Get Updates
Get notified of breaking news, exclusive insights, and must-see stories!

ಆರ್‌ಟಿಇ : 1.58 ಲಕ್ಷ ಸೀಟಿಗೆ 2.28ಲಕ್ಷ ಅರ್ಜಿ ಸಲ್ಲಿಕೆ

ಬೆಂಗಳೂರು, ಮಾರ್ಚ್ 30: ಆರ್‌ಟಿಇ ಕಾಯ್ದೆಯಡಿ ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ವರ್ಷ 1.58ಲಕ್ಷ ಮಕ್ಕಳಿಗೆ ಸೀಟು ನೀಡಲಾಗುತ್ತಿದೆ. ಅದಕ್ಕಾಗಿ ಈಗಾಗಲೇ ಎರಡೂವರೆ ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.

2017-18ಕ್ಕೆ ಹೋಲಿಸಿದರೆ ಸರಿಸುಮಾರು 30ಸಾವಿರಗಳಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳು ಅಧಿಕಗೊಂಡಿದ್ದು, ಬೇಡಿಕೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಆರ್‌ಟಿಇ ಕಾಯ್ದೆಯ ಅಡಿಯಲ್ಲಿ ರಾಜ್ಯದ ಪ್ರತಿಯೊಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ಪಡೆಯುವ ಅನುದಾನದ ಶೇ,20ರಷ್ಟು ಸೀಟುಗಳನ್ನು ಆರ್‌ಟಿಇ ಕಾಯ್ದೆಯಡಿ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಹಾಗೂ ಮೀಸಲಾತಿ ಅನುಸಾರ ಸೀಟುಗಳನ್ನು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಅರಿಸುಮಾರು 30ಸಾವಿರಗಳಷ್ಟು ಹೆಚ್ಚು ಸೀಟುಗಳು ಆರ್‌ಟಿಇ ಕಾಯ್ದೆಯಡಿ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ.

2.28L applications for 1.58L RTE seats

ರಾಜ್ಯ ಸರ್ಕಾರದ ನಿಯಮಾನುಸಾರ ಈಗಾಗಲೇ 1.58ಲಕ್ಷ ಸೀಟುಗಳನ್ನು ಆರ್‌ಟಿಇ ಅಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದರೂ ಕೂಡ 2.28ಲಕ್ಷ ಅರ್ಜಿಗಳು ಬಂದಿರುವುದರಿಂದ ಶಿಕ್ಷಕರು ತಮ್ಮ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳು ಸಿಗುತ್ತದೆಯೇ ಎಂಬುದರ ಬಗ್ಗೆ ಚಿಂತಿತರಾಗಿದ್ದಾರೆ.

ತಪ್ಪು ದಾಖಲೆ ನೀಡಿ ಆರ್‌ಟಿಇ ಸೀಟುಗಳನ್ನು ತಪ್ಪಿಸಿ ನೈಜ ಫಲಾನುಭವಿಗಳಿಗೆ ದೊರಕುವಂತೆ ಮಾಡಲು ಈ ಬಾರಿ ಶಿಕ್ಷಣ ಇಲಾಖೆಯು ಆಧಾರ್ ಕಾರ್ಡ್, ವಿದ್ಯಾರ್ಥಿ ಅಥವಾ ಪೋಷಕರ ಆಧಾರ್ ನಂಬರ್ ಜತೆಗೆ ಜಾತಿ ಹಾಗೂ ಆದಾಯವನ್ನು ತಾಳೆ ಮಾಡುತ್ತಿದ್ದು ಇದರಿಂದ ಆರ್‌ಟಿಇ ಸೀಟುಗಳಿಗೆ ನಕಲಿ ಅರ್ಜಿ ಸಲ್ಲಿಸುವವರನ್ನು ಶಿಕ್ಷಣ ಇಲಾಖೆ ರದ್ದುಗೊಳಿಸಲು ಸಾಧ್ಯವಾಗಿದೆ.

ಒಂದಕ್ಕಿಂತ ಹೆಚ್ಚು ಶಾಲೆಗಳಲ್ಲಿ ಅರ್ಜಿ ಸಲ್ಲಿಸಿದ ಹಾಗೂ ವಿದ್ಯಾರ್ಥಿಯು ವಾಸವಾಗಿರುವ ಪ್ರದೇಶದಿಂದ ಹೊರಗಿನ ಪ್ರದೇಶದ ಶಾಲೆಗೆ ಅರ್ಜಿ ಸಲ್ಲಿಸಿದಲ್ಲಿ ಆಧಾರ್ ನಂಬರ್ ಆಧರಿತವಾಗಿ ವಿದ್ಯಾರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+