ಯಡಿಯೂರಪ್ಪ ಸಂಧಾನ ಯತ್ನ: ಚಿಕ್ಕೋಡಿಯಲ್ಲಿ ಬಗೆಹರಿಯದ ಅಸಮಾಧಾನ

Recommended Video

      Lok Sabha Election 2019 : ಸಮಸ್ಯೆಯ ಸುಳಿಯಿಂದ ಹೊರಬಂದ ಬಿಜೆಪಿ | Oneindia Kannada

      ಚಿಕ್ಕೋಡಿ, ಏಪ್ರಿಲ್ 01: ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ತೊಡಕಾಗಬಹುದಾಗಿದ್ದ ಅಸಮಾಧಾನದ ಬುಗ್ಗೆಯನ್ನು ಯಡಿಯೂರಪ್ಪ ಅವರು ಸಂಧಾನದ ಮೂಲಕ ಪರಿಹರಿಸರಿಸುವ ಯತ್ನವನ್ನು ಇಂದು ಮಾಡಿದ್ದಾರೆ.

      ಯಡಿಯೂರಪ್ಪ ಅವರು ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರುವ ಪ್ರಬಲ ಮುಖಂಡರಾದ ಉಮೇಶ್ ಕತ್ತಿ, ರಮೇಶ್ ಕತ್ತಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಅಸಮಾಧಾನ ಹೋಗಲಾಡಿಸಲು ಯತ್ನಿಸಿದ್ದಾರೆ. ಆದರೆ ಇಬ್ಬರೂ ಮುಖಂಡರು ಸಂಧಾನದಿಂದ ಸಂತುಷ್ಟಗೊಂಡಿಲ್ಲ ಎನ್ನಲಾಗುತ್ತಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ನ ಆಕಾಂಕ್ಷಿಯಾಗಿದ್ದರು. ಆದರೆ ಅವರನ್ನು ಬಿಟ್ಟು ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ. ಇದು ಉಮೇಶ್ ಕತ್ತಿ ಸಹೋದರರನ್ನು ಕೆರಳಿಸಿತ್ತು.

      ಏಪ್ರಿಲ್ 4 ರವರೆಗೆ ಕಾದು ನೋಡಿ, ಆನಂತರ ನಾವು ಏನು ಮಾಡುತ್ತೇವೆ ಎಂದು ಗೊತ್ತಾಗುತ್ತದೆ ಎಂದು ಕತ್ತಿ ಸಹೋದರರು ಗುಡುಗಿದ್ದರು. ಆದರೆ ಬಂಡಾಯ ಏಳಲು ಅವಕಾಶ ಕೊಡದೆ ಯಡಿಯೂರಪ್ಪ ಅವರು ಎರಡೂ ಗುಂಪುಗಳ ನಡುವೆ ಸಂಧಾನ ಮಾಡಿದ್ದಾರೆ.

      ಕತ್ತಿ ಸಹೋದರರ ಬೆಂಬಲಕ್ಕೆ ಬಿಜೆಪಿ ಮುಖಂಡರು

      ಕತ್ತಿ ಸಹೋದರರ ಬೆಂಬಲಕ್ಕೆ ಬಿಜೆಪಿ ಮುಖಂಡರು

      ಉಮೇಶ್ ಕತ್ತಿ ಅವರ ಬೆಂಬಲಕ್ಕೆ ಸ್ಥಳೀಯ ಕೆಲವು ಬಿಜೆಪಿ ಶಾಸಕರು ಮತ್ತು ಕೆಲವು ಮುಖಂಡರು ಸೇರಿಕೊಂಡಿದ್ದರು. ಏಪ್ರಿಲ್ 4 ರಂದು ಏನು ಮಾಡುತ್ತೇವೆ ನೋಡಿ ಎಂದು ಉಮೇಶ್ ಕತ್ತಿ ಅವರು ಸವಾಲ್ ಸಹ ಹಾಕಿದ್ದರು. ಆದ್ದರಿಂದಲೇ ಇಂದು ಯಡಿಯೂರಪ್ಪ ಅವರು ಅಸಮಾಧಾನಗೊಂಡಿರುವ ಚಿಕ್ಕೋಡಿಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

      ಶಾಸಕಿ ಶಶಿಕಲಾ ಜೊಲ್ಲೆ ಪತಿಗೆ ಟಿಕೆಟ್

      ಶಾಸಕಿ ಶಶಿಕಲಾ ಜೊಲ್ಲೆ ಪತಿಗೆ ಟಿಕೆಟ್

      ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಚಿಕ್ಕೋಡಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಇದು ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋತಿದ್ದ ರಮೇಶ್ ಕತ್ತಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.

      ಹಲವು ಮುಖಂಡರು ಸಭೆಯಲ್ಲಿ ಭಾಗಿ

      ಹಲವು ಮುಖಂಡರು ಸಭೆಯಲ್ಲಿ ಭಾಗಿ

      ಸಂಧಾನ ಸಭೆಯಲ್ಲಿ ಉಮೇಶ್ ಕತ್ತಿ, ರಮೇಶ್ ಕತ್ತಿ, ಲಕ್ಷ್ಮಣ ಸವಧಿ, ಸಂಸದ ಸುರೇಶ್ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಇನ್ನೂ ಕೆಲವು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

      ಕತ್ತಿ ಸಹೋದರರ ಬಹಿರಂಗ ಹೇಳಿಕೆ

      ಕತ್ತಿ ಸಹೋದರರ ಬಹಿರಂಗ ಹೇಳಿಕೆ

      ಉಮೇಶ್ ಕತ್ತಿ, ರಮೇಶ್ ಕತ್ತಿ ಅವರು ಅಸಮಾಧಾನಗೊಂಡಿದ್ದ ಕಾರಣ ಅಣ್ಣಾ ಸಾಹೇಬ್ ಜೊಲ್ಲೆ ಅವರ ಗೆಲುವು ಕಷ್ಟವಾಗಲಿದೆ ಎನ್ನಲಾಗಿತ್ತು. ಆದರೆ ಯಡಿಯೂರಪ್ಪ ಅವರ ಸಂಧಾನದ ಬಳಿಕ ಮತ್ತೆ ಗೆಲ್ಲುವ ಆಸೆ ಚಿಗುರಿದೆ. ಸಂಧಾನದ ಬಳಿಕ ತಾವುಗಳು ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಬೆಂಬಲ ನೀಡುವುದಾಗಿ ಕತ್ತಿ ಸಹೋದರರು ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+