ಪ್ರೇಮ ವಿವಾಹಕ್ಕೆ ಸಾಕ್ಷಿ, ಬೆತ್ತಲೆಗೊಳಿಸಿ ಥಳಿತ

ಬೆಳಗಾವಿ, ನ.14 : ಪ್ರೇಮ ವಿವಾಹಕ್ಕೆ ಸಾಕ್ಷಿಯಾದ ಇಬ್ಬರು ಯುವಕರನ್ನು ವಿವಸ್ತ್ರಗೊಳಿಸಿ ಹಾಕಿ ಸ್ಟಿಕ್‍ನಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನ.3ರ ಮಧ್ಯಾಹ್ನ ಈ ಕೃತ್ಯ ನಡೆದಿದ್ದು ಆರೋಪಿತರಲ್ಲಿ ಓರ್ವ ಈ ದೃಶ್ಯಗಳನ್ನು ಚಿತ್ರೀಕರಿಸಿದ್ದಾನೆ. ಹಲ್ಲೆ ಮಾಡಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಖೇದನೂರು ಗ್ರಾಮದ ಯುವಕರಾದ ಅನಿಲ್ ಮತ್ತು ನಾಗೇಶ್ ತನ್ನ ಗೆಳೆಯ ಪ್ರಭಾಕರ್ ಹಾಗೂ ಶುಭಾಂಗಿ ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿದ್ದರು. ಇದನ್ನು ಸಹಿಸದ ಸುರೇಶ ಘಾಟನೆ ಮತ್ತು ಆತನ 4 ಸಹಚರರು ಸೇರಿ ಇಬ್ಬರು ಯುವಕರಿಗೆ ಥಳಿಸಿದ್ದಾರೆ.

Belagavi

ಉಚಗಾಂವ ಕ್ರಾಸ್ ಬಳಿ ಇರುವ ಮಥುರಾ ಹೋಟೆಲ್ ಪಕ್ಕದ ಶೆಡ್‍ವೊಂದಕ್ಕೆ ಯುವಕರನ್ನು ಕರೆದುಕೊಂಡು ಹೋದ ಪಿ ಸುರೇಶ ಘಾಟನೆ ಮತ್ತು ಇತರ ಆರೋಪಿಗಳು ಹಾಕಿ ಸ್ಟಿಕ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನ.3ರ ಮಧ್ಯಾಹ್ನ ಈ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. [ಶಿವಸೇನೆಯವರಿಗೆ ಬೇರೇನೂ ಕೆಲ್ಸ ಇಲ್ವಾ?]

ಯುವಕರನ್ನು ಬೆತ್ತಲೆ ಮಾಡಿ ಸುರೇಶ ಘಾಟನೆ ಥಳಿಸಿದ್ದು, ಹೊಡೆಯುವ ಏಟಿಗೆ ಹಾಕಿ ಸ್ಟಿಕ್ ಮುರಿದು ಹೋಗಿದೆ. ಯುವಕರು ಕೂಗಾಡುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಚಿತ್ರೀಕರಿಸಲಾದ ದೃಶ್ಯದಲ್ಲಿ ಸೆರೆಯಾಗಿದೆ. ಆರೋಪಿಗಳು ಬೆಳಗಾವಿ ಗ್ರಾಮೀಣ ಶಾಸಕ, ಬಿಜೆಪಿಯ ಸಂಜಯ ಪಾಟೀಲರ ಆಪ್ತರು ಎಂದು ಯುವಕರ ಸ್ನೇಹಿತರು ಆರೋಪಿಸುತ್ತಿದ್ದಾರೆ.

ಹಲ್ಲೆಗೊಳಗಾದ ಯುವಕರಲ್ಲಿ ನಾಗೇಶ್ ಇದುವರೆಗೂ ಮನೆಗೆ ಬಂದಿಲ್ಲ. ಅನಿಲ್ ತಮ್ಮ ತಂದೆ ಜೊತೆ ಐಜಿಪಿ ಭಾಸ್ಕರ್ ರಾವ್ ಕಚೇರಿಗೆ ಬಂದು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಘಟನೆ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಜಿಪಿ ಹೇಳುವುದೇನು : ಹಲ್ಲೆ ಮಾಡಿದ ಆರೋಪಿಗಳಾಗದ ಪಿ ಸುರೇಶ ಘಾಟನೆ ಸೇರಿದಂತೆ ನಾಲ್ವರು ಮಹಾರಾಷ್ಟ್ರಕ್ಕೆ ಸೇರಿದವರು ಎಲ್ಲರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಉತ್ತರ ವಲಯ ಐಜಿಪಿ ಭಾಸ್ಕರರಾವ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+