ್ರಸ್ತಾವಿತ ಹೊಸ ವಿಮಾನ ನಿಲ್ದಾಣ ನಿರ್ಮಾಣ ಅಂತಲೂ ಹೇಳಿದರೆ ತಪ್ಪಾಗಲಾರದು. ಯಾಕೆ ಗೊತ್ತಾ? ಇಲ್ಲಿದೆ ನೋಡಿ ನೀವು ಗಮನಿಸಬೇಕಾದ ಪ್ರಮುಖ ಮಾಹಿತಿ.

ರಾಜ್ಯ ರಾಜಧಾನಿ ಬೆಂಗಳೂರಿನ ಮೈಸೂರು ರಸ್ತೆಗೆ ಹತ್ತಿರದಲ್ಲಿರುವ ದೊಡ್ಡಆಲದಮರ ಸಮೀಪದ ಪ್ರದೇಶಗಳಲ್ಲಿ ಭೂಮಿ ಖರೀದಿ ಮಾಡಬೇಕೆಂದರೆ ಸುಲಭದ ಮಾತಲ್ಲ. ಅಷ್ಟರ ಮಟ್ಟಿಗೆ ಈ ಪ್ರದೇಶದಲ್ಲಿ ಭೂಮಿಗೆ ಬೇಡಿಕೆ ಹೆಚ್ಚಿದ್ದು, ಈ ಹಿನ್ನೆಲೆ ಬೆಲೆ ದುಪ್ಪಟ್ಟಾಗುತ್ತಲೇ ಇದೆ. ಈ ಪ್ರದೇಶದಲ್ಲಿರುವ ಉತ್ತಮ ಸೌಲಭ್ಯಗಳಿರುವ ಕಾರಣ ಜನರು ಇಲ್ಲಿನ ವಸತಿ ಪ್ರಾಪರ್ಟಿ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ ಎಂದು ದಿ ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.

2nd Airport Land prices increased in Bengaluru s these Parts Know details

ಬೆಂಗಳೂರು ದಕ್ಷಿಣ ತಾಲೂಕಿನ ಕೇತೋಹಳ್ಳಿಯಲ್ಲಿರುವ ಬೃಹತ್‌ ಆಲದಮರದಿಂದಾಗಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದ ಈ ಪ್ರದೇಶ ಈಗ ರಿಯಲ್‌ ಎಸ್ಟೇಟ್‌ ಹಬ್‌ ಆಗಿಯೂ ಗುರುತಿಸಿಕೊಂಡಿದೆ. ದೊಡ್ಡಆಲದಮರ ಸಮೀಪದ ಪ್ರದೇಶದಲ್ಲಿರುವ ನಿವೇಶನಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ದುಪ್ಪಟ್ಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮೈಸೂರು-ಬೆಂಗಳೂರು ಹೆದ್ದಾರಿ: ಅಲ್ಲದೆ ದೊಡ್ಡಆಲದಮರವು ಮೈಸೂರು ರಸ್ತೆಗೆ ಸಮೀಪದಲ್ಲಿರುವುದು ಕೂಡ ಗ್ರಾಹಕರಿಗೆ ಪ್ಲಸ್‌ ಪಾಯಿಂಟ್‌ ಆಗಿದ ಎಂದರೆ ತಪ್ಪಾಗಲಾರದು. ಆದ್ದರಿಂದ ಇಲ್ಲಿ ನಿವೇಶನಗಳ ದರ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಬೆಂಗಳೂರು-ಮೈಸೂರು ದಶಪಥ ಯೋಜನೆಯೂ ಈ ಪ್ರದೇಶದಲ್ಲಿ ಭೂಮಿ ಬೆಲೆ ಬೇಡಿಕೆ ಹೆಚ್ಚಲು ಪ್ರಮುಖ ಕಾರಣವಾಗಿದೆ.

ನೇರಳೆ ಮೆಟ್ರೋ ಮಾರ್ಗ: ನೇರಳೆ ಮೆಟ್ರೋ ಮಾರ್ಗ ಸಹ ಚಲ್ಲಘಟ್ಟದವರೆಗೆ ವಿಸ್ತರಣೆ ಆಗಿರುವುದರಿಂದ ಈ ಭಾಗದ ಭೂಮಿ ದರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ದೊಡ್ಡಆಲದಮರ ಸುತ್ತಮುತ್ತಲಿನ ಪ್ರದೇಶ ಈಗ ತುಂಬಾ ಅಬಿವೃದ್ಧಿ ಕಂಡಿದ್ದು, ಬೃಹತ್‌ ರೆಸಾರ್ಟ್‌, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಮತ್ತು ಆಸ್ಪತ್ರೆಗಳು ಇಲ್ಲಿಗೆ ಹತ್ತಿರದಲ್ಲಿವೆ. ಆದ್ದರಿಂದ ಇಲ್ಲಿನ ನಿವೇಶನಗಳ ದರ ಏರಿಕೆಯಾಗುತ್ತಲಿದೆ. ಅಲ್ಲದೆ ಎಲ್ಲಾ ರೀತಿಯಲ್ಲೂಅಭಿವೃದ್ಧಿ ಹೊಂದಿರುವ ದೊಡ್ಡಆಲದಮರ ರಸ್ತೆಯಲ್ಲಿರುವ ನಿವೇಶನಗಳ ಖರೀದಿ ಆಸ್ತಿ ಹೂಡಿಕೆದಾರರಿಗೆ ಬೃಹತ್‌ ಮಟ್ಟದಲ್ಲಿ ಲಾಭ ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ.

ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಮೈಸೂರು ರಸ್ತೆಗೆ ಸಮೀಪದಲ್ಲಿರುವ ದೊಡ್ಡಆಲದಮರ ಪ್ರದೇಶದಲ್ಲಿ ಇದೀಗ ರಿಯಾಲ್ ಎಸ್ಟೇಟ್‌ ಚಟುವಟಿಕೆಗಳು ನಡೆಯಲು ಇರುವ ಮತ್ತೊಂದು ಪ್ರಮುಖ ಕಾರಣ ಎಂದರೆ ಕುಣಿಗಲ್‌ ಸಮೀಪ ಪ್ರಸ್ತಾವಿತ ವಿಮಾನ ನಿಲ್ದಾಣ ಯೋಜನೆಯಾಗಿದೆ. ಈ ಪ್ರಸ್ತಾವನೆ ಬಂದ ನಂತರ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬಂದಂತಾಗಿದೆ.

ಕುಣಿಗಲ್‌ನಲ್ಲಿ ವಿಮಾನ ನಿಲ್ದಾಣ ಆದರೆ, ನೆಲಮಂಗಲಕ್ಕೆ ಮಾತ್ರವಲ್ಲದೆ, ಮಾಗಡಿ ರೋಡ್‌ ಮೂಲಕ ದೊಡ್ಡಆಲದಮರ ಪ್ರದೇಶಕ್ಕೂ ಹತ್ತಿರ ಆಗುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿ ಭೂಮಿ ಬೆಲೆ ಮುಂದಿನ ದಿನಗಳಲ್ಲಿ ದುಪ್ಪಟ್ಟಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+