1960ರ ಬೆಂಗಳೂರಿನಲ್ಲಿ ರಸ್ತೆಗಳು ಹೇಗಿದ್ದವು ಗೊತ್ತಾ?; ಭಾರೀ ವೈರಲ್‌

Old Bengaluru: ರಾಜ್ಯ ರಾಜಧಾನಿ ಬೆಂಗಳೂರು ಎಷ್ಟೋ ಜನರಿಗೆ ಜೀವನ ಕಲ್ಪಿಸಿಕೊಟ್ಟಿರುವ ನಗರವಾಗಿದೆ. ಹೊಟ್ಟೆಪಾಡಿಗಾಗಿ ದುಡಿಮೆ ಮಾಡಲು ಪ್ರತಿನಿತ್ಯ ಲಕ್ಷಾಂತರ ಜನ ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಹೀಗೆ ಜನಸಂಖ್ಯೆ ಹೆಚ್ಚಾದಂತೆಲ್ಲ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿ ಜೊತೆಗೆ ವಿಸ್ತರಣೆ ಆಗುತ್ತಲಿದೆ. ಇದೀಗ ಮೆಟ್ರೋ ನಗರವಾಗಿ ಪ್ರಸಿದ್ಧಿಯಾಗಿರುವ ಈ ಸಿಲಿಕಾನ್‌ಸಿಟಿ 1960ರಲ್ಲಿ ಹೆಗಿತ್ತೆಂದು ಇಲ್ಲಿ ತಿಳಿಯಿರಿ.

ಇದೀಗ ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಲಿದ್ದರೆ, ಮತ್ತೊಂದೆಡೆ ವಿಸ್ತರಣೆ ಕೂಡ ಅದೇ ರೀತಿಯಲ್ಲಿ ಆಗುತ್ತಿದೆ. ಮೆಟ್ರೋ, ರಸ್ತೆಗಳು ಸೇರಿದಂತೆ ಉಳಿದ ಕ್ಷೇತ್ರಗಳಲ್ಲೂ ಕೂಡ ಬೆಂಗಳೂರು ಅಭಿವೃದ್ಧಿ ಆಗುತ್ತಲಿದೆ. ಇನ್ನು 1960ರ ದಶಕದಲ್ಲಿ ಬೆಂಗಳೂರಿನ ರಸ್ತೆಗಳಿ ಮತ್ತು ಫುಟ್‌ಪಾತ್‌ಗಳು ಹೇಗಿದ್ದವು ಎಂಬುದನ್ನು ತೋರಿಸುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಆ ಕಾಲದಲ್ಲೊಯೇ ನಗರ ವಿಶಾಲವಾದ ರಸ್ತೆಗಳು ಮತ್ತು ಫುಟ್‌ಪಾತ್‌ಗಳನ್ನು ಹೊಂದಿತ್ತು.

1960s Bengaluru Photos goes viral

ಕರ್ನಾಟಕದ ಹವಾಮಾನ ಇಲಾಖೆ ಹಂಚಿಕೊಂಡ ಚಿತ್ರದಲ್ಲಿ ಬೆಂಗಳೂರಿನ ಬೀದಿಗಳು ವಿಶಾಲವಾದ ಮತ್ತು ದಟ್ಟಣೆ ಇಲ್ಲದ ರಸ್ತೆಗಳನ್ನು ನೋಡಬಹುದಾಗಿದೆ. ಸಾಮಾಜಿಕ ಜಾಲತಾಣವಾದ ಟ್ವೀಟ್‌ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಅದರಲ್ಲೂ 1960ರ ದಶಕದಲ್ಲಿ ಕ್ವೀನ್ಸ್ ರಸ್ತೆಯಲ್ಲಿರುವ ಕಾಫಿ ಬೋರ್ಡ್ ಪ್ರದೇಶದ ಹೇಗಿತ್ತು ಎನ್ನುವ ಪೋಸ್ಟರ್‌ ಭಾರೀ ವೈರಲ್‌ ಆಗುತ್ತಿದೆ.

"ಇದು 1960ರ ದಶಕದ ಬೆಂಗಳೂರು ನಗರವಾಗಿದ್ದು, ಶಿಸ್ತಿನ ಪಾದಚಾರಿಗಳು ಮತ್ತು ಉತ್ತಮವಾಗಿ ನಿರ್ಮಿಸಲಾದ ರಸ್ತೆಗಳು ಮತ್ತು ಫುಟ್‌ಪಾತ್‌ಗಳನ್ನು ಹೊಂದಿತ್ತು. ಇದೀಗ ಈ ಪ್ರದೇಶವನ್ನು ಕಾಣಲು ಸಾಧ್ಯವಿಲ್ಲ" ಎಂದು ಹವಾಮಾನ ಇಲಾಖೆ ಪೋಸ್ಟರ್‌ ಹಂಚಿಕೊಂಡಿದೆ ಅಂತಾ ಟೈಮ್ಸ್‌ ನೌ ವರದಿ ಮಾಡಿದೆ. ಇನ್ನು ಈ ಪೋಸ್ಟ್‌ಗೆ 1 ಕೋಟಿಯತ್ತ ವೀಕ್ಷಣೆಗಳು, 1000ಕ್ಕೂ ಅಧಿಕ ಲೈಕ್‌ ಮತ್ತು 100 ಹೆಚ್ಚು ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ತಿಳಿಸಿದೆ.

ಟ್ವೀಟ್‌ ಬಳಕೆದಾರರೊಬ್ಬರು ನಾವು ಇದರಿಂದ ಸಾರ್ವಜನಿಕ ಮೂಲಸೌಕರ್ಯಗಳ ಪ್ರಸ್ತುತ ಕ್ಲಸ್ಟರ್ ಅವ್ಯವಸ್ಥೆಗೆ ಹೇಗೆ ಹೋದೆವು? ಅವರು ಇದ್ದದ್ದನ್ನು ಪುನರಾವರ್ತಿಸಬೇಕಾಗಿತ್ತು, ಅದನ್ನು ಹಾಳುಮಾಡಬಾರದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಚಾರ ಶಿಸ್ತು ಮತ್ತು ಬಿಬಿಎಂಪಿಯು ಪಾರ್ಕಿಂಗ್ ಸ್ಥಳಗಳು ಮತ್ತು ಫುಟ್‌ಪಾತ್ ಅತಿಕ್ರಮಣಗಳ ಮೇಲೆ ಕೇಂದ್ರೀಕರಿಸಿದರೆ, ಟ್ರಾಫಿಕ್ ಅನ್ನು ಶೇಕಡ 60ರಷ್ಟು ಸುಧಾರಿಸಬಹುದು ಎಂದು ಹೇಳಿದ್ದಾರೆ. ‌

ಏರ್‌ಪೋರ್ಟ್‌ಗೆ ಮೆಟ್ರೋ ಸಂಚಾರ ಆರಂಭ ಯಾವಾಗ?: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ನಗರದ ಬಹುತೇಕ ಮಂದಿ ಟ್ರಾಫಿಕ್‌ ಜಂಜಾಟದಿಂದ ತಪ್ಪಿಸಿಕೊಳ್ಳಲು ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಇನ್ನು ನಗರದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಮೆಟ್ರೋ ಮಾರ್ಗ ವಿಸ್ತರಣೆ ಆಗುತ್ತಲೇ ಇದೆ. ಇದೀಗ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗದ ಅಪ್ಡೇಟ್‌ ಮಾಹಿತಿಯೊಂದು ಹೊರಬಿದ್ದಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹೆಬ್ಬಾಳ ನಡುವಿನ ನೀಲಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಯಾವಾಗ ಆಗಲಿದೆ ಎನ್ನುವ ಮಾಹಿತಿಯೊಂದು ರಿವೀಲ್‌ ಆಗಿದೆ. 2026ರ ಜೂನ್‌ ಅಥವಾ ಸೆಪ್ಟಂಬರ್‌ವೊಳಗೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದರಿಂದ ಏನಲ್ಲ ಪ್ರಯೋಜನೆಗಳಿವೆ ಎಂದು ಇಲ್ಲಿ ತಿಳಿಯಿರಿ.

ಹೆಬ್ಬಾಳ ಹಾಗೂ ಕೆ.ಆರ್‌.ಪುರ ನಡುವಿನ ಮಾರ್ಗ ಡಿಸೆಂಬರ್‌ ವೇಳೆಗೆ ಆರಂಭ ಆಗಲಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೆಆರ್‌ ಪುರ ನಡುವಿನ 38 ಕಿಲೋ ಮೀಟರ್‌ ಮೆಟ್ರೋ ಮಾರ್ಗ ಪೂರ್ಣಗೊಳ್ಳುವವರೆಗೂ ಕಾಯದೆ, ಹೆಬ್ಬಾಳ ಕೆಐಎ ವಿಮಾನ ನಿಲ್ದಾಣ ನಡುವಿನ ಸಂಚಾರ ಆರಂಭಿಸಲು ಉದ್ದೇಶಿಸಲಾಗಿದೆ.

ಇದು ಒಂದು ವೇವೆ ಆರಂಭ ಆದರೆ, ವಿಮಾನ ನಿಲ್ದಾಣ ತಲುಪುವ ಲಕ್ಷಾಂತರ ಪ್ರಯಾಣಿಕರು ಹೆಬ್ಬಾಳದಿಂದ ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಟ್ರಾಫಿಕ್‌, ಟೋಲ್‌ ಗಾಗಿ ಹೆಚ್ಚಿನ ಹಣ ಪಾವತಿ ಮಾಡುವ ಯಾವ ಕಿರಿಕಿರಿಯೂ ಇರುವುದಿಲ್ಲ. ಈ ಮಾರ್ಗದಲ್ಲಿ ಕಾಮಗಾರಿ ತುಂಬಾ ವೇಗವಾಗಿ ನಡೆಯುತ್ತಿದೆ. ಕೆಲವು ಸ್ಥಳಗಳಲ್ಲಿ ಮಾತ್ರ ವಿಳಂಬ ಆಗುತ್ತಿದೆ.

ಕಾಮಗಾರಿಯ ಸಮಯಕ್ಕೆ ಮಿತಿ ಏರಿರುವುದರಿಂದ ಯಲಹಂಕ ಸಮೀಪದ ವಾಯುಪಡೆ ನಿಲ್ದಾಣದ ಹತ್ತಿರ ನಿಧಾನಗತಿಯಲ್ಲಿ ಸಾಗುತ್ತಿದೆ. ಬೆಟ್ಟಹಲಸೂರು ನಿಲ್ದಾಣದ ಬಳಿಯೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. 2020ರಲ್ಲಿ ಇಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಲು ಎಂಬೆಸಿ ಗ್ರೂಪ್‌ ಬಿಎಂಆರ್‌ಸಿಎಲ್‌ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಈ ನಿಲ್ದಾಣಕ್ಕೆ ಎಂಬೆಸಿ 140 ಕೋಟಿ ರೂಪಾಯಿ ನೀಡುತ್ತಿದೆ.

ಹೆಬ್ಬಾಳ-ಕೆಆರ್‌ ಪುರ ನಡುವಿನ ಮೆಟ್ರೋ ಕಾಮಗಾರಿಯೂ ನಿಧಾನವಾಗಿ ಸಾಗುತ್ತಿದೆ. ಮೆಟ್ರೋ ಕಾಮಗಾರಿ ಹತ್ತಿರ ಅವಘಡ ಸಂಭವಿಸಿ ಇಬ್ಬರು ಜೀವ ತೆತ್ತ ನಂತರ ಕಳೆದ 6 ತಿಂಗಳಿನಿಂದ ಕಾಮಗಾರಿ ಸ್ಥಗಿತ ಆಗಿದೆ.

ನೀಲಿ ಮಾರ್ಗದಲ್ಲಿ ಮಾತ್ರ ಸರಾಸರಿ ವಾಣಿಜ್ಯ ವೇಗ ಗಂಟೆಗೆ 50 ಕಿಲೋ ಮೀಟರ್‌ ಇರುವಂತೆ ಯೋಜನೆ ರೂಪಿಸಲಾಗಿದೆ. ಅತೀ ಹೆಚ್ಚು ವಾಹನ ದಟ್ಟಣೆ ಪ್ರದೇಶಗಳಲ್ಲಿ ಒಂದಾಗಿರುವ ಹೊರ ವರ್ತುಲ ರಸ್ತೆಯ ದಟ್ಟಣೆ ಕಡಿಮೆ ಮಾಡುವಲ್ಲಿಯೂ ನೀಲಿ ಮಾರ್ಗ ಪ್ರಮುಖ ಪಾತ್ರ ವಹಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಮೆಟ್ರೊ ನೀಲಿ ಮಾರ್ಗದಲ್ಲಿ ಓಡಾಡುವ ರೈಲು, ಉಳಿದ ಮಾರ್ಗಗಳಿಗಿಂತ ವೇಗವಾಗಿ ಸಂಚರಿಸಲಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯ ಆಗಲಿದೆ. ಪ್ರಸ್ತುತ ನಮ್ಮ ಮೆಟ್ರೊದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ರೈಲುಗಳು ಗಂಟೆಗೆ 34 ಕಿಲೋ ಮೀಟರ್‌ ವೇಗದಲ್ಲಿ ಚಲಿಸುತ್ತಿವೆ. ಕೆಲವೇ ತಿಂಗಳಲ್ಲಿ ಆರಂಭಗೊಳ್ಳುವ ಹಳದಿ ಮಾರ್ಗ ಮತ್ತು ಮುಂದಿನ ವರ್ಷ ಆರಂಭಗೊಳ್ಳಲಿರುವ ಗುಲಾಬಿ ಮಾರ್ಗದಲ್ಲಿ ಸಂಚರಿಸಲಿರುವ ಮೆಟ್ರೊಗಳ ಸರಾಸರಿ ವಾಣಿಜ್ಯ ವೇಗ ಗಂಟೆಗೆ 34 ಕಿಲೋ ಮೀಟರ್‌ಗೆ ನಿಗದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+