ಟ್ರಾಫಿಕ್ ದಂಡಕ್ಕೆ 50% ರಿಯಾಯಿತಿ: ಬೆಂಗಳೂರು ಪೊಲೀಸರು ಸಂಗ್ರಹಿಸಿದ ಒಟ್ಟು ದಂಡವೆಷ್ಟು ಗೊತ್ತಾ?
ಫೆಬ್ರವರಿ 2ರಂದು ಘೋಷಣೆಯಾಗಿದ್ದ 50% ರಿಯಾಯಿತಿ ಆಫರ್ ಫೆಬ್ರವರಿ 11ಕ್ಕೆ ಕೊನೆಗೊಂಡಿದೆ.
ಬೆಂಗಳೂರು, ಫೆಬ್ರವರಿ. 12: ಸಂಚಾರಿ ನಿಯಮ ಉಲ್ಲಂಘನೆ ದಂಡದಲ್ಲಿ ರಿಯಾಯಿತಿ ಘೋಷಿಸಿದ ನಂತರ ಬೆಂಗಳೂರು ಟ್ರಾಫಿಕ್ ಪೊಲೀಸರು ಕಳೆದ 9 ದಿನಗಳಲ್ಲಿ 120 ಕೋಟಿಗೂ ಅಧಿಕ ದಂಡವನ್ನು ಸಂಗ್ರಹಿಸಿದ್ದಾರೆ.
ಕರ್ನಾಟಕ ಸರ್ಕಾರವು ಬಾಕಿ ಉಳಿದಿರುವ ಟ್ರಾಫಿಕ್ ದಂಡದ ಪಾವತಿಗೆ 50% ರಿಯಾಯಿತಿಯನ್ನು ಘೋಷಿಸಿದ ನಂತರ ಒಂಬತ್ತು ದಿನಗಳಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು 120 ಕೋಟಿ ರೂಪಾಯಿಗೂ ಅಧಿಕ ಹೆಚ್ಚು ದಂಡವನ್ನು ಸಂಗ್ರಹಿಸಿದ್ದಾರೆ.
ಫೆಬ್ರವರಿ 2ರಂದು ಘೋಷಣೆಯಾಗಿದ್ದ ರಿಯಾಯಿತಿ ಆಫರ್ ಫೆಬ್ರವರಿ 11ಕ್ಕೆ ಕೊನೆಗೊಂಡಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಸರ್ಕಾರ ಬಾಕಿಯಿರುವ ದಂಡಕ್ಕೆ ರಿಯಾಯಿತಿ ಘೋಷಿಸಿತ್ತು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅಧ್ಯಕ್ಷತೆಯಲ್ಲಿ ಕಳೆದ ಜನವರಿ 27ರಂದು ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು. ನಂತರ ಕಾನೂನು ಸೇವೆಗಳ ಪ್ರಾಧಿಕಾರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದರಂತೆ ರಿಯಾಯಿತಿ ಸರಕಾರ ಶೇ.50ರಷ್ಟು ರಿಯಾಯಿತಿ ನೀಡಲು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು.
ಇನ್ನು ರಿಯಾಯಿತಿ ಘೋಷನೆಯಾಗುತ್ತಿದ್ದಂತೆ, ಇಷ್ಟು ದಿನ ಸಮಚಾರಿ ಪೊಲೀಸರನ್ನು ಕಂಡು ದೂರ ಹೋಗುತ್ತಿದ್ದವರೆಲ್ಲಾ ಅವರ ಬಳಿಯೇ ಬಂದು ಖುದ್ದಾಗಿ ದಂಡ ಕಟ್ಟಿದ್ದಾರೆ. ಪರಿಣಾಮ ಕೇವಲ 10 ದಿನಗಳ ಅವಧಿಯಲ್ಲಿ 120 ಕೋಟಿಗೂ ಅಧಿಕ ದಂಡ ಸಂಗ್ರಹವಾಗಿದ್ದು, 41 ಲಕ್ಷ ಪ್ರಕರಣಗಳು ಇತ್ಯರ್ಥವಾಗಿವೆ.
ಸಾವಿರಾರು ಮಂದಿ ಬಾಕಿ ದಂಡ ಪಾವತಿಸಿದ್ದು, ಸರ್ಕಾರದ ಬೊಕ್ಕಸ ತುಂಬಿದೆ. 50 ಪರ್ಸೆಂಟ್ ರಿಯಾಯಿತಿಯಿಂದಾಗಿ ಕಳೆದ 10 ದಿನಗಳಲ್ಲಿ ಬರೋಬ್ಬರಿ 120 ಕೋಟಿ 76 ಲಕ್ಷ 40 ಸಾವಿರದ 161 ರೂಪಾಯಿ ಹಣ ಹರಿದುಬಂದಿದೆ.

ಇನ್ನು, ಬಾಕಿ ಉಳಿಸಿಕೊಂಡಿರುವ ದಂಡ ಕಟ್ಟಲು ಜನರು ಮುಗಿ ಬಿಳುತ್ತಿದ್ದು, ದಿನಾಂಕ ವಿಸ್ತರಣೆ ಮಾಡಬೇಕು ಎಂದು ಸಂಚಾರಿ ಪೊಲೀಸರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇನ್ನೊಂದು ಅಚ್ಚರಿಯ ವಿಷಯವೆಂದರೆ, ಸರ್ಕಾರ ಬಾರಿ ಉಳಿಸಿಕೊಂಡ ದಂಡಕ್ಕೆ 50 ಪರ್ಸೆಂಟ್ ರಿಯಾಯಿತಿ ಘೋಷಿಸುವ ಮುನ್ನವೇ ಜನವರಿಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು 49 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದರು.












Click it and Unblock the Notifications