BMTC: ಬಸ್ ನಿಲ್ದಾಣದಲ್ಲಿದ್ದ ಎರಡು ಬಿಎಂಟಿಸಿ ಬಸ್‌ಗಳಿಂದ 167 ಲೀಟರ್ ಡೀಸೆಲ್ ಕಳ್ಳತನ!
ಇತ್ತೀಚೆಗೆ, ರಾಜ್ಯದ ಚಿಂಚೋಳಿ ಬಸ್ ನಿಲ್ದಾಣದಿಂದ ಸರ್ಕಾರಿ ಬಸ್ ಅನ್ನು ಕಳವು ಮಾಡಲಾಗಿತ್ತು. ನಂತರ ಪೊಲೀಸರು ತೆಲಂಗಾಣದಲ್ಲಿ ಬಸ್ ಅನ್ನು ಪತ್ತೆ ಮಾಡಿದ್ದರು.
ಬೆಂಗಳೂರು, ಫೆಬ್ರವರಿ. 26: ರಾಜ್ಯ ರಾಜಧಾನಿಯ ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣದಲ್ಲಿ ಎರಡು ಸರ್ಕಾರಿ ಬಸ್‌ಗಳಿಂದ 167 ಲೀಟರ್ ಡೀಸೆಲ್ ಕಳ್ಳತನವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬೆಂಗಳೂರು ಮೆಟ್ರೋ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ನೌಕರರೊಬ್ಬರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ
ವರದಿಯ ಪ್ರಕಾರ, ಪುಟ್ಟೇನಹಳ್ಳಿ ಬಸ್ ಡಿಪೋ ಅಧಿಕಾರಿ ಕಳೆದ ವಾರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬಸ್ ನಿಲ್ದಾಣದಲ್ಲಿ ಇಂಧನ ಸೋರಿಕೆಯಾಗಿರುವುದನ್ನು ಗಮನಿಸಿದರು. ನಂತರ ದುಷ್ಕರ್ಮಿಗಳು ನಿಲ್ದಾಣದಲ್ಲಿ ನಿಲುಗಡೆ ಮಾಡಿದ ಬಸ್‌ಗಳಿಂದ ಇಂಧನವನ್ನು ಕಳ್ಳತನ ಮಾಡಿರುವುದನ್ನು ಕಂಡು ಬಂದಿದೆ. ತಕ್ಷಣ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳವಾದ ಒಟ್ಟು ಡೀಸೆಲ್ ಮೌಲ್ಯ ರೂ. 14,000 ರೂಪಾಯಿ ಎಂದು ಅಂದಾಜಿಸಲಾಗಿದೆ.

ಇತ್ತೀಚೆಗೆ, ರಾಜ್ಯದ ಚಿಂಚೋಳಿ ಬಸ್ ನಿಲ್ದಾಣದಿಂದ ಸರ್ಕಾರಿ ಬಸ್ ಅನ್ನು ಕಳವು ಮಾಡಲಾಗಿತ್ತು. ನಂತರ ಪೊಲೀಸರು ತೆಲಂಗಾಣದಲ್ಲಿ ಬಸ್ ಅನ್ನು ಪತ್ತೆ ಮಾಡಿದರು. ಸಿಸಿಟಿವಿ ಫೂಟೇಜ್‌ನಲ್ಲಿ ಒಬ್ಬ ವ್ಯಕ್ತಿ ಬಸ್‌ನತತ್ ನಡೆದುಕೊಂಡು ಹೋಗಿರುವುದು ಮತ್ತು ಅದನ್ನು ಚಾಲನೆ ಮಾಡಿಕೊಂಡು ತೆಗೆದುಕೊಂಡು ಹೋಗಿರುವುದು ದಾಖಲಾಗಿದೆ.
ಪೊಲೀಸರ ಪ್ರಕಾರ, ಸೋಮವಾರ ರಾತ್ರಿ 9 ಗಂಟೆಗೆ ಬೀದರ್ ಡಿಪೋಗೆ ಸೇರಿದ ಕೆಎ 38, ಎಫ್ 971 ನೋಂದಣಿ ಸಂಖ್ಯೆಯ ಬಸ್ ಅನ್ನು ಚಿಂಚೋಳಿ ಬಸ್ ಡಿಪೋದಲ್ಲಿ ಬಸ್ ಅನ್ನು ಚಾಲಕ ಅಯೂಬ್ ಖಾನ್ ಮತ್ತು ಕಂಡಕ್ಟರ್ ಈರಪ್ಪ ನಿಲ್ಲಿಸಿದ್ದರು. ಡಿಪೋದಲ್ಲಿನ ತಂಗುದಾಣದಲ್ಲಿ ಚಾಲಕ ಮತ್ತು ಕಂಡಕ್ಟರ್ ಮಲಗಿದ್ದು, ಬೆಳಗ್ಗೆ ಬೀದರ್ ಗೆ ಟ್ರಿಪ್ ಆರಂಭಿಸಲು ಬಂದಾಗ ಬಸ್ ಅಲ್ಲಿ ಕಾಣಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬೆಳಗಿನ ಜಾವ 3.30ಕ್ಕೆ ತೆಲಂಗಾಣದ ಕಡೆಗೆ ವ್ಯಕ್ತಿಯೊಬ್ಬ ಬಸ್ ಚಲಾಯಿಸುತ್ತಿರುವುದು ಕಂಡುಬಂದಿದೆ.

ತೆಲಂಗಾಣ ರಾಜ್ಯದ ತಾಂಡೂರು ಸಮೀಪದ ಭೂಕೈಲಾಸ ಎಂಬಲ್ಲಿ ಬಸ್ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಕಳ್ಳರು ಸುಮಾರು 80 ಕಿ. ಮೀ. ದೂರ ಬಸ್ ಓಡಿಸಿದ್ದಾರೆ. ಬಳಿಕ ರಸ್ತೆಯ ಬದಿ ಬಿಟ್ಟು ತೆರಳಿದ್ದರು.












Click it and Unblock the Notifications