ಸೈಬರ್ ಕ್ರೈಂ : ಐಎಎಸ್ ಅಧಿಕಾರಿ ಖಾತೆಯಿಂದ 1 ಲಕ್ಷ ರೂ. ಕಳವು

ಬೆಂಗಳೂರು, ಡಿಸೆಂಬರ್ 05 : ಐಎಎಸ್ ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಮಾರು 1 ಲಕ್ಷ ರೂ.ಗಳನ್ನು ಅಧಿಕಾರಿಯ ಅಕೌಂಟ್‌ನಿಂದ ಕದಿಯಲಾಗಿದೆ.

ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಅವರ ಎಸ್‌ಬಿಐ ಖಾತೆಯಿಂದ ಹಣ ಕದಿಯಲಾಗಿದೆ. ಎಸ್‌ಬಿಐ ಬ್ಯಾಂಕ್‌ನಿಂದ ಎಂದು ಕರೆ ಮಾಡಿದ್ದ ವ್ಯಕ್ತಿಗೆ ಅವರು ಖಾತೆಯ ವಿವರಗಳನ್ನು ನೀಡಿದ್ದರು.

ನವೆಂಬರ್ 19ರಂದು ಸಂತೋಷ್ ಸುಬ್ರಮಣ್ಯ ಎಂಬುವವರು ಬಿ.ಬಸವರಾಜು ಅವರಿಗೆ ಕರೆ ಮಾಡಿದ್ದರು. ಎಸ್‌ಬಿಐ ಉದ್ಯೋಗಿ ಎಂದು ಹೇಳಿದ್ದ ಅವರು, ನಿಮ್ಮ ಡೆಬಿಟ್ ಕಾರ್ಡ್ ವ್ಯಾಲಿಡಿಟಿ ಮುಗಿದು ಹೋಗಿದೆ ಎಂದು ಖಾತೆ ವಿವರ ಕೇಳಿದ್ದರು.

1 lakh stolen from IAS officer bank account

ಬ್ಯಾಂಕ್ ಖಾತೆ ಪಡೆದ ವ್ಯಕ್ತಿ ತಕ್ಷಣ ಅವರ ಫೋನ್‌ಗೆ ಓಟಿಪಿ ಕಳಿಸಿದ್ದ. ಆಗಲೂ ಅನುಮಾನ ಬಾರದ ಅವರು ಅದನ್ನು ಕರೆ ಮಾಡಿದ್ದ ವ್ಯಕ್ತಿಗೆ ನೀಡಿದ್ದರು. ಕೆಲವೇ ನಿಮಿಷದಲ್ಲಿ ಅವರ ಖಾತೆಯಿಂದ ಹಣ ಡ್ರಾ ಆಗಿದೆ.

ಬಸವರಾಜು ಅವರು ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರಿಗೆ ಕರೆ ಬಂದ ನಂಬರ್ ಬ್ಲಾಕ್ ಲಿಸ್ಟ್‌ನಲ್ಲಿ ಸೇರಿದೆ. ಸೈಬರ್ ಕ್ರೈಂ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.

ಬೆಂಗಳೂರು ನಗರದಲ್ಲಿ ವರ್ಷದಿಂದ ವರ್ಷಕ್ಕೆ ಸೈಬರ್ ಕ್ರೈಂ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. 2018ರ ನವೆಂಬರ್ 3ರ ತನಕ 3953 ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರಿನಲ್ಲಿ 8 ಸೈಬರ್ ಕ್ರೈಂ ಪೊಲೀಸ್ ಠಾಣೆಗಳನ್ನು ತೆರೆಯಬೇಕು ಎಂದು ಗೃಹ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+