Bengaluru Bus Fire: ಬೆಂಗಳೂರಲ್ಲಿ ಮತ್ತೊಂದು ಬೆಂಕಿ ಅವಘಡ, 21 ಬಸ್ ಭಸ್ಮ
Bengaluru Bus Fire: ಬೆಂಗಳೂರು, ಅಕ್ಟೋಬರ್ 30: ಬೆಂಗಳೂರು ಸೋಮವಾರ ಮತ್ತೊಂದು ಬೃಹತ್ ಬೆಂಕಿ ಅವಘಡಕ್ಕೆ ಸಾಕ್ಷಿಯಾಗಿದೆ. ಪಬ್, ಪಟಾಕಿ ಗೋದಾಮಿನಲ್ಲಿ ಬೆಂಕಿ ದುರಂತ ಬೆನ್ನಲ್ಲೆ ಇದೀಗ ಬಸ್‌ಗಳಿಗೆ ಬೆಂಕಿ ಬಿದ್ದಿದೆ. ಒಟ್ಟು 21 ಖಾಸಗಿ ಬಸ್‌ಗಳು ಬೆಂಕಿಗೆ ಆಹುತಿ ಆಗಿವೆ.
ಬೆಂಗಳೂರಿನ ವೀರಭದ್ರ ನಗರದಲ್ಲಿ ಖಾಸಗಿ ಬಸ್‌ಗಳನ್ನು ನಿಲ್ಲಿಸಲಾಗಿದೆ. ಈ ಬಸ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪಕ್ಕದಲ್ಲಿಯೇ ಶೆಡ್ ಗಳಿದ್ದು, ಗ್ಯಾರೇಜ್‌ನಲ್ಲಿ ಉಂಟಾದ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಮೊದಲು ಒಂದು ಬಸ್‌ಗೆ ಹೊತ್ತಿಕೊಂಡಿದೆ. ನಂತರ ಎರಡು ಬಸ್‌ಗಳಿಗೆ ಬೆಂಕಿ ತಗುಲಿದೆ. ಹೀಗೆ ಕೆಲವೇ ಕ್ಷಣಗಳಲ್ಲಿ ಬೆಂಕಿ ಜ್ವಾಲೆ ಹತ್ತಕ್ಕೂ ಹೆಚ್ಚು ಬಸ್‌ಗಳಿಗೆ ಚಾಚಿಕೊಂಡಿತು.

ನೋಡು ನೋಡುತ್ತಿದ್ದಂತೆ ಆಗಸದೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚಿಕೊಂಡಿತು. ಸ್ಥಳದಲ್ಲೆಲ್ಲ ದಟ್ಟ ಹೊಗೆ ಆವರಿಸಿಕೊಂಡಿದೆ. ಸ್ಥಳೀಯರು ಹತ್ತಿರದ ಪೊಲೀಸ್ ಠಾಣೆ ಮತ್ತು ಬಿಬಿಎಂಪಿಗೆ ಮಾಹಿತಿ ತಿಳಿಸಲಾಗಿದೆ. ಸದ್ಯ ಸ್ಥಳಕ್ಕೆ ಎರಡು ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆ ಮಾಡಿದೆ.
ಈ ಗ್ಯಾರೇಜ್ ನಲ್ಲಿ 40 ಮಂದಿ ಕೆಲಸ ಮಾಡುತ್ತಿದ್ದರು. ಕೆಲವು ಬಸ್‌ಗಳಿಗೆ ಹಾನಿ ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.
ಗ್ಯಾರೇಜ್ ನಲ್ಲಿ ಬೆಂಕಿ ಅವಘಡ?
ಎಸ್ ವಿ ಕೋಚ್ ಎಂಬ ಹೆಸರಿನಲ್ಲಿ ಗ್ಯಾರೇಜ್ ನಡೆಸಲಾಗುತ್ತಿತ್ತು. ಶ್ರೀನಿವಾಸ್ ಎಂಬುವರು ಹಲವು ವರ್ಷಗಳಿಂದ ಬಸ್ ಗಳ ಚಾರ್ಸಿಗೆ ಬಾಡಿ ಪಿಟ್ ಮಾಡುವ ಕೆಲಸ ಮಾಡುತ್ತಿದ್ದರು. ಕಟ್ಟಿಂಗ್ ಹಾಗೂ ವೆಲ್ಡಿಂಗ್ ಮಷಿನ್ ಗಳನ್ನು ಬಳಸಿ ಕೆಲಸ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಖಾಸಗಿ ಬಸ್‌ಗಳಿಗೆ ಟಿಂಕರಿಂಗ್, ಬಾಡಿ ರಿಪೇರಿ ಮಾಡಿಕೊಡುವ ಕೆಲಸ ಈ ಬೃಹತ್ ಗ್ಯಾರೇಜಿನಲ್ಲಿ ನಡೆಯುತ್ತಿತ್ತು. ಇಲ್ಲಿ ಕೆಲಸಗಾರರು ಇಲ್ಲಿಯೇ ಇದ್ದರು. ಈ ವೇಳೆ ನಡೆದ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ತಗುಲಿದೆ. 21 ಬಸ್ ಸುಟ್ಟಿವೆ. ಸುಮಾರು 40 ಬಸ್‌ಗಳಿಗೆ ಘಟನೆಯಲ್ಲಿ ಹಾನಿ ಆಗಿದೆ. ಇದೆಲ್ಲ ನೋಡಿದರೆ ಯಾವುದೇ ಸುರಕ್ಷತಾ ಕ್ರಮಗಳು ಇಲ್ಲಿ ಕೈಗೊಂಡಿರಲಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬಸ್ ರಿಪೇರಿಗೆ ಬಿಟ್ಟ ಮಾಲೀಕರ ಸ್ಥಿತಿ ಹೇಳತೀರದಾಗಿದೆ.
ಇತ್ತೀಚೆಗೆ ಕೋರಮಂಗಲದ ಪಬ್‌ವೊಂದಕ್ಕೆ ಬೆಂಕಿ ಬಿದ್ದಿತ್ತು. ಅದೇ ಕಟ್ಟದಿಂದ ಕೆಳಗೆ ವ್ಯಕ್ತಿ ಜಿಗಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಅಗ್ನಿ ಅವಗಢ ನಡೆದಿದೆ.












Click it and Unblock the Notifications