ಬೆಳಗಾವಿ : ಶಿಕ್ಷಕರಿಗೆ ರಜಾ, ಕಳ್ಳರಿಗೆ ಮಜಾ!

ಬೆಳಗಾವಿ, ಮೇ 4 : ರಜೆಗೆಂದು ಪರ ಊರುಗಳಿಗೆ ತೆರಳಿದ್ದ ಶಾಲಾ ಶಿಕ್ಷರ ಮನೆಗಳನ್ನು ದೋಚಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಶನಿವಾರ ರಾತ್ರಿ ವಿವೇಕನಗರ ಮತ್ತು ದೇಸಾಯಿ ಬ್ಲಾಕ್ ನಲ್ಲಿರುವ 10 ಶಿಕ್ಷಕರ ಮನೆಗಳನ್ನು ದೋಚಲಾಗಿದ್ದು, ಮನೆ ಮುಂದೆ ನಿಲ್ಲಿಸಿದ್ದ ಕಾರುಗಳನ್ನು ಕದ್ದೊಯ್ಯಲಾಗಿದೆ.

ಶಾಲೆಗಳಿಗೆ ರಜೆ ಇದ್ದ ಶಿಕ್ಷಕರು ತಮ್ಮ ಕುಟುಂಬದೊಂದಿಗೆ ಪರ ಊರಿಗೆ ತೆರಳಿದ್ದರು, ಇದನ್ನು ಅರಿತ ಕಳ್ಳರ ಗುಂಪು ಶನಿವಾರ ರಾತ್ರಿ ರಾಯಭಾಗ ಪಟ್ಟಣದ ವಿವೇಕನಗರ ಮತ್ತು ದೇಸಾಯಿ ಬ್ಲಾಕ್‌ನಲ್ಲಿರುವ 10 ಮಂದಿ ಶಿಕ್ಷಕರ ಮನೆಗಳಲ್ಲಿ ಸರಣಿ ಕಳ್ಳತನ ನಡೆಸಿದ್ದಾರೆ.

Police

ಎಲ್ಲಾ 10 ಮನೆಗಳ ಬೀಗ ಮುರಿಯಲಾಗಿದ್ದು, ಲಕ್ಷಾಂತರ ರೂ. ಬೆಳೆಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಮನೆಯನ್ನು ದೋಚಿದ ನಂತರ ಮನೆಯ ಮುಂದೆ ನಿಲ್ಲಿಸಿದ್ದ ಕಾರನ್ನು ತೆಗೆದುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಶಾಲೆಗಳಿಗೆ ರಜೆ ಇರುವ ಕಾರಣ ಶಿಕ್ಷಕರ ಕುಟುಂಬದವರು ಸ್ವಂತ ಊರುಗಳಿಗೆ ಹೋಗಿದ್ದು, ಹಲವು ದಿನಗಳಿಂದ ಅವರ ಮೆನಗಳಿಗೆ ಬೀಗ ಹಾಕಲಾಗಿದೆ. ಇದನ್ನು ಅರಿತ ಸ್ಥಳೀಯರು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರಾಯಭಾಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಪರ ಊರುಗಳಿಗೆ ತೆರಳಿರುವ ಶಿಕ್ಷರು ವಾಪಸ್ ಬಂದ ಬಳಿಕ ಕಳುವಾಗಿರುವ ಆಭರಣ, ವಸ್ತು ಮತ್ತು ನಗದಿನ ಕುರಿತು ಮಾಹಿತಿ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ಕಾರನ್ನು ಕದ್ದು ಪರಾರಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪರಿಶೀಲನೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+