ಬೆಂಗಳೂರಿನ ಪ್ರಮುಖ ಯೋಜನೆಗೆ 2,410 ಎಕರೆ ಭೂಸ್ವಾಧೀನ: ಈ ಭಾಗದ ಆಸ್ತಿದಾರರಿಗೆ ಸಂಕಷ್ಟ!
ಬೆಂಗಳೂರಿನ ಪ್ರಮುಖ ಯೋಜನೆಯೊಂದಕ್ಕೆ ಬರೋಬ್ಬರಿ 2,410 ಎಕರೆ ಭೂಸ್ವಾಧೀನ ಮಾಡಿಕೊಳ್ಳುವುದಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ. ಆದರೆ ಈ ಯೋಜನೆಯು ಕಳೆದ ಎರಡು ದಶಕಗಳಿಂದ ಅಂದರೆ ಬರೋಬ್ಬರಿ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಸುಮಾರು 20 ವರ್ಷಗಳಿಂದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ (ಬಿಬಿಸಿ) ತಲೆನೋವಾಗಿತ್ತು. ಆದರೆ ಇದೀಗ ಭೂಸ್ವಾಧೀನ ಪ್ರಕ್ರಿಯೆಗಳು ಜೋರಾಗಿದೆ. ಆದರೆ, ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನಿಗದಿ ಮಾಡಿರುವ ದರವು ತೀರ ಕಡಿಮೆ ಇದೆ ಎಂದು ಆಸ್ತಿದಾರರು ದೂರಿದ್ದಾರೆ.
ಬೆಂಗಳೂರಿನ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಹಾಗೂ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಗೊಂದಲಗಳು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಈ ಯೋಜನೆಗೆ ಭೂಮಿ ಬಿಟ್ವುದಕ್ಕೆ ಭೂಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಈ ಯೋಜನೆಗೆ ಭೂಮಾಲೀಕರು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಯೋಜನೆಯ 73 ಕಿ.ಮೀ ಉದ್ದದ ಯೋಜನೆಗೆ ಅಧಿಕೃತ ಅಧಿಸೂಚನೆ ನೀಡಿದೆ.

ಈ ಯೋಜನೆಯಲ್ಲಿ ಆಸ್ತಿದಾರರು ಆಸ್ತಿಯನ್ನು ಮಾರಾಟ ಮಾಡಲು, ಅಭಿವೃದ್ಧಿಪಡಿಸಲು ಅಥವಾ ವರ್ಗಾಯಿಸಲು ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ. ಇದು ಅವರ ಆರ್ಥಿಕ ಸಾಮರ್ಥ್ಯಕ್ಕೆ ಸಂಕಷ್ಟವನ್ನು ಸಹ ಎದುರಿಸುತ್ತಿದ್ದಾರೆ. ತಮ್ಮ ಭೂಮಿಯನ್ನು ಅಧಿಸೂಚನೆಗೆ ಒಳಪಡಿಸಿರುವುದರಿಂದ, ಮಾಲೀಕರು ತಮ್ಮ ಭೂಮಿಯನ್ನು ಅಭಿವೃದ್ಧಿಪಡಿಸಲು ಇರುವ ಎಲ್ಲಾ ಹಾಗೂ ಪ್ರಮುಖ ಅವಕಾಶಗಳನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಯೋಜನಾ ಪ್ರದೇಶದಲ್ಲಿ ಸುಮಾರು ಒಂದು ಎಕರೆ ಜಮೀನನ್ನು ಹೊಂದಿರುವ ಕಾಡುಗೋಡಿಯ ರೈತರು ನಮ್ಮ ಭೂಮಿಯನ್ನು ಅಧಿಸೂಚನೆ ಹೊರಡಿಸಿದಾಗಿನಿಂದ, 'ಪಹಣಿ' (ಭೂ ದಾಖಲೆ) ಅವರ ಹೆಸರಿನಲ್ಲಿ ಗುರುತಿಸಲಾಗಿದೆ. ಶಿಕ್ಷಣ ಅಥವಾ ಮದುವೆಯಂತಹ ಅಗತ್ಯಗಳಿಗಾಗಿ ನಾವು ಭೂಮಿಯನ್ನು / ಪ್ರಾಪರ್ಟಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಈ ಪ್ರಾಪರ್ಟಿಯನ್ನು ಯಾರಿಗೂ ವರ್ಗಾಯಿಸಲು ಸಹ ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು The New India Express ವರದಿ ಮಾಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಾರುಕಟ್ಟೆ ಮೌಲ್ಯದಲ್ಲಿ ಪರಿಹಾರವನ್ನು ನೀಡಬೇಕೆಂದು ಅಥವಾ ಕನಿಷ್ಠ ಮೆಟ್ರೋ ಭೂ ಸ್ವಾಧೀನಕ್ಕೆ ಪಾವತಿಸಿದ ದರಕ್ಕೆ ಹೊಂದಿಕೆಯಾಗುವಂತೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಸರ್ಕಾರಿ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ, ಕಳೆದ ವರ್ಷ ಈ ಪ್ರದೇಶದಲ್ಲಿ ಭೂಮಿಯ ಮಾರ್ಗಸೂಚಿ ಮೌಲ್ಯವು ತುಂಬಾ ಹೆಚ್ಚಾಗಿತ್ತು. ಆದರೆ ಈ ವರ್ಷ ಇದ್ದಕ್ಕಿದ್ದಂತೆ ಅದನ್ನು 2.25 ಕೋಟಿ ರೂ.ಗೆ ಇಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಿವಿಧ ಆಯ್ಕೆ: ಇನ್ನು ಬೆಂಗಳೂರಿನ ಅನುಷ್ಠಾನವಾಗುತ್ತಿರುವ ಪ್ರಮುಖ ಯೋಜನೆಯಾದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಲವು ಆಯ್ಕೆಗಳನ್ನು ಕೊಡಲಾಗಿದೆ. ಆದರೆ ಇದರ ಹೊರತಾಗಿಯೂ ಆಸ್ತಿದಾರರು ಹಾಗೂ ಸರ್ಕಾರದ ನಡುವೆ ಸಂಘರ್ಷ ಮುಂದುವರಿದಿದೆ.
ಇನ್ನು ಒಟ್ಟಾರೆ ಈ ಯೋಜನೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಆಸ್ತಿದಾರರಿಗೆ 6 ಪ್ರಮುಖ ಆಯ್ಕೆಗಳನ್ನು ನೀಡಿದೆ.












Click it and Unblock the Notifications