ಸರ್ಕಾರಿ ಜಾಗದಲ್ಲಿ ಧಾರ್ಮಿಕ ಕೇಂದ್ರ: ಪತ್ತೆಗೆ ಬಿಬಿಎಂಪಿಗೆ ಹೈಕೋರ್ಟ್ ಅಂತಿಮ ಗಡುವು

ಬೆಂಗಳೂರು,ಜನವರಿ30: ಸರ್ಕಾರಿ ಜಾಗಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ಗುರುತಿಸಲು ಬಿಬಿಎಂಪಿಗೆ ಹೈಕೋರ್ಟ್ ಅಂತಿಮ ಗಡುವು ನೀಡಿದೆ.

ಜ.21ರಿಂದ 23ರ ತನಕ ವಾರ್ಡ್ ಮಟ್ಟದಲ್ಲಿ ಕಂದಾಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳನ್ನು ಒಳಗೊಂಡು ಸಮೀಕ್ಷೆ ನಡೆಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ 1,588 ಧಾರ್ಮಿಕ ಕಟ್ಟಡಗಳಿದ್ದು, ಅವುಗಳಲ್ಲಿ 1,337 ಕಟ್ಟಡಗಳು ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ದಿನಾಂಕಕ್ಕಿಂತ (2009 ಸೆಪ್ಟೆಂಬರ್ 29) ಮೊದಲೇ ನಿರ್ಮಾಣಗೊಂಡಿವೆ ಎಂದು ಮಾಹಿತಿ ನೀಡಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್ ಅವರು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠಕ್ಕೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು.

1.5k Religious Structures On Public Land In Bengaluru, Says BBMP, High Court Seeks Details

'ಅಕ್ರಮ ಕಟ್ಟಡಗಳನ್ನು ಗುರುತಿಸಲು ಸಮೀಕ್ಷೆ ಹೇಗೆ ನಡೆಸಬೇಕು ಎಂಬುದನ್ನು ಲಿಖಿತವಾಗಿ ತಿಳಿಸಿದಂತೆ ಕಾಣಿಸುತ್ತಿಲ್ಲ. ಪಾಲಿಕೆಗೆ ಈ ಬಾರಿ ಕೊನೆಯ ಅವಕಾಶ ನೀಡಲಾಗುವುದು.

ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಲು ಮೂರು ವಾರಗಳ ಸಮಯ ನೀಡಲಾಗುವುದು. ಫೆಬ್ರುವರಿ 26ರೊಳಗೆ ಅನುಸರಣಾ ವರದಿಯನ್ನು ಅಫಿಡವಿಟ್ ರೂಪದಲ್ಲಿ ಸಲ್ಲಿಸಬೇಕು' ಎಂದು ಪೀಠ ನಿರ್ದೇಶನ ನೀಡಿತು.

ಸಮೀಕ್ಷೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ಸಮೀಕ್ಷೆಯ ಉದ್ದೇಶ, ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಆದೇಶಗಳ ಬಗ್ಗೆ ಲಿಖಿತವಾಗಿ ತಿಳಿಸಲಾಗಿದೆಯೇ ಎಂದು ಆಯುಕ್ತರನ್ನು ಪೀಠ ಪ್ರಶ್ನಿಸಿತು.

Recommended Video

      ಮ್ಯಾನ್ ಹೋಲ್ ಕ್ಲೀನ್ ಮಾಡೋಕೆ ರೋಬೋಟ್ ಬರ್ತಿದಾನೆ !! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+