2022 ರಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ ನೋಡಿದರೆ ಅಚ್ಚರಿಯಾಗುವುದು ಖಂಡಿತ!
ಬೆಂಗಳೂರು ವಿಮಾನ ನಿಲ್ದಾಣವು 2022 ರಲ್ಲಿ 27.5 ಮಿಲಿಯನ್ ಪ್ರಯಾಣಿಕರ ಪ್ರಯಾಣವನ್ನು ದಾಖಲಿಸಿದ್ದು, ದೆಹಲಿ, ಕೋಲ್ಕತ್ತಾ, ದುಬೈ ಪ್ರಮುಖ ಸ್ಥಳಗಳಲ್ಲಿ ಸೇರಿವೆ.
ಬೆಂಗಳೂರು, ಫೆಬ್ರವರಿ. 07: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹೊಸ ದಾಖಲೆ ಮಾಡಿದೆ. 2022 ರಲ್ಲಿ ಇಲ್ಲಿಂದ ಬರೋಬ್ಬರಿ 27.5 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಹೌದು, 2019 ರ ವರ್ಷಕ್ಕೆ ಹೋಲಿಸಿದರೆ 2022 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಶೇಕಡಾ 82 ರಷ್ಟು ಪ್ರಯಾಣಿಕರ ದಟ್ಟಣೆಯನ್ನು ದಾಖಲಿಸಿದೆ.
2022 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಒಟ್ಟು 2.75 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ವಿಮಾನ ನಿಲ್ದಾಣವು ದೇಶೀಯ ವಲಯದಲ್ಲಿ 85 ಪ್ರತಿಶತದಷ್ಟು ಚೇತರಿಕೆ ಕಂಡಿದ್ದು, ಅಂತಾರಾಷ್ಟ್ರೀಯ ವಲಯದಲ್ಲಿ 65 ಪ್ರತಿಶತದಷ್ಟು ಚೇತರಿಕೆ ಕಂಡಿದೆ.

2022 ರಲ್ಲಿ ಸುಮಾರು 24.36 ಮಿಲಿಯನ್ ದೇಶೀಯ ಪ್ರಯಾಣಿಕರು ಮತ್ತು 3.14 ಮಿಲಿಯನ್ ಅಂತರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಡಿಸೆಂಬರ್ 23, 2022 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಯಾಣಿಕರ ಸಂಖ್ಯೆ ಅಂದರೆ, 1,07,825 ಮಂದಿ ಪ್ರಯಾಣಿಸಿ ದಾಖಲೆ ಬರೆದಿದ್ದಾರೆ.
ಇನ್ನು 2022 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿ, ಮುಂಬೈ, ಕೋಲ್ಕತ್ತಾ, ಕೊಚ್ಚಿ ಮತ್ತು ಹೈದರಾಬಾದ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರಯಾಣ ಮಾಡಿದ್ದಾರೆ. ಈ ನಗರಗಳು ದೇಶೀಯ ಸಂಚಾರಕ್ಕೆ ಸರಿಸುಮಾರು ಶೇಕಡಾ 40 ರಷ್ಟು ಕೊಡುಗೆ ನೀಡಿವೆ. ದುಬೈ, ಮಾಲೆ, ಸಿಂಗಾಪುರ್, ದೋಹಾ ಮತ್ತು ಅಬುಧಾಬಿಗಳು ಅಂತರರಾಷ್ಟ್ರೀಯ ಸಂಚಾರಕ್ಕೆ ಸರಿಸುಮಾರು 47 ಪ್ರತಿಶತದಷ್ಟು ಕೊಡುಗೆ ನೀಡುವ ಅಗ್ರ ಅಂತರರಾಷ್ಟ್ರೀಯ ಮಾರ್ಗಗಳಾಗಿ ಹೊರಹೊಮ್ಮಿವೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವರ್ಷಾಂತ್ಯದ ರಜಾ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದೆ ಎಂದು ಮಂಗಳವಾರ ವಿಮಾನ ನಿಲ್ದಾಣದ ಅಧಿಕಾರಿಗಳು ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಡಿಸೆಂಬರ್ 2022 ರಲ್ಲಿ ಸುಮಾರು 3.13 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇದರಲ್ಲಿ 2.74 ಮಿಲಿಯನ್ ಜನರು ಭಾರತೀಯರಾಗಿದ್ದಾರೆ.

ಏರ್‌ಲೈನ್ಸ್‌ನ ಗಮನಾರ್ಹ ಬೆಳವಣಿಗೆಯು 2022 ರ ದಾಖಲೆಯ ಪ್ರಯಾಣಕ್ಕೆ ಒಂದು ಕಾರಣ. 100 ಕ್ಕೂ ಹೆಚ್ಚು ದೈನಂದಿನ ನಿರ್ಗಮನಗಳೊಂದಿಗೆ, ವಿಮಾನ ನಿಲ್ದಾಣದಲ್ಲಿ ವರ್ಗಾವಣೆ ಪ್ರಯಾಣಿಕರ ಪಾಲು ಶೇಕಡಾ 15 ಕ್ಕೆ ಹೆಚ್ಚಾಗಿದೆ. 14 ದೇಶೀಯ ಮತ್ತು ವಿದೇಶಿ ಸರಕು ವಾಹಕಗಳು 41 ನೇರ ಮಾರ್ಗಗಳಲ್ಲಿ ಕಾರ್ಯನಿರವಹಿಸುತ್ತಿದೆ. 2022 ರಲ್ಲಿ ಸರಕು ಪ್ರಮಾಣವು 412,668 MT ಆಗಿದ್ದು, ಇದು ವಿಮಾನ ನಿಲ್ದಾಣದ ಪ್ರಾರಂಭದ ದಿನದಿಂದ ನಿರ್ವಹಿಸಲಾದ ಅತ್ಯಧಿಕ ಪ್ರಮಾಣದ ಸರಕಾಗಿದೆ. ಈ ಮೂಲಕ 2022 ರಲ್ಲಿ ದೇಶೀಯ ಸರಕು ಸಾಗಣೆಯಲ್ಲಿ ಶೇಕಡಾ 8 ರಷ್ಟು ಹೆಚ್ಚಳ ದಾಖಲಾಗಿದೆ.












Click it and Unblock the Notifications