Bengaluru Police: ಬೆಂಗಳೂರಿಗೆ ಹೆಚ್ಚುವರಿ 2000 ಪೋಲಿಸರನ್ನ ನಿಯೋಜಿಸಿದ ರಾಜ್ಯ ಸರ್ಕಾರ
2000 ಪೊಲೀಸ್ ರ ನಿಯೋಜನೆಯಿಂದಾಗಿ ಹೆಚ್ಚಿನ ಅನುಕೂಲವಾಗಲಿದ್ದು, ಹೆಚ್ಚಿನ ಕಾರ್ಯಕ್ಷಮತೆಯಿಂದಾಗಿ ಬೆಂಗಳೂರಿನ ನಗರದಲ್ಲಿ ಇಲಾಖೆ ಕಾರ್ಯ ನಿರ್ವಹಿಸುತ್ತದೆ ಎಂದು ಪ್ರತಾಪ್ ರೆಡ್ಡಿ ಟ್ವೀಟರ್ ಮೂಲಕ ಹೇಳಿದ್ದಾರೆ.
ಬೆಂಗಳೂರು,ಫೆಬ್ರವರಿ20: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೆಂಗಳೂರಿನ ಪೊಲೀಸ್ ಇಲಾಖೆಯನ್ನ ಬಲ ಪಡಿಸುವ ನಿಟ್ಟಿನಲ್ಲಿ 2000 ಪೋಲಿಸರನ್ನು ಬೆಂಗಳೂರು ನಗರಕ್ಕೆ ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Thank you @CMofKarnataka @JnanendraAraga for 2000 additional manpower to @BlrCityPolice in #karnatakabudget2023 - A game changing 11% raise in Civil Police!
— Pratap Reddy, IPS ಪೊಲೀಸ್ ಆಯುಕ್ತರು, ಬೆಂಗಳೂರು ನಗರ (@CPBlr) February 19, 2023
Better woman safety, traffic management, cyber crime investigations & public order in #NammaBengaluru@DgpKarnataka
ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ನಿರ್ಣಯವನ್ನ ಕೈಗೊಂಡಿದ್ದು, ಸರ್ಕಾರದ ಈ ನಿರ್ಣಯಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಟ್ವೀಟರ್ ಮೂಲಕ ಧನ್ಯವಾದ ಹೇಳಿದ್ದಾರೆ.

2000 ಪೊಲೀಸ್ ರ ನಿಯೋಜನೆಯಿಂದಾಗಿ ಹೆಚ್ಚಿನ ಅನುಕೂಲವಾಗಲಿದ್ದು, ಹೆಚ್ಚಿನ ಕಾರ್ಯಕ್ಷಮತೆಯಿಂದಾಗಿ ಬೆಂಗಳೂರಿನ ನಗರದಲ್ಲಿ ಇಲಾಖೆ ಕಾರ್ಯ ನಿರ್ವಹಿಸುತ್ತದೆ ಎಂದು ಟ್ವೀಟರ್ ಮೂಲಕ ಹೇಳಿದ್ದಾರೆ.

ಬೆಂಗಳೂರು ನಗರಕ್ಕೆ 2000 ಪೊಲೀಸರನ್ನು ನಿಯೋಜನೆ ಮಾಡುವುದರಿಂದ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಶೇ 11% ಪ್ರತಿಶತದಷ್ಟು ಪೊಲೀಸ್ ಸಿಬ್ಬಂದಿ ಸಂಖ್ಯೆ ಏರಿಕೆಯಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಟ್ವೀಟರ್ ಮೂಲಕ ತಿಳಿಸಿದ್ದಾರೆ. ಇನ್ನೂ ಬೆಂಗಳೂರು ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರರ ಬಜೆಟ್ ನಲ್ಲಿ 20 ಪೊಲೀಸ್ ಠಾಣೆಗಳನ್ನ ತೆರೆಯಲು ಹಣ ಮೀಸಲಿಡಲಾಗಿದೆ.












Click it and Unblock the Notifications