ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಶಾಸಕರು ಪ್ರತಿನಿಧಿಸುವ ಬೆಂಗಳೂರಿನ 11 ಕ್ಷೇತ್ರಗಳಿಗೆ 255 ಕೋಟಿ ರೂ ಅನುದಾನ- ಅಂಕಿಅಂಶ

ಬೆಂಗಳೂರು, ಮಾರ್ಚ್‌ 11: ಬಿಜೆಪಿ ಶಾಸಕರು ಪ್ರತಿನಿಧಿಸುವ ಬೆಂಗಳೂರಿನ ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಒಟ್ಟು 255 ಕೋಟಿ ರೂ. ನೀಡಲಾಗಿದೆ. 2022-23ರ ಬಿಬಿಎಂಪಿ ಬಜೆಟ್‌ನಲ್ಲಿ ಅನುದಾನವನ್ನು ಘೋಷಿಸಲಾಗಿದೆ. ಕಾಂಗ್ರೆಸ್ ಅಥವಾ ಜೆಡಿಎಸ್ ಪ್ರತಿನಿಧಿಸುವ ಕ್ಷೇತ್ರಗಳೊಂದಿಗೆ ಯಾವುದೇ ಅನುದಾನ ಹಂಚಿಕೆಯಾಗಿಲ್ಲ. ಕಳೆದ ವರ್ಷ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಸರ್ಕಾರ ವಿತರಿಸಿದ 8,200 ಕೋಟಿ ರೂ.ಗೆ ಹೆಚ್ಚುವರಿಯಾಗಿ ಇದನ್ನು ಹಂಚಿಕೆ ಮಾಡಲಾಗಿದೆ.

255 ಕೋಟಿ ರೂ.ಗಳಲ್ಲಿ ಆರ್‌ಆರ್‌ನಗರ, ಕೆಆರ್‌ ಪುರಂ ಮತ್ತು ಯಶವಂತಪುರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂ.ಗಳನ್ನು ನೀಡಲಾಗಿದೆ. ಇದು ಸಚಿವರಾದ ಎಸ್‌ಟಿ ಸೋಮಶೇಖರ್‌, ಎನ್‌ ಮುನಿರತ್ನ ಮತ್ತು ಬೈರತಿ ಬಸವರಾಜ ಅವರ ಪ್ರಭಾವವನ್ನು ಸೂಚಿಸುತ್ತದೆ. ಬೆಂಗಳೂರು ದಕ್ಷಿಣ ಮತ್ತು ಬೊಮ್ಮನಹಳ್ಳಿಗೆ ತಲಾ 30 ಕೋಟಿ ರೂ. ಅನುದಾನ ನೀಡಲಾಗಿದೆ.

Bengaluru: 11 BJP-ruled constituencies get Rs 255 crore grant from BBMP

ಪದ್ಮನಾಭನಗರಕ್ಕೆ 20 ಕೋಟಿ ರೂ, ಯಲಹಂಕಕ್ಕೆ 15 ಕೋಟಿ ರೂ ಗಳನ್ನು ನೀಡಲಾಗಿದೆ. ಉಳಿದ ನಾಲ್ಕು ಕ್ಷೇತ್ರಗಳಾದ ಸಿವಿ ರಾಮನ್ ನಗರ, ಮಹಾಲಕ್ಷ್ಮಿ ಲೇಔಟ್, ಚಿಕ್ಕಪೇಟೆ ಮತ್ತು ಮಲ್ಲೇಶ್ವರಂ ತಲಾ 10 ಕೋಟಿ ರೂ. ಗಳನ್ನು ನೀಡಲಾಗಿದೆ. ಬಿಜೆಪಿ ಶಾಸಕರು ಪ್ರತಿನಿಧಿಸುವ ಮಹದೇವಪುರ, ರಾಜಾಜಿನಗರ, ಬಸವನಗುಡಿ ಕ್ಷೇತ್ರಗಳು ಯಾವುದೇ ಪಾಲನ್ನು ಪಡೆಯದಿರುವುದು ಅಚ್ಚರಿಗೆ ಕಾರಣವಾಗಿದೆ.

ಬಿಬಿಎಂಪಿಯ 2022-23ರ ಬಜೆಟ್‌ನಲ್ಲಿ ವಿವೇಚನಾಯುಕ್ತ ಬಳಕೆಗಾಗಿ 400 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಮೇಯರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ 100 ಕೋಟಿ ರೂ ನೀಡಲಾಗಿದೆ. ಉಳಿದ 50 ಕೋಟಿ ರೂ.ಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೀಡಲಾಗಿದೆ. ಆದಾಗ್ಯೂ, ಈ ಹಣವನ್ನು ಹೇಗೆ ಖರ್ಚು ಮಾಡಲಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಸಾರ್ವಜನಿಕ ದಾಖಲೆಗಳಿಲ್ಲ.

Bengaluru: 11 BJP-ruled constituencies get Rs 255 crore grant from BBMP

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಟ್ಟು 11,163 ಕೋಟಿ ರೂ.ಗಳ ಬಜೆಟ್‌ ಅನ್ನು ಮಂಡಿಸಿದೆ. ಕೇಂದ್ರ-ರಾಜ್ಯಗಳ ಅನುದಾನವನ್ನು 4,093 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಬಜೆಟ್‌ ವೆಚ್ಚವು 11,157 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಆಸ್ತಿ ತೆರಿಗೆ ಮತ್ತು ಇತರ ಸೆಸ್‌ಗಳು ಬಿಬಿಎಂಪಿ ಆದಾಯದ ಶೇಕಡಾ 40 ರಷ್ಟಿದ್ದರೆ. 33 ಶೇಕಡಾ ಹಣವನ್ನು ರಾಜ್ಯ ಸರ್ಕಾರದ ಅನುದಾನದಿಂದ ಬರಬಹುದು.

ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸುವ ಮೂಲಕ ಸುಮಾರು 800 ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆಯನ್ನು ಬಿಬಿಎಂಪಿ ಹೊಂದಿದೆ.

Bengaluru: 11 BJP-ruled constituencies get Rs 255 crore grant from BBMP

ಪಾಲಿಕೆಯು ನಗರದಲ್ಲಿ ಗೋಕುಲ ರಸ್ತೆ, ಮತ್ತಿಕೆರೆ ಬಳಿ, ಜಾಲಹಳ್ಳಿಯ ಒಆರ್‌ಆರ್- ಪೈಪ್‌ಲೈನ್ ಜಂಕ್ಷನ್, ಜಯಮಹಲ್ ರಸ್ತೆಯ ಮೇಖ್ರಿ ವೃತ್ತದ ಕೆಳಸೇತುವೆ, ಸದಾಶಿವನಗರ ಪೊಲೀಸ್ ಠಾಣೆ ವೃತ್ತ ಸೇರಿದಂತೆ ಕೆಲವು ಪ್ರಮುಖ ಫ್ಲೈಓವರ್‌ಗಳನ್ನು ಘೋಷಿಸಿದೆ.

150 ಕಿ.ಮೀ ರಸ್ತೆ ವೈಟ್ ಟಾಪಿಂಗ್‌ಗೆ ರೂ.1,410 ಕೋಟಿ ಹಾಗೂ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ 350 ಕಿ.ಮೀ ಸಮಗ್ರ ಅಭಿವೃದ್ಧಿಗೆ ರೂ.450 ಕೋಟಿ ಮೀಸಲಿಡಲಾಗಿದೆ. ಬನ್ನೇರುಘಟ್ಟ ರಸ್ತೆ ಅಗಲೀಕರಣ, ವಿಲ್ಸನ್ ಗಾರ್ಡನ್ ಮೇಲ್ಸೇತುವೆಯಲ್ಲಿ ಗ್ರೇಡ್ ಸಪರೇಟರ್ ಮತ್ತು ಯಲಹಂಕ ಮೇಲ್ಸೇತುವೆಗೂ ಬಜೆಟ್ ಹಂಚಿಕೆ ಮಾಡಲಾಗಿದೆ. ಮಿನರ್ವ ಜಂಕ್ಷನ್‌ಗಳಲ್ಲಿ ಗ್ರೇಡ್ ಸಪರೇಟರ್‌ಗೆ ರೂ 137 ಕೋಟಿ ಮತ್ತು ಸುರಂಜನ್ ದಾಸ್ ಜಂಕ್ಷನ್‌ನಲ್ಲಿ ಫ್ಲೈಓವರ್‌ಗೆ ರೂ 104 ಕೋಟಿಗಳನ್ನು ಘೋಷಿಸಲಾಗಿದೆ.

ಇನ್ನೆರಡು ತಿಂಗಳಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಜೆಪಿ ಆಡಳಿತ ನಡೆಸುತ್ತಿರುವ ಕ್ಷೇತ್ರಗಳಿಗೆ ಅನುದಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+