Namma Metro: 14 ವರ್ಷ ಕಳೆದರೂ 100km ದಾಟದ ಮೆಟ್ರೋ ಜಾಲ, ಆಗಿದ್ದೇನು?
ಬೆಂಗಳೂರು, ನವೆಂಬರ್ 09: ಬೆಂಗಳೂರು ನಮ್ಮ ಮೆಟ್ರೋ ನಾಗರಿಕರಿಗೆ ಉತ್ತಮ ಸಾರಿಗೆ ಸೇವೆಯಾಗಿದೆ. ದಶಕದಿಂದಲೂ ಮೆಟ್ರೊ ವಿಸ್ತರಣೆ ಆಗುತ್ತಲೇ ಇದೆ. ಯೋಜನೆಗಳು ಪ್ಲಾನ್ ಮಾಡಿಕೊಳ್ಳಲಾಗಿದೆ. ಆದರೆ ಅನುಷ್ಠಾನ ಮಾತ್ರ ವಿಳಂಬವಾಗುತ್ತಿದೆ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಮೆಟ್ರೋ ಜಾಲ ವಿಸ್ತರಣೆ ತೀರಾ ನಿಧಾನವೆಂದು ಹೇಳಲಾಗುತ್ತಿದೆ.
2011 ಅಕ್ಟೋಬರ್ 20ರಂದು ನಮ್ಮ ಮೆಟ್ರೋ ರೈಲು ಬೈಯಪ್ಪನಹಳ್ಳಿ-ಎಂಜಿ ರಸ್ತೆ ನಿಲ್ದಾಣವರೆಗೆ ಮೊದಲು ರೈಲು ಸಂಚಾರ ಮಾಡಿತು. 6.7 ಕಿಲೋ ಮೀಟರ್ ನೇರಳೆ ಮಾರ್ಗ ನಿರ್ಮಾಣಗೊಂಡಿತ್ತು. ನಂತರ ಅದು ಚಲಘಟ್ಟವರೆಗೆ ಕ್ರಮೇಣ ವಿಸ್ತರಣೆ ಆಗಿದೆ. ಹಸಿರು ಮಾರ್ಗ, ಇತ್ತೀಚೆಗೆ ಹಳದಿ ಮಾರ್ಗ ಸಹ ಓಪನ್ ಆಗಿದೆ. ಗುಲಾಬಿ ಮಾರ್ಗ, ನೀಲಿ ಮಾರ್ಗದ ಕಾಮಗಾರಿಗಳು ವರ್ಷಗಳ ಕಳೆದರು ಪೂರ್ಣಗೊಂಡಿಲ್ಲ. ನಮ್ಮ ಮೆಟ್ರೋ 2011ರಿಂದ ಈವರೆಗೆ 100 ಕಿಲೋ ಜಾಲ ವಿಸ್ತರಣೆ ಮಾಡಲಾಗಿಲ್ಲ. 14 ವರ್ಷದಲ್ಲಿ ಕೇಲವ 96 ಕಿಲೋ ಮೀಟರ್ ವಿಸ್ತರಣೆ ಆಗಿದೆ.

ನಗರದ ಮೊದಲ ಮೆಟ್ರೋ ಕಾರಿಡಾರ್ ಕಂಡು ಜನರು ಖಷಿಪಟ್ಟಿದ್ದರು. ಬೆಂಗಳೂರಿನ ಕುಖ್ಯಾತ ಸಂಚಾರ ಸಮಸ್ಯೆಗಳಿಗೆ ವಿಶ್ವಾಸಾರ್ಹ ಮತ್ತು ಕೈಗೆಟುಕುವ ಪರಿಹಾರ ಸಿಗುತ್ತದೆ ಎಂದು ನಂಬಿದ್ದರು. ಅದರಂತೆ ಮೆಟ್ರೋ ಮಾರ್ಗಗಳಲ್ಲಿ ಪ್ರಯಾಣ ಸುಗಮವಾಯಿತು. ಆದರೆ ಅಷ್ಟ ದಿಕ್ಕುಗಳಿಗೂ ಮಟ್ರೋ ವಿಸ್ತರಣೆ ವಿಳಂಬವಾಗುತ್ತಲೇ ಇದೆ. ಬೇರೆ ಬೇರೆ ನಗರಗಳಲ್ಲಿ 10-15 ವರ್ಷಗಳಲ್ಲಿ ನೂರು ನೂರು ಕಿಲೋ ಮೀಟರ್‌ಗಳಷ್ಟು ಜಾಲ ವಿಸ್ತರಣೆ ಆಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 14 ವರ್ಷದಲ್ಲಿ ಮೆಟ್ರೋ ಜಾಲ 200 ಕಿಲೋ ಮೀಟರ್ ಅಧಿಕ ವ್ಯಾಪ್ತಿ ಹೊಂದಿದೆ. ಅದೇ ಅವಧಿಯಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಅರ್ಧದಷ್ಟು ಸಹ ಜಾಲ ವಿಸ್ತರಣೆ ಆಗಿಲ್ಲ. ಇಷ್ಟು ವಿಳಂಬವು ಪ್ರಯಾಣಿಕರ ಆಸೆ ನಿರಾಸೆ ಮಾಡಿದೆ. ಇನ್ನೂವರೆಗೂ ನೀಲಿ ಮಾರ್ಗ, ಗುಲಾಬಿ ಮಾರ್ಗ ಕೆಲಸಗಳು ಪೂರ್ಣಗೊಂಡಿಲ್ಲ. ಕೆಂಪು ಮಾರ್ಗ, ಯೆಲ್ಲೋ ಮಾರ್ಗವು ಯೋಜನಾ ಹಂತದಲ್ಲಿದೆ. ಹಳದಿ ಮಾರ್ಗವು ಸಹ ವರ್ಷಗಳ ವಿಳಂಬದ ಬಳಿಕ ಸಾರ್ವಜನಿಕರಿಗೆ ಮುಕ್ತವಾಯಿತು.
ನಮ್ಮ ಮೆಟ್ರೋಗೆ 14 ವರ್ಷಗಳು ಕಳೆದಿವೆ. ಇಂದು ಉತ್ಸಾಹ ಕಡಿಮೆಯಾಗಿದೆ, ಹೊಸ ಯೋಜನೆಗಾಗಿ ನೀಡಿದ್ದ ಭರವಸೆಗಳು ಮಂಕಾಗಿದೆ. ನಿರ್ಮಾಣ ನಿಧಾನವಾಗುತ್ತಿದ್ದಂತೆ, ನಮ್ಮ ಮೆಟ್ರೋ ಹೊಸ ಯೋಜನೆ, ಮಾರ್ಗ ನಿರ್ಮಿಸುವಲ್ಲಿ ರೋಗಗ್ರಸ್ಥವಾಗಿದೆ ಎಂದು ಜನರು ದೂರಿದ್ದಾರೆ. ಹಾಗಾದರೆ ಇದಕ್ಕೆ ಕಾರಣವೇನು?
ದರ ಹೆಚ್ಚಿಸಿಕೊಂಡಿರುವ ನಮ್ಮ ಮೆಟ್ರೋ ಅಸ್ವಸ್ಥ ಸಂಸ್ಥೆಗಳು, ನಿವೃತ್ತ ಇಂಜಿನಿಯರ್ ಗಳ ಜೊತೆಗೆ ಯೋಜನೆಗೆ ಕೈ ಜೋಡಿಸುತ್ತದೆ ಎನ್ನಲಾಗಿದೆ. ಪ್ರಧಾನ ಕಚೇರಿಯನ್ನು ಹೊಂದಿಲ್ಲ ಮತ್ತು ತಾಂತ್ರಿಕವಾಗಿ ಅರ್ಹರನ್ನು ತನ್ನಲ್ಲಿ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಅಗತ್ಯಕ್ಕೆ ತಕ್ಕಂತಹ ಸಿಬ್ಬಂದಿ, ನೌಕರರ ನೇಮಕಾತಿ ಆಗಿಲ್ಲ. ಒಂದು ವರ್ಷದ ಒಪ್ಪಂದ ಮೂರು ವರ್ಷವಾದರೂ ಮುಗಿದಿರುವುದಿಲ್ಲ. ಇಂತಹ ಕೆಲವು ಕಾರಣಗಳಿಂದ ನಮ್ಮ ಮೆಟ್ರೋ ಜಾಲ ವಿಸ್ತರಣೆ ತಡವಾಗುತ್ತಿದೆ.












Click it and Unblock the Notifications