ಮತ್ತಿಕೆರೆಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿದ ಬಾಲಕನ ಸ್ಥಿತಿ ಗಂಭೀರ

ಬೆಂಗಳೂರು, ಮೇ 16: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನ ಸ್ಥಿತಿ ಗಂಭೀರವಾಗಿರುವ ಘಟನೆ ಮತ್ತಿಕೆರೆ ಬಳಿ ನಡೆದಿದೆ.

ನಿಖಿಲ್ (14) ಅಸ್ವಸ್ಥ ಬಾಲಕ, ಕ್ರಿಕೆಟ್ ಆಡುತ್ತಿರುವಾಗ ರಸ್ತೆಯ ಮೇಲೆ ಬಿದ್ದಿದ್ದ ಹೈಟೆನ್ಷನ್ ತಂತಿ ತಾಗಿ ಅಸ್ವಸ್ಥಗೊಂಡಿದ್ದು, ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಇದೀಗ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಒಂದು ವಾರದ ಹಿಂದಷ್ಟೇ ಮಹಾಲಕ್ಷ್ಮೀ ಲೇಔಟ್‌ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನ ಸ್ಥಿತಿ ಗಂಭೀರವಾಗಿತ್ತು. ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡಿ ಬದುಕಿ ಬಂದಿದ್ದ.

14 year old boy electrocuted during playing cricket in Mattikere

ಈಗ ಅಂಥದ್ದೇ ಘಟನೆ ಮರುಕಳಿಸಿದೆ. ಮಲ್ಲೇಶ್ವರಂ ಪ್ರದೇಶದಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳು ಬಿದ್ದಿರುವುದರ ಕುರಿತು ಬೆಸ್ಕಾಂ ಹಾಗೂ ಬಿಬಿಎಂಪಿಗೆ ದೂರು ನೀಡಿದ್ದರೂ ಕೂಡ ಇದುವರೆಗೆ ಸರಿ ಮಾಡಿಲ್ಲ ಆ ಕಡೆ ತಲೆಯನ್ನೇ ಹಾಕಿಲ್ಲ.

ದೂರು ನೀಡಿದ ಬಳಿಕ ಬಂದು ಅದೊಂದೇ ತಂತಿಯನ್ನು ಸರಿ ಮಾಡುವುದಲ್ಲ ಆ ಪ್ರದೇಶದಲ್ಲಿ ಎಲ್ಲೆಲ್ಲಿ ಸಮಸ್ಯೆಯಾಗಿದೆ ಎನ್ನುವುದನ್ನು ಕೂಡ ನೋಡಬೇಕಿದೆ. ಈಗಲಾದರೂ ಎಚ್ಚೆತ್ತುಕೊಂಡು ವಿದ್ಯುತ್ ಕಂಬ, ತಂತಿ ಬಿದ್ದಿರುವುದನ್ನು ಸರಿಪಡಿಸಿ ಸಾರ್ವಜನಿಕರ ಜೀವವನ್ನು ಕಾಪಾಡಬೇಕೆಂಬುದು ನಮ್ಮ ವಿನಂತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+