Aero India Show 2025: ಬೆಂಗಳೂರು ಏರ್ ಶೋಗೆ ಬಿಎಂಟಿಸಿಯಿಂದ ಗುಡ್‌ನ್ಯೂಸ್!
Aero India Show 2025: ಬೆಂಗಳೂರಿನ ಏರ್ ಶೋಗೆ ಕ್ಷಣಗಣನೆ ಪ್ರಾರಂಭವಾಗಿದೆ. ಬೆಂಗಳೂರಿನ ಯಲಹಂಕದಲ್ಲಿ ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಏರ್ ಶೋ ನಡೆಯಲಿದೆ. ಈಗಾಗಲೇ ಏರ್ ಶೋಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಕ್ಷಣಾ ಇಲಾಖೆಯು ಈ ಏರ್ ಶೋವನ್ನು ಆಯೋಜಿಸುತ್ತಿದ್ದು.
ಬೃಹತ್ ಬೆಂಗಳೂರು ಮಾಹನಗರ ಪಾಲಿಕೆ ಹಾಗೂ ಬಿಎಂಟಿಸಿ ಇದಕ್ಕೆ ಕೈಜೋಡಿಸಿವೆ. ಬಿಬಿಎಂಪಿ ಯಲಹಂಕ ವಲಯದ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಸಹಕಾರ ನೀಡಿದ್ದಾರೆ. ಇನ್ನು ಬಿಎಂಟಿಸಿಯು ಏರ್ ಶೋ ಹಿನ್ನೆಲೆಯಲ್ಲಿ ಗುಡ್‌ನ್ಯೂಸ್ ಕೊಟ್ಟಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಏರ್ ಶೋ ನಡೆಯುತ್ತದೆ. ಈ ಬಾರಿ ಏರ್ ಶೋ ಹಲವು ಕಾರಣಕ್ಕೆ ವಿಶೇಷವಾಗಿದೆ. ಈ ಹಿಂದೆಗಿಂತಲೂ ಬಿಬಿಎಂಪಿ ಈ ಬಾರಿ ಹಲವು ಸುರಕ್ಷತಾ ಕ್ರಮಗಳನ್ನು ಕಳೆದ ಮೂರು ತಿಂಗಳಿನಿಂದಲೂ ತೆಗೆದುಕೊಂಡಿದೆ. ಈ ಭಾಗದಲ್ಲಿ ಕಾಮಗಾರಿಗಳಿಗೆ ಮಾರ್ಗಸೂಚಿ, ಮಾಂಸ ಮಾರಾಟ ನಿಷೇಧ ಹಾಗೂ ಮೆಟ್ರೋ ಕಾಮಗಾರಿಗೆ ತಡೆಯೊಡ್ಡುವುದು ಸೇರುವುದು ಸೇರಿದಂತೆ ಹಲವು ಸುಧಾರಣೆ ಕ್ರಮಗಳನ್ನು ತೆಗೆದುಕೊಂಡಿದೆ.
ಈ ಬಾರಿ ಏರ್‌ಶೋನಲ್ಲಿ ಪ್ರೇಕ್ಷಕರಿಗೆ ನೆರವಾಗುವ ಉದ್ದೇಶದಿಂದ ಕೆಲವೊಂದು ಪ್ರಮುಖ ನಿರ್ಧಾರ ತೆಗೆದುಕೊಂಡು ಮೂಲಸೌಕರ್ಯ ಕಲ್ಪಿಸಿದೆ. ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇದೀಗ ಬಿಎಂಟಿಸಿ ಸಹ ಗುಡ್‌ನ್ಯೂಸ್ ಕೊಟ್ಟಿದೆ. ನೀವು ಬೆಂಗಳೂರಿನ ಏರ್ ಶೋ ನೋಡುವುದಕ್ಕೆ ಬಿಎಂಟಿಸಿ ಬಸ್‌ನಲ್ಲೂ ಹೋಗಬಹುದಾಗಿದೆ.
ಏರ್ ಶೋಗೆ ಬಿಎಂಟಿಸಿ ಗುಡ್‌ನ್ಯೂಸ್: ಬೆಂಗಳೂರಿನ ಏರ್ ಶೋಗೆ ಬಿಎಂಟಿಸಿ ಕೈ ಜೋಡಿಸಿದೆ. ಏರ್ಶೋಗಾಗಿ ಬಿಎಂಟಿಸಿ ವಿಶೇಷ ಸೇವೆ ನೀಡಲು ಮುಂದಾಗಿದೆ. ನಗರದ ಪ್ರಮುಖ ಬಸ್ ನಿಲ್ದಾಣದಿಂದ ಏರ್ ಶೋಗೆ ನೇರ ಬಸ್ ಸೇವೆಯನ್ನು ಕಲ್ಪಿಸಿದೆ. ಅಲ್ಲದೆ ನಿಮ್ಮ ಬಳಿ ಈಗಾಗಲೇ ಏರ್ಶೋ ಪಾಸ್ ಇದ್ದರೆ ಉಚಿತವಾಗಿ ಸಹ ನೀವು ಪ್ರಯಾಣ ಮಾಡಲು ಅವಕಾಶ ಇದೆ. ಈ ರೀತಿ ಪ್ರಯಾಣ ಮಾಡುವಾಗ ಏರ್ ಶೋ ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ.
ಬೆಂಗಳೂರಿನ ಈ ಭಾಗದಿಂದ ಬಿಎಂಟಿಸಿ ಸೇವೆ: ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಏರ್ ಶೋ ನಡೆಯಲಿದೆ. ಇನ್ನು ಬಿಎಂಟಿಸಿ ಫ್ರೀ ಬಸ್ ಸೇವೆಯು ಫೆಬ್ರವರಿ 11ರಿಂದ 14ರವರೆಗೆ ಇರಲಿದೆ. ಜಿಕೆವಿಕೆ, ಮೆಜೆಸ್ಟಿಕ್, ಹೆಬ್ಬಾಳ, ಕೋರಮಂಗಲ, ಶಿವಾಜಿನಗರ, ಬನಶಂಕರಿ, ವಿಜಯನಗರ, ಕೆಂಗೇರಿ, ಎಲೆಕ್ಟ್ರಾನಿಕ್ ಸಿಟಿ, ಒರಿಯಾನ್ ಮಾಲ್ ಹಾಗೂ ಐಟಪಿಎಲ್ನಿಂದ ಏರ್ಶೋಗೆ ಬಸ್ ಸೇವೆ ಇರಲಿದೆ.
ಹೂಡಿಕೆಗೆ ಬಂಪರ್: ಇನ್ನು ಈ ಏರ್ ಶೋದಲ್ಲಿ ಸಾವಿರಾರು ಜನ ಬರುವ ಸಾಧ್ಯತೆ ಇದೆ. ಹೂಡಿಕೆ ಸಂಬಂಧಿಸಿದಂತೆ ಚರ್ಚೆಗಳು ಹಾಗೂ ಹೂಡಿಕೆ. ದೇಶ - ವಿದೇಶದ ವಿಮಾನಗಳು ಬರಲಿವೆ. ಬಾನಂಗಳದಲ್ಲಿ ವಿಮಾನಗಳು ಹಾರಾಡುವುದನ್ನು ನೀವು ನೋಡಬಹುದಾಗಿದೆ. ಯುದ್ಧ ವಿಮಾನಗಳ ಸಹಾಸ ಹಾರಾಟವೂ ಇರಲಿದೆ. ಈ ಅವಕಾಶವನ್ನು ಮಿಸ್ ಮಾಡದೆ ಬಳಸಿಕೊಳ್ಳಿ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications