ರವೀಂದ್ರ ಕಲಾಕ್ಷೇತ್ರದಲ್ಲಿ ಜ.3ರಿಂದ 15 ವಿಭಿನ್ನ ರಂಗ ಪ್ರಯೋಗ
''ಭಯ ಒಂದನ್ನ ಪಕ್ಕಕಿಟ್ಟು, ಜವಾಬ್ದಾರಿಯನ್ನು ಹೆಗಲಿಗ್ಹೊತ್ತು ಮತ್ತೆ ರಂಗಭೂಮಿ ಸದ್ದು ಮಾಡ್ತಿದೆ....15 ದಿನಗಳ ಕಾಲ 15 ನಾಟಕಗಳು ಬರೀ ಜನರನ್ನು ಮಾತ್ರ ನಂಬಿ ಬರ್ತಿದೆ. 15 ಬಗೆಯ ವಿಭಿನ್ನ ಪ್ರಯೋಗಗಳನ್ನ ನಿಮ್ಮ ಮುಂದೆ ಇಡೋಕೆ " ಯುವರಂಗ " ಅನ್ನೋ ವೇದಿಕೆ ಸಿದ್ಧವಾಗಿದೆ.
15 ದಿನಗಳ ಕಾಲ 15 ನಾಟಕಗಳು ಬರೀ ಜನರನ್ನು ಮಾತ್ರ ನಂಬಿ ಬರ್ತಿದೆ, ಯೋಚ್ನೆ ಮಾಡಿ ಪ್ರೇಕ್ಷಕ ಪ್ರಭುಗಳ ಮೇಲೆ ಎಷ್ಟರಮಟ್ಟಿಗೆ ನಂಬಿಕೆ ನಮಗೆ. ಮುಂದಿನ ಬದುಕಿನ ಯೋಚನೆಗೆ ಬಿದ್ದೋ , ಇಷ್ಟು ದಿನಗಳ ಖಾಲಿ ಕೈ ಬರ್ತಿ ಮಾಡಲಿಕ್ಕೋ ,ಅವಮಾನಿಸಿದವರಿಗೆ ಉತ್ತರಿಸಲೆಂದೋ, ಹಸಿವನ್ನೊ ದೇವರನ್ನು ಪ್ರಾರ್ಥಿಸಲೋ ಈ ಕಾಯಕಕ್ಕೆ ಇಳಿದಿದ್ದೇವೆ , ಇದು ಹುಚ್ಚು ಸಾಹಸ ಎಂದೆನ್ನಿಸಬಹುದು ಆದರೆ ಬಣ್ಣವನ್ನೇ ಬದುಕಾಗಿಸಿ ಕೊಂಡವರಿಗೆ ಸಾಹಸಗಳನ್ನು ಮಾಡಿ ಅಭ್ಯಾಸ ಇರುತ್ತೆ. ರಂಗಭೂಮಿ ಕಲಿಸೋದು ಹೋರಾಡು ಅಂತ,
ಸಮಾಜಕ್ಕೆ ಕನ್ನಡಿ ರಂಗಭೂಮಿ ಅಂತಾರೆ.

"ಹಳೆಯ ಅನುಭವಗಳನ್ನು , ಬದುಕನ್ನು ಎದುರಿಸುವ ಶಕ್ತಿಕೊಟ್ಟ 2020 ಇಸವಿಗೆ ಒಂದು ಸಲಾಮನ್ನು ಹೊಡೆದು"2021 ರ ಜನವರಿ " ಹೊಸ ವರ್ಷಕ್ಕೆ ಹೊಸ ಹೊಸ ಕನಸುಗಳನ್ನು ಹೊತ್ತು ಜನವರಿ 03 ರಿಂದ 18 ನೇ ತಾರೀಖಿನ ತನಕ 15 ತಂಡಗಳು ಬರುತ್ತಿವೆ.
ದೃಶ್ಯಕಾವ್ಯ/ ಖಾಲಿರಂಗ/ ಥೇಮಾ/ ರಂಗಭಾಸ್ಕರ/ ಸವಿರಂಗ/ ರಂಗವಿಜಯ/ ನೆನಪುತಂಡ/ ಅಶ್ವಘೋಷ ಥಿಯೇಟರ್ ಟ್ರಸ್ಟ್/ ರಂಗನಿರಂತರ/ ಸೈಡ್ ವಿಂಗ್/ ವಿಶ್ವಪಥ ಕಲಾ ಸಂಗಮ/ ಥಿಯೇಟರ್ ಥೇರಪಿ/ ಸ್ಪಷ್ಟ/ ಪ್ರವರ/ ರಂಗಪಯಣ......
ಕೆ. ವೈ ನಾರಾಯಣ ಸ್ವಾಮಿ / ಬೇಲೂರು ರಘುನಂದನ್/ ರಾಮಕೃಷ್ಣಕಲ್ಚಾರ್/ ಲಿಂಗ ದೇವರು ಹಳಿ ಮನೆ/ ರಾಜಗುರು/ ಶೈಲೇಶ್ ಕುಮಾರ್/ ಹನುಮಂತ ಹಾಲಿಗೇರಿ/ ಎಂ. ಎಸ್ ನರಸಿಂಹ ಮೂರ್ತಿ/ ಕರಣಂ ಪವನ್ ಪ್ರಸಾದ್.. ಹೀಗೆ ಬರವಣಿಗೆಕಾರರು.....
ನಿರ್ದೇಶನದಲ್ಲಿ ಕೃಷ್ಣ ಮೂರ್ತಿ ಕವತ್ತಾರ್ ರಿಂದ ,ನಂಜುಂಡೇಗೌಡ/ ನಿರಂಜನ್ ಖಾಲಿಕೊಡ/ ಡಾ. ಎಸ್. ವಿ. ಸುಷ್ಮ/ ಭಾಸ್ಕರ್ ಗೌಡ/ ದಿಲೀಪ್ ಬಿ.ಎಂ/ ನಂದೀಶ್ ದೇವ್/ ಶೈಲೇಶ್ ಕುಮಾರ್/ ಭಾಸ್ಕರ್ ನೀನಾಸಂ/ ರಾಮಕೃಷ್ಣ ಬೆಳ್ತೂರ್/ ಗಗನ್ ಪ್ರಸಾದ್/ ಹನು ರಾಮಸಂಜೀವ/ ರಾಜಗುರು ...ಹೀಗೆ ನಿರ್ದೇಶಕರ ದಂಡೇ ಇದೆ.
Recommended Video
ಹದಿನೈದು ದಿನಗಳಲ್ಲಿ ಸಂವಾದ, ರಂಗಗೀತೆಗಳು, ಯುವರಂಗ ಪ್ರಶಸ್ತಿ ಪ್ರದಾನ, ಇದೆಲ್ಲದರ ಜೊತೆಗೆ ಜನವರಿ 11 ರಂದು "" ಸಿ. ಜಿ. ಕೆ. ಅವರ ಹುಟ್ಟು ಹಬ್ಬದ ಪ್ರಯುಕ್ತ ಜಿ. ಪಿ. ಓ ಲಕೋಟೆಯನ್ನು ಬಿಡುಗಡೆ ಮಾಡಲಿದೆ ಇದೊಂದು ರಂಗಭೂಮಿಯ ಹೆಮ್ಮೆ. ಇಷ್ಟೆಲ್ಲಾ ವಿಶೇಷಗಳು "" ಯುವರಂಗ "" ಎಂಬ ವೇದಿಕೆ ಅಡಿಯಲ್ಲಿ ನಡೆಸುತ್ತಿದೆ.












Click it and Unblock the Notifications