ಮಾರ್ಚ್ ಒಳಗೆ ಬೆಂಗಳೂರಿನ 27 ಕೆರೆಗಳಿಗೆ ಪುನರುಜ್ಜೀವನ
ಬೆಂಗಳೂರು, ಜನವರಿ 4: ಮಾರ್ಚ್ 2019ರೊಳಗೆ ಬೆಂಗಳೂರಿನಲ್ಲಿರುವ 27 ಕೆರೆಗಳು ಮರುಜೀವ ಪಡೆಯಲಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಲ್ಲಿರುವ 167 ಕೆರೆಗಳ ಪೈಕಿ, 65 ಕೆರೆಗಳಿಗೆ ಮರುಜೀವ ನೀಡಿದ್ದು, ಮಾರ್ಚ್ ಒಳಗೆ ಇನ್ನುಳಿದ 27 ಕೆರೆಗಳಿಗೆ ಪುನರುಜ್ಜೀವನ ದೊರೆಯಲಿದೆ. ಮುಂದಿನ ವರ್ಷದಲ್ಲಿ 15 ಕೆರೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಒಟ್ಟು 92 ಕೆರೆಗಳನ್ನು ಈ ವರ್ಷ ಸ್ವಚ್ಛಗೊಳಿಸಲಾಗುತ್ತದೆ.

92 ಕೆರೆಗಳ ಪುನರುಜ್ಜೀವನಗೊಳಿಸಲು ಹತ್ತು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಪಾಲಿಕೆಯು 280 ಕೋಟಿ ರೂ ಮೀಸಲಿಟ್ಟಿದೆ. ಪ್ರತಿ ಕೆರೆಗೂ ಸುಮಾರು 3 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಕೆರೆಯ ಸುತ್ತಮುತ್ತ ಮಳೆನೀರು ಕೊಯ್ಲು ಸೇರಿದಂತೆ ಅನೇಕ ಸಸಿಗಳನ್ನು ನೆಡುವ ಕಾರ್ಯವೂ ಪ್ರಗತಿಯಲ್ಲಿದೆ.












Click it and Unblock the Notifications