ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ತಕರಾರು: ಮತದಾನ ಸ್ಥಗಿತ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮೇ 12 : ಯಮಕನಮರಡಿ ಕ್ಷೇತ್ರದ ಭರಮ್ಯಾನಟ್ಟಿ ಗ್ರಾಮದ ಬೂತ್ ನಂ. 218 ರಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ.

LIVE: ಇದುವರೆಗೆ ಶೇ.24 ರಷ್ಟು ಮತದಾನ ದಾಖಲು LIVE: ಇದುವರೆಗೆ ಶೇ.24 ರಷ್ಟು ಮತದಾನ ದಾಖಲು

ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ತಕರಾರು ಹಿನ್ನೆಲೆ ಮತದಾನ ಸ್ಥಗಿತಗೊಳಿಸಲಾಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದ ಮತಯಂತ್ರದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಚಿನ್ಹೆ ಮುಂದೆ ಅಕ್ಕ ಪಕ್ಕ ಮಸಿ ಬಳಿದಿರುವ ಹಿನ್ನೆಲೆ ಮತದಾನ ಸ್ಥಗಿತಗೊಳಿಸಲಾಗಿದೆ.

ವಿಜಯನಗರ: ಕೈ ಕೈ ಮಿಲಾಯಿಸಿದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರುವಿಜಯನಗರ: ಕೈ ಕೈ ಮಿಲಾಯಿಸಿದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು

ಅಷ್ಟೇ ಅಲ್ಲ, ಕಪ್ಪು ಮಸಿ ಬಳಿದಿರುವ ಕಡೆ ಬಟನ್ ಒತ್ತುವಂತೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಹೇಳುತ್ತಿರುವುದಕ್ಕೆ ಸದ್ಯ ಮತದಾನ ಸ್ಥಳಿತಗೊಳಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

Voting has been discontinued in Yamanakaradi assembly constituency

ಬೈಲಹೊಂಗಲದಲ್ಲಿ ಬಹಿಷ್ಕಾರ : ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿರುವ ಘಟನೆ ತಾಲೂಕಿನ ಹೊಗರ್ತಿ ಗ್ರಾಮದಲ್ಲಿ ನಡೆದಿದೆ. ಇತ್ತೀಚೆಗಷ್ಟೆ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಾಲ್ಕು ತಿಂಗಳ ಗರ್ಭಿಣಿ ಗೀತಾ ಕೊಲೆ ಆಗಿತ್ತು.

Voting has been discontinued in Yamanakaradi assembly constituency

ಕೊಲೆ ಸಂಬಂಧ ಗೀತಾ ಪತಿ ಸುರೇಶ ಬಂಧಿಸಲಾಗಿತ್ತು. ಸುರೇಶ ತಂದೆ, ತಾಯಿ ಸಂಬಂಧಿಕರನ್ನೂ ಬಂಧಿಸಬೇಕೆಂದು ತಗಟ್ಟೆಯಲ್ಲಿ ಜಮಾವಣೆಗೊಂಡಿರುವ ಗೀತಾ ಸಂಬಂಧಿಕರು ಆಗ್ರಹಿಸಿದ್ದಾರೆ.ಆದರೆ ಈ ಸಂಬಂಧ ಪೊಲೀಸ್ ರಿಂದ ಮನವೊಲಿಕೆ ಯತ್ನಿಸಲಾಗುತ್ತಿದೆ.

English summary
BJP candidate Maruti for controversy, Booth No.218 of barmyanatti village of Yamanakaradi assembly constituency Voting has been discontinued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X