ಬೆಂಗಳೂರು ಬಂದ್ ವೇಳೆ ಹಿಂಸಾಚಾರ ನಡೆಸಿದ್ದ 12 ಮಂದಿ ಬಂಧನ
ಬೆಂಗಳೂರು, ಸೆಪ್ಟೆಂಬರ್ 12: ಖಾಸಗಿ ಸಾರಿಗೆ ಸಂಸ್ಥೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ವೇಳೆ ಕ್ಯಾಬ್, ಆಟೋರಿಕ್ಷಾ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ಕೆಲವು ಪ್ರತಿಭಟನಾಕಾರರು ಹಲ್ಲೆ ಮಾಡಿದ ಆರೋಪದ ಮೇಲೆ ಒಂದು ದಿನದ ನಂತರ, ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಪಶ್ಚಿಮ ವಿಭಾಗದಲ್ಲಿ ಗರಿಷ್ಠ ಏಳು ಪ್ರಕರಣಗಳು ದಾಖಲಾಗಿವೆ.
ಸೋಮವಾರ ಖಾಸಗಿ ಸಾರಿಗೆ ಸಂಸ್ಥೆಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದವು. ಭಾನುವಾರ ಮಧ್ಯರಾತ್ರಿಯಿಂದಲೇ ಬಂದ್ ಆರಂಭಗೊಂಡಿದ್ದು, ಕೆಲವರಿಂದ ಹಲವಾರು ಕ್ಯಾಬ್‌ಗಳ ಗ್ಲಾಸ್‌ಗಳಿಗೆ ಕಲ್ಲೂ ತೂರಾಟ ನಡೆದು ಹಾನಿಗೊಳಗಾಗಿವೆ. ಬಂದ್‌ನ ಹೊರತಾಗಿಯೂ ಪ್ರಯಾಣಿಕರನ್ನು ಸಾಗಿಸಲು ಕೆಲವು ಚಾಲಕರು ಕಪಾಳಮೋಕ್ಷ ಮತ್ತು ಹಲ್ಲೆಗೊಳಗಾದ ಹಲವಾರು ಘಟನೆಗಳೂ ನಡೆದಿವೆ.

ವೀಡಿಯೋ ದೃಶ್ಯಾವಳಿ ಮತ್ತು ಬಂದ ದೂರುಗಳ ಆಧಾರದ ಮೇಲೆ ಬೆಂಗಳೂರು ಪೊಲೀಸರು ನಗರದ ವಿವಿಧ ಠಾಣೆಗಳಲ್ಲಿ ಒಟ್ಟು 12 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಒಟ್ಟು ಏಳು ಎಫ್‌ಐಆರ್‌ಗಳು ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
Hooliganism has been going on continuously inside the city since this morning. Police what are you doing?@BlrCityPolice @CPBlr @BlrCityPolice @CMofKarnataka @DKShivakumar
— freedom of speech B,lore (@freedomlore1) September 11, 2023
Take action against these people otherwise hooliganism will increase in the city. pic.twitter.com/bSKcULa56y
ಬೆಂಗಳೂರಿನ ಈಶಾನ್ಯ ವಿಭಾಗದಲ್ಲಿ 2 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಅದರ ಆಧಾರದ ಮೇಲೆ ಮೂವರನ್ನು ಬಂಧಿಸಲಾಗಿದೆ. ಉತ್ತರ ವಿಭಾಗದಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ. ಕೇಂದ್ರ ಮತ್ತು ಆಗ್ನೇಯ ವಿಭಾಗದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದ್ದು, ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ರಾಪಿಡೋ ಚಾಲಕನ ಮೇಲೆ ಹಲ್ಲೆ ನಡೆಸಿ ಮೊಟ್ಟೆ ಎಸೆದಿರುವ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ರಾಪಿಡೋ ಬೈಕ್ ಬುಕ್ ಮಾಡಿ ಚಾಲಕ ಸ್ಥಳಕ್ಕೆ ಬಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಬಂಧಿತರನ್ನು ಪುನೀತ್, ಮಣಿ ಮತ್ತು ಶರಣ್ ಎಂದು ಗುರುತಿಸಲಾಗಿದೆ.
ಸೋಮವಾರದ ಬೆಂಗಳೂರು ಬಂದ್ ವೇಳೆ ತಮ್ಮ ವಾಹನಗಳಿಗೆ ಹಾನಿ ಮತ್ತು ದಾಳಿಯಾದರೆ ಸಂತ್ರಸ್ತರು ಮುಂದೆ ಬಂದು ದೂರು ದಾಖಲಿಸುವಂತೆ ಪೊಲೀಸರು ಕೇಳಿಕೊಂಡಿದ್ದಾರೆ. ಖಾಸಗಿ ಸಾರಿಗೆ ಸಂಘಟನೆಗಳು 32 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದು, ಈ ಪೈಕಿ 27 ಬೇಡಿಕೆಗಳನ್ನು ಈಡೇರಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಒಪ್ಪಿಗೆ ಸೂಚಿಸಿದ ನಂತರ ಮುಷ್ಕರವನ್ನು ಹಿಂಪಡೆಯಲಾಗಿದೆ.












Click it and Unblock the Notifications