2025ರಲ್ಲಿ ಬೆಂಗಳೂರು ಇನ್ನಷ್ಟು ಅಭಿವೃದ್ಧಿ: ಹೊಸ ಮೆಟ್ರೋ, ರೈಲು ಯೋಜನೆಗಳ ವಿವರ
2025 Bengaluru development projects: ಹೊಸ ವರ್ಷ 2025 ಬೆಂಗಳೂರಿನ ಪಾಲಿಗೂ ವಿಶೇಷವಾಗಿದೆ. ಬೆಂಗಳೂರಿನಲ್ಲಿ ಈ ವರ್ಷ ಮೆಟ್ರೋ ಸೇವೆ ವಿಸ್ತರಣೆ ಸೇರಿದಂತೆ ಹಲವು ಪ್ರಮುಖ ಪ್ರಾಜೆಕ್ಟ್‌ಗಳನ್ನು ಹಾಕಿಕೊಳ್ಳಲಾಗಿದೆ. ಈ ಪ್ರಾಜೆಕ್ಟ್‌ಗಳಿಂದ ಬೆಂಗಳೂರಿನಲ್ಲಿ ಅಭಿವೃದ್ಧಿಯ ಪರ್ವವೇ ಶುರುವಾಗಲಿದೆ. ಟ್ರಾಫಿಕ್‌ಜಾಮ್ ಸಮಸ್ಯೆ ಕಡಿಮೆ ಆಗಲಿದೆ.
ಅಲ್ಲದೆ ಬೆಂಗಳೂರಿಗರ ಬಹುದಿನಗಳ ಕನಸಾಗಿರುವ ಉಪ ನಗರ ರೈಲು ಯೋಜನೆಯೂ ವೇಗ ಪಡೆದುಕೊಳ್ಳುತ್ತಿದೆ. ಇನ್ನು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ಪ್ಲಾನ್ ಹಾಕಿಕೊಳ್ಳಲಾಗಿದೆ. ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಅಭಿವೃದ್ಧಿಯ ಪರ್ವವೇ ಆಗಲಿದೆ. ಬೆಂಗಳೂರಿನಲ್ಲಿ 2025ರಲ್ಲಿ ನಡೆಯಲಿರುವ ಪ್ರಮುಖ ಪ್ರಾಜೆಕ್ಟ್ ಹಾಗೂ ಯೋಜನೆಗಳು ಯಾವುದು ಎನ್ನುವ ವಿವರ ಇಲ್ಲಿದೆ.

2025ರಲ್ಲಿ ಬೆಂಗಳೂರಿನಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವುದಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಪ್ಲಾನ್ ಮಾಡಿಕೊಂಡಿವೆ. ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆ ಆಗಲಿದೆ. ಇದು ಬೆಂಗಳೂರಿಗರ ಹಲವು ವರ್ಷಗಳ ಕನಸಾಗಿದೆ.
1. ಮೆಟ್ರೋ ಸೇವೆ ವಿಸ್ತರಣೆ: ಬೆಂಗಳೂರಿನಲ್ಲಿ ಮೆಟ್ರೋ ಸೇವೆ ವಿಸ್ತರಣೆ ಆಗಲಿದೆ. ಮೆಟ್ರೋ ಯೆಲ್ಲೋಲೈನ್ ವಿಸ್ತರಣೆ ಆಗಲಿದೆ. 18 ಕಿ.ಮೀ ಹಳದಿ ಮಾರ್ಗ (ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ) ವಿಸ್ತರಣೆ ಆಗಲಿದೆ. ಅಲ್ಲದೆ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಮೆಟ್ರೋದನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೂ ಪ್ಲಾನ್ ಮಾಡಿಕೊಳ್ಳಲಾಗಿದೆ. ನಮ್ಮ ಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ, ಮೆಟ್ರೋ ಬೋಗಿಗಳ ಸಂಖ್ಯೆ ಹೆಚ್ಚಳ ಮಾಡುವುದಕ್ಕೆ ನಿರ್ಧರಿಸಲಾಗಿದೆ.
2. ಉಪನಗರ ರೈಲು ಯೋಜನೆ: ಬೆಂಗಳೂರಿನಲ್ಲಿ ಉಪ ನಗರ ರೈಲು ಯೋಜನೆಯನ್ನು ಅಭಿವೃದ್ಧಿಪಡಿಸಬೇಕು ಎಂದು ದಶಕಗಳಿಂದ ಹೋರಾಟ ನಡೆದಿದೆ. ಇದೀಗ ಬೆಂಗಳೂರು ಉಪನಗರ ರೈಲು ಯೋಜನೆಯು 2025ರ ವೇಳೆಗೆ ಕಾರಿಡಾರ್ 2 (ಚಿಕ್ಕಬಾಣಾವರದಿಂದ ಯಶವಂತಪುರ)ರ 7.4 ಕಿ.ಮೀ ಉದ್ದದ ಕಾರ್ಯಾಚರಣೆ ಭಾಗಶಃ ಪೂರ್ಣಗೊಳ್ಳಲಿದೆ. ಈ ಮೂಲಕ ಬೆಂಗಳೂರು ಉಪ ನಗರ ರೈಲು ಯೋಜನೆ ವೇಗ ಪಡೆದುಕೊಳ್ಳಲಿದೆ.
3. ರೈಲ್ವೆ ಮೂಲಸೌಕರ್ಯ: ರೈಲ್ವೆ ಇಲಾಖೆಯಿಂದ ಬೆಂಗಳೂರಿನಲ್ಲಿ 2025ನೇ ಸಾಲಿನಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ಯೋಜನೆಗಳಲ್ಲಿ ಈಗಾಗಲೇ ಹಲವು ಪ್ರಮುಖ ಯೋಜನೆಗಳು ಬಹುತೇಕ ಮುಕ್ತಾಯ ಹಂತದಲ್ಲಿ ಇದ್ದರೆ. ಇನ್ನೂ ಕೆಲವು ಯೋಜನೆಗಳು ಪ್ರಗತಿಯ ಹಂತದಲ್ಲಿ ಇವೆ.
* ಪಣತ್ತೂರು ರೈಲ್ವೆ ಅಂಡರ್‌ಪಾಸ್ (RUB) ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಲಿದೆ. ಇದರಿಂದ ಈ ಭಾಗದ ವಾಹನ ಸವಾರರಿಗೆ ಅನುಕೂಲ ಆಗಲಿದೆ.
* ಕಾರ್ಮೆಲರಾಮ್ ರೈಲು ಮೇಲ್ಸೇತುವೆ (ಓವರ್‌ಬ್ರಿಡ್ಜ್ ROB) ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ.
* ಬೆಂಗಳೂರು ಕಂಟೋನ್ಮೆಂಟ್ - ವೈಟ್‌ಫೀಲ್ಡ್ ಚತುಷ್ಪಥ ಮಾರ್ಗ ಅಭಿವೃದ್ಧಿ ಆಗಲಿದೆ. ಇದರಿಂದ ಇನ್ನಷ್ಟು ರೈಲು ಸೇವೆಗಳು ಸಿಗಲಿವೆ.
* ಹೊಸೂರು - ಸೇಲಂ ಮತ್ತು ಬೈಯ್ಯಪ್ಪನಹಳ್ಳಿ - ಹೊಸೂರು ಮಾರ್ಗದಲ್ಲಿ ಎರಡು ರೈಲು ಮಾರ್ಗ ಪೂರ್ಣಗೊಳ್ಳಲಿದೆ.
* ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ತಪ್ಪಿಸುವ ಉದ್ದೇಶದಿಂದ ಬೆಂಗಳೂರಿನ ಸುತ್ತ 287 ಕಿ.ಮೀ ಉದ್ದದ ವೃತ್ತಾಕಾರದ ರೈಲು ಜಾಲ ನಿರ್ಮಾಣವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ 2025ನೇ ಸಾಲಿನಲ್ಲಿ ಡಿಪಿಆರ್ (ಯೋಜನೆಗೆ ಸಂಬಂಧಿಸಿದ ನಕ್ಷೆ) ಸಿದ್ಧವಾಗಲಿದೆ.












Click it and Unblock the Notifications