ಯಡಿಯೂರಪ್ಪ ಅವರ ಶಾದಿ ಹಟದ ಗುಟ್ಟೇನು..?
ಬೆಳಗಾವಿ, ನ. 27 : ಯಾಕೆ ಬೇಕು ಅಂದ್ರು ಹೋರಾಟ ನೋಡಿ.. ಅಲ್ಲದೇ ಯಡಿಯೂರಪ್ಪ ಅವರು ಹೋರಾಟಗಾರ ಅಂತಾ ಬೇರೆ ಕರೆಸಿಕೊಂಡವರು. ಅದೊಂದೆ ಕಾರಣಕ್ಕೆ ಏನೋ ಯಡಿಯೂರಪ್ಪ ಅವರು ಶಾದಿ ಭಾಗ್ಯ ವಿಸ್ತರಣೆಗಾಗಿ ಸದನದ ಬಾವಿಯಲ್ಲಿ ಧರಣಿ ಕುಳಿತಿದ್ದಾರೆ. ಕುಳಿತಿದ್ದು ಎಷ್ಟೋ ಹೊತ್ತೋ ಅಷ್ಟೇ ಹೊತ್ತು ಯಡಿಯೂರಪ್ಪ ನಿಂತಿದ್ದು ಉಂಟು, ರಾತ್ರಿ ಮಲಗಿದ್ದು ಇದೆ ಬಿಡಿ.
ಅದು ಹಾಗಿರಲಿ ಯಡಿಯೂರಪ್ಪ ಯಾರಿಗೂ ಜಗ್ಗಲ್ಲ ಬಗ್ಗಲ್ಲ ಅಂದ್ರೂ, ಅವರ ಮಂಡಿ ಕೇಳಬೇಕಲ್ರಿ.. ಅದಕ್ಕೆ ಏನೋ ನಿಮಗೆ ಗೊತ್ತಿರಲಿ ಬಿಎಸ್‌ವೈ ಒಂದು ಹಂತದಲ್ಲಿ ಶಾದಿ ಭಾಗ್ಯ ಹೋರಾಟಕ್ಕೆ ವಿರಾಮ ಕೊಟ್ಟು ಸದನದ ಚರ್ಚೆಯಲ್ಲಿ ಭಾಗವಹಿಸೋ ಮನಸ್ಸು ಮಾಡಿದ್ರು.. ಆದ್ರೆ ಮೆಡಮ್ ಬಿಡ್ತಿಲ್ವಂತೆ.. ಶಾದಿ ಭಾಗ್ಯ ಧರಣಿ ವಿಚಾರದಲ್ಲಿ ಯಡಿಯೂರಪ್ಪ ಅವರಿಗೆ ಆರಂಭದಿಂದಲೂ ಪ್ರತಿಯೊಂದಕ್ಕೂ ಸಲಹೆ ನೀಡಿದವರು ಶೋಭಾ ಕರಂದ್ಲಾಜೆ ಅವರಂತೆ.

ಯಾವ ಸಿಎಂ ವಿರುದ್ಧ ಯಡಿಯೂರಪ್ಪ ಅವರು ಗುಡುಗುತ್ತಿದ್ರೋ, ಅದೇ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರ ಧರಣಿ ಹಿಂತೆಗೆದುಕೊಳ್ಳಲು ಮನವಿ ಮಾಡಿದ್ರು.. ಎಲ್ಲೋ ಒಂದು ಕಡೆ ಯಡಿಯೂರಪ್ಪ ಅವರು ಕೂಡಾ ಧರಣಿಯಿಂದ ಹಿಂದೆ ಸರಿಯಲು ಮನಸ್ಸು ಮಾಡಿದ್ರಂತೆ.. ಆದ್ರೆ ಶೋಭಾ ಮೆಡಮ್ ಮಾತ್ರ ಬಿಡ್ತಿಲ್ವಂತೆ.
ಧರಣಿ ಹಿಂತೆಗೆದುಕೊಳ್ಳಲಿಕ್ಕೆ ಸದನದ ಬಾವಿ ಹಾರುವ ಮುನ್ನವೆ ಯಡಿಯೂರಪ್ಪ ಯೋಚನೆ ಮಾಡಿದ್ರಂತೆ. ಮಾಧ್ಯಮದವರ ಮುಂದೆ ಬೆಳಗಾವಿಯಲ್ಲಿ ಧರಣಿ ಮಾಡ್ತೇನೆ ಅಂದು ಬಿಟ್ಟಿದ್ರು.. ಹೀಗಾಗಿ ಬಿಎಸ್‌ವೈ ಸದನದ ಬಾವಿಗೆ ಹಾರೋ ಪರಿಸ್ಥಿತಿ ಬಂತಂತೆ. ವಿಧಾನ ಸಭೆಯಲ್ಲೂ ಎಲ್ಲಾ ಗುಡುಗಿದ ಮೇಲೆ ಸ್ಪೀಕರ್ ಸಿಎಂ ಮನವೊಲಿಸಿದ್ರು. ಆಗ ಧರಣಿಗೆ ವಿರಾಮ ಇಡುವ ಯೋಚನೆ ಮಾಡಿದ್ರು.
ಅಲ್ಲದೇ ಸದನದಲ್ಲಿ ಕಬ್ಬು ಬೆಳಗಾರರ ಬಗ್ಗೆ ಚರ್ಚೆ ನಡೆದಾಗ ಯಡಿಯೂರಪ್ಪ ಅವರಿಗೂ ರೈತರ ಪರ ಮಾತಾಡಿ ಸುದ್ದಿ ಮಾಡಬೇಕು ಅನ್ನೋ ಆಸೆ ಕಾಡ್ತಿತ್ತು.. ಕುಮಾರಸ್ವಾಮಿ ಅವರು ಕಬ್ಬು ಬೆಳಗಾರರ ವಿಚಾರದಲ್ಲಿ ಮಾತನಾಡ್ತಿದ್ದಾಗ ಬಾವಿಯೊಳಗೆ ಎದ್ದು ನಿಂತು ನೋಟ್ ಮಾಡಿಕೊಳ್ತಿದ್ದ ಯಡಿಯೂರಪ್ಪ, ಚೇ ನಮ್ಮ ವಿರೋಧ ಪಕ್ಷದ ನಾಯಕರು ಈ ವಿಷಯ ಬಿಡ್ತಿದ್ದಾರಲ್ಲ ನಾನಿದ್ದಿದ್ರೆ ಅಂತಾ ಮನಸ್ಸಲ್ಲೆ ಅಂದುಕೊಳ್ತಿದ್ರು. ಆದ್ರೆ ಧರಣಿಯಲ್ಲಿ ನಿರತರಾದ ಮೇಲೆ ಮಾತಡೋಹಾಗಿಲ್ವೇ..
ಮಂಡಿ ನೋವಿನ ನಡುವೆಯೂ ಬಿಎಸ್‌ವೈ ಎರಡನೇ ದಿನ ಧರಣಿ ಮುಂದುವರಿಸ್ತಿದ್ದಾರೆ ಅಂದ್ರೆ ಅವರಿಗೊಂದು ನಂಬಿಕೆ ಇತ್ತು.. ಮಾರ್ಷೆಲ್ ಮೂಲಕ ನನ್ನನ್ನ ಬಾವಿಯಿಂದ ಹೊರಹಾಕಿಸ್ತಾರೆ ಅಂತಾ.. ಆದ್ರೆ ಎರಡನೇ ದಿನ ಸದನ ಆರಂಭ ಆಗ್ತಿದ್ದ ಹಾಗೇ ಸಿಎಂ ಸ್ಪಷ್ಟವಾಗಿ ಹೇಳಿಬಿಟ್ರು ನಾವು ಇನ್ನ ಯಡಿಯೂರಪ್ಪ ಅವರ ಮನವೊಲಿಸಲ್ಲ ಅಂತಾ. ಕೊನೆಗೆ ಬಿಎಸ್ ವೈ ಒಂದು ಪ್ಲಾನ್ ಕೂಡಾ ಮಾಡಿದ್ರು. ಮಾಧ್ಯಮದವರಿಗೆ ಹೇಳಿ ನನ್ನನ್ನ ಇಲ್ಲಿಂದ ಹೊರ ಹಾಕಿಸಲಿಕ್ಕೆ ನೀವು ಸ್ಪೀಕರ್ ಗೆ ಸಲಹೆ ನೀಡಿ.
ಇಲ್ಲಿ ಒಬ್ಬನೆ ಕುಳಿತು ಮಂಡಿ ನೋವು ಸಾಕಾಗಿದೆ ಅಂತಾ.. ಇದೇನಾದ್ರು ವರ್ಕ್ ಆದ್ರೆ ಬಿಎಸ್‌ವೈ ಸದನದ ಒಳಗಿನ ಹೋರಾಟಕ್ಕೆ ವಿರಾಮ ಸಿಗಬಹುದೇನೋ.. ಆದ್ರೆ ಕಬ್ಬು ಬೆಳೆಗಾರರ ಜೊತೆ ಹೋಗಿ ಯಡಿಯೂರಪ್ಪ ಧರಣಿ ಕುಳಿತು ಬಿಟ್ಟರೇ ಅನ್ನೋ ಚಿಂತೆ ಕೂಡಾ ಸರ್ಕಾರಕ್ಕಿದೆ.. ಆದ್ರೂ ನೋಡಿ ಯಡಿಯೂರಪ್ಪ ಹೋರಾಟಗಾರ.. ಬಟ್ ಅವರ ಜೊತೆಯವರು ಯಾಕೆ ಹಿಂಗೆ ಮಾಡ್ತಾರೆ.












Click it and Unblock the Notifications