ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ಈ ಗ್ರಾಮದಲ್ಲಿ ಮೊಬೈಲ್, ಟಿವಿ ನಿಷೇಧ!

|
Google Oneindia Kannada News

ಬೆಳಗಾವಿ, ಅಕ್ಟೋಬರ್‌ 6: ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳ ಬಳಕೆಯು ಜನರ ಸಾಮಾಜಿಕ ಜೀವನವನ್ನು ತೀವ್ರವಾಗಿ ಬಾಧಿಸಿದೆ. ಇದು ಮೊದಲು ಪರಸ್ಪರ ಮನೆಗಳಲ್ಲಿನ ವಾತಾವರಣ ಹಾಳು ಮಾಡಿದರೆ ಸ್ನೇಹಿತರು ಮತ್ತು ಕುಟುಂಬ, ಗ್ರಾಮಗಳಲ್ಲಿನ ಮನುಷ್ಯರ ನಡುವಿನ ಕಾಳಜಿ ಮತ್ತು ವಾತ್ಸಲ್ಯವನ್ನು ಕ್ರಮೇಣ ದುರ್ಬಲಗೊಳಿಸುತ್ತಿದೆ. ಮೊಬೈಲ್‌ಗಳಿಂದಾಗಿ ಅನೇಕ ಮಕ್ಕಳು ಬೀದಿಗಳಲ್ಲಿ ಮತ್ತು ಆಟದ ಮೈದಾನಗಳಲ್ಲಿ ಆಟವಾಡುವುದನ್ನು ನಿಲ್ಲಿಸಿದ್ದಾರೆ.

ಅನಾದಿ ಕಾಲದ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ, ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿರುವ ಸಣ್ಣ ಗ್ರಾಮವಾದ ಅಥಣಿಯ ಸಾಂಗ್ಲಿಯಲ್ಲಿರುವ ವಡ್ಗಾಂವ್ ನಿವಾಸಿಗಳು ತಮ್ಮ ಗ್ರಾಮದಲ್ಲಿ ಪ್ರತಿದಿನ ಸಂಜೆ 7 ರಿಂದ 9 ರವರೆಗೆ ದೂರದರ್ಶನ ಮತ್ತು ಮೊಬೈಲ್ ಫೋನ್‌ಗಳನ್ನು ನಿಷೇಧಿಸಲು ನಿರ್ಧರಿಸಿದ್ದಾರೆ.

6G in India : ವಿಶ್ವದಲ್ಲಿ ಭಾರತ 6ಜಿಯಲ್ಲಿ ಮುಂಚೂಣಿಯಲ್ಲಿರಲಿದೆ: ಅಶ್ವಿನ್‌ ವೈಷ್ಣವ್‌6G in India : ವಿಶ್ವದಲ್ಲಿ ಭಾರತ 6ಜಿಯಲ್ಲಿ ಮುಂಚೂಣಿಯಲ್ಲಿರಲಿದೆ: ಅಶ್ವಿನ್‌ ವೈಷ್ಣವ್‌

ಈ ಬಗ್ಗೆ ಮಾತನಾಡಿರುವ ವಡ್ಗಾಂವ್ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ್ ಮೋಹಿತೆ, ''ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆನ್‌ಲೈನ್ ಶಿಕ್ಷಣವನ್ನು ಪಡೆಯಲು ಪೋಷಕರು ತಮ್ಮ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡುವಂತೆ ಒತ್ತಾಯಿಸಲಾಯಿತು. ಇದು ಈಗ ಮನೆ, ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಗ್ಯಾಜೆಟ್‌ಗಳಿಗೆ ದಾಸರನ್ನಾಗಿ ಮಾಡಿದೆ. ಇದರಿಂದ ಈಗ ಅನೇಕ ವಿದ್ಯಾರ್ಥಿಗಳು ಪೋಷಕರಿಗೆ ತಿಳಿಯದಂತೆ ಸ್ಮಾರ್ಟ್ ಫೋನ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ'' ಎಂದರು.

Mobile, TV ban in this village of Karnataka During this time Everyday!

ಗ್ಯಾಜೆಟ್ ಮತ್ತು ಟಿವಿ ಚಟದಿಂದ ಪರಿಣಾಮ ವಡಗಾಂವ್ ಗ್ರಾಮ ಪಂಚಾಯಿತಿಗೆ ನಿರ್ಣಯ ಅಂಗೀಕರಿಸಲು ಒತ್ತಾಯಿಸಲಾಯಿತು. ಅದರಂತೆ ಗ್ರಾಮದ ದೇವಸ್ಥಾನದ ಮೇಲೆ ಧ್ವನಿವರ್ಧಕವನ್ನು ಅಳವಡಿಸಲಾಗಿದೆ. ಇದು ಕ್ರಮವಾಗಿ ರಾತ್ರಿ 7 ಗಂಟೆಗೆ ಮತ್ತು ರಾತ್ರಿ 9 ಗಂಟೆಗೆ ಎರಡು ಬಾರಿ ಸೈರನ್ ಮೊಳಗುತ್ತದೆ.

ಇನ್ನು ಮೊಬೈಲ್‌ ಮಾರಾಟಕ್ಕೆ ಮೊದಲು ಐಎಂಇಐ ನಂಬರ್‌ ನೋಂದಣಿ ಕಡ್ಡಾಯಇನ್ನು ಮೊಬೈಲ್‌ ಮಾರಾಟಕ್ಕೆ ಮೊದಲು ಐಎಂಇಐ ನಂಬರ್‌ ನೋಂದಣಿ ಕಡ್ಡಾಯ

ಸಂಜೆ 7 ಗಂಟೆಗೆ ಸೈರನ್ ಮೊಳಗಿದಾಗ ಗ್ರಾಮಸ್ಥರು ತಮ್ಮ ಟಿವಿ ಸೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಸ್ವಿಚ್ ಆಫ್ ಮಾಡುತ್ತಾರೆ. ಪರಸ್ಪರ ಮಾತನಾಡಲು ತಮ್ಮ ಮನೆಗಳಿಂದ ಹೊರಬರುತ್ತಾರೆ ಎಂದು ಮೋಹಿತೆ ಹೇಳಿದರು. ಈಗ ಕರ್ನಾಟಕ ಮತ್ತು ಮಹಾರಾಷ್ಟ್ರದ ಹಲವಾರು ಗ್ರಾಮ ಪಂಚಾಯತ್‌ಗಳ ಸದಸ್ಯರು ಈ ಉಪಕ್ರಮಕ್ಕೆ ಸಾರ್ವಜನಿಕ ಪ್ರತಿಕ್ರಿಯೆಯನ್ನು ನೋಡಲು ವಡ್ಗಾಂವ್‌ಗೆ ಭೇಟಿ ನೀಡುತ್ತಿದ್ದಾರೆ.

Mobile, TV ban in this village of Karnataka During this time Everyday!

ಬೆಳಗಾವಿಯ ಖಾಸಗಿ ಕಾಲೇಜಿನ ಕಚೇರಿ ಅಧೀಕ್ಷಕ ಸುನೀಲ್ ಚೋಳೇಕರ್ ಮಾತನಾಡಿ, ವಡಗಾಂವ್ ಗ್ರಾಮಸ್ಥರು ಬಹಳ ಬುದ್ಧಿವಂತಿಕೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದು ಇಂದಿನ ಅಗತ್ಯವಾಗಿದೆ. ಇತರ ಹಳ್ಳಿಗಳು ಮತ್ತು ನಗರಗಳು ಇದನ್ನು ಪುನರಾವರ್ತಿಸುತ್ತವೆ ಎಂದು ಭಾವಿಸುತ್ತೇವೆ ಎಂದು ಹೇಳಿದರು.

English summary
In a bid to revive age-old traditions, residents of Vadgaon in Sangli, a small village on the Karnataka-Maharashtra border, have decided to ban television and mobile phones from 7 to 9 pm every day in their village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X