ಬೆಳವಾಗಿ: ಸಿಲಿಂಡರ್ ಸ್ಪೂಟಗೊಂಡು ಮಹಿಳೆ ಸಾವು, ಕೊಲೆ ಶಂಕೆ

ಬೆಳಗಾವಿ, ಡಿಸೆಂಬರ್ 15: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಗೃಹಿಣಿಯೊಬ್ಬರು ಧಾರುಣ ಸಾವು ಕಂಡ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ತಾಲ್ಲೂಕಿನಲ್ಲಿ ನಡೆದಿದೆ. ಆದರೆ ಮೃತ ಮಹಿಳೆಯ ಕುಟುಂಬದವರು ಇದನ್ನು ಕೊಲೆ ಎಂದು ಆರೋಪಿಸಿದ್ದಾರೆ.

ತಾಲ್ಲೂಕಿನ ಹಿರೇಮುನ್ನ ಗ್ರಾಮದ ಮಹಿಳೆ ಶ್ವೇತಾ ನಾಗಯ್ಯ(28) ಅವರು ನಿನ್ನೆ(ಡಿಸೆಂಬರ್ 15) ರಾತ್ರಿ ಅವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಕಾರಣ ತೀರ್ವ ಸುಟ್ಟ ಗಾಯಗಳಿಂದ ಅಸುನೀಗಿದ್ದಾರೆ. ಘಟನೆಯಲ್ಲಿ ಪತಿ ನಾಗಯ್ಯ ಅವರಿಗೂ ಗಾಯಗಳಾಗಿವೆ.

Women died by cylinder burst, police doubting on Husband

ಹಾಲು ಕಾಯಿಸಲು ಇಟ್ಟಾಗ ಆಕಸ್ಮಿಕವಾಗಿ ಗ್ಯಾಸ್ ಬರ್ಸ್ಟ್ ಆಗಿ ಅವಘಡ ಸಂಭವಿಸಿತು ಎಂದು ಪತಿ ನಾಗಯ್ಯ ಹೇಳಿದ್ದಾರೆ, ಆದರೆ ಶ್ವೇತಾ ಅವರ ಪೋಷಕರು ನಾಗಯ್ಯ ಅವರ ಮಾತನ್ನು ತಳ್ಳಿಹಾಕಿದ್ದು ಪತಿ ನಾಗಯ್ಯನೇ ಮಗಳನ್ನು ಕೊಂದಿದ್ದಾನೆ ಎಂದು ಆರೋಪಿಸುತ್ತಿದ್ದಾರೆ.

ಶ್ವೇತಾ ಮತ್ತು ನಾಗಯ್ಯ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಅಂತರ್ಜಾತಿ ವಿವಾಹಕ್ಕೆ ಎರಡು ಕುಟುಂಬದಿಂದ ವಿರೋಧವಿತ್ತು ಆದರೂ ಅವರು ಮದುವೆಯಾಗಿದ್ದರು, ಇತ್ತೀಚೆಗೆ ಮನೆಯಲ್ಲಿ ಸಮಸ್ಯೆ ಎದುರಾಗಿತ್ತು, ಕಲಹಗಳು ನಡೆಯುತ್ತಿದ್ದವು ಇದರಿಂದಲೇ ನಾಗಯ್ಯ ಶ್ವೇತಾಳನ್ನು ಕೊಲೆ ಮಾಡಿದ್ದಾನೆ ಎನ್ನುತ್ತಿದ್ದಾರೆ ಅವರ ಪೋಷಕರು.

11 ವರ್ಷದ ಹಿಂದೆ ಪ್ರೇಮವಿವಾಹವಾಗಿದ್ದ ಅವರಿಗೆ ಇಬ್ಬರು ಗಂಡುಮಕ್ಕಳಿದ್ದರು. ಬೆಳಗಾವಿ ನಂದಗಡ ಠಾಣೆಯಲ್ಲಿ ಪತಿ ನಾಗಯ್ಯ ವಿರುದ್ಧ ದೂರು ನೀಡಲು ಶ್ವೇತಾ ಕುಟುಂಬಸ್ಥರು ಮುಂದಾಗಿದ್ದಾರೆ. ಪೊಲೀಸ್ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+