Breaking: ಬೆಳಗಾವಿ: ಬೋರ್‌ವೆಲ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು

ಬೆಳಗಾವಿ, ಸೆಪ್ಟೆಂಬರ್ 18: ಎರಡೂವರೆ ವರ್ಷದ ಮಗು ಬೋರ್‌ವೆಲ್‌ಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಕನೂರಿನಲ್ಲಿ ನಡೆದಿದೆ.

ಶರತ್ ಎಂಬ ಎರಡೂವರೆ ವರ್ಷದ ಮಗು ಬೋರ್‌ವೆಲ್‌ಗೆ ಬಿದ್ದಿದ್ದು, ತೋಟದ ಮನೆ ಸಮೀಪ ಇರುವ ಇನ್ನೂರು ಅಡಿ ಆಳದ ಕೃತಕ ಬೋರ್‌ವೆಲ್‌ಗೆ ಶರತ್ ಮಗು ಬಿದ್ದು ಬಿದ್ದು ಸಾವನ್ನಪ್ಪಿದೆ.

ಶುಕ್ರವಾರ ಸಂಜೆ ಮಗು‌ ಕಾಣೆಯಾಗಿದ್ದು, ಇದೀಗ ಕೃತಕ ಬೋರ್‌ವೆಲ್‌ನಲ್ಲಿ ಬಿದ್ದು ಸಾವನ್ನಪ್ಪಿರುವುದು ದೃಢವಾಗಿದೆ. ಹಾಲಪ್ಪ ಎಂಬುವರ ಜಮೀನಿನಲ್ಲಿ ಕೊರೆಸಿದ್ದ ಬೋರ್ ವೆಲ್ ಇದಾಗಿದ್ದು, ನೀರು ಬಾರದ ಕಾರಣ ಹಾಗೇ ಬಿಟ್ಟಿದ್ದರು ಎನ್ನಲಾಗಿದೆ.

Two-And-half-year-old Child Dies After Falling Into Borewell In Rayabag

ಇದೇ ಜಮೀನಿನಲ್ಲಿ ಸಿದ್ದಪ್ಪ ಕೆಲಸ ಮಾಡುತ್ತಿದ್ದು, ಸಿದ್ದಪ್ಪನ ಪುತ್ರನೇ ಶರತ್ ಕೃತಕ ಕೊಳವೆ ಬಾವಿಗೆ ಬಿದ್ದಿದ್ದಾನೆ. ಮಗು ಜೀವ ಉಳಿಸಿಕೊಳ್ಳಲು ಬೆಳಗಾವಿ ಜಿಲ್ಲಾಡಳಿತ ಪ್ರಯತ್ನ ಮಾಡಿದರೂ ಮಗು ಬದುಕುಳಿಯಲಿಲ್ಲ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕೊಳವೆ ಬಾವಿಯಿಂದ ಮಗುವಿನ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ರಾಯಬಾಗ ವಿಭಾಗದ ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿದ್ದು, ಒಂದು ಗಂಟೆ ಕಾರ್ಯಾಚರಣೆ ನಡೆಸಿ ಮಗುವನ್ನು ಹೊರಕ್ಕೆ ತೆಗೆದರು.

ಮಗುವಿನ ಕಾಲಿಗೆ ಹಗ್ಗ ಕಟ್ಟಿ ಮಗುವಿನ ಮೃತದೇಹ ಹೊರಕ್ಕೆ ತೆಗೆಯಲಾಗಿದ್ದು, ಮಗುವನ್ನು ಕೊಲೆ ಮಾಡಿ ಕೃತಕ ಕೊಳವೆ ಬಾವಿಗೆ ಎಸೆಯಲಾಗಿತ್ತಾ ಎಂಬ ಅನುಮಾನ ಮೂಡಿದೆ.

ಕೊಳವೆ ಬಾವಿಯಲ್ಲಿ ಮಗು ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಸಾವಿನ ಕುರಿತು ಅಜ್ಜಿಯಿಂದ ಗಂಭೀರ ಆರೋಪ ಮಾಡಲಾಗಿದೆ. ಮಗುವಿನ ತಂದೆ ಸಿದ್ದಪ್ಪ ಕೊಲೆ ಮಾಡಿರುವುದಾಗಿ ಅಜ್ಜಿ ಆರೋಪ ಮಾಡುತ್ತಿದ್ದಾರೆ. ಅಜ್ಜಿ ಸರಸ್ವತಿಯಿಂದ ತಂದೆಯ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.

ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ತಂದೆ
ಎರಡು ವರ್ಷದ ಮಗು ಶರತ್‌ನನ್ನು ತಂದೆ ಸಿದ್ದಪ್ಪ ಕೊಲೆ ಮಾಡಿದ್ದಾನೆ ಎಂದು ಮಗುವಿನ ಅಜ್ಜಿ ಆರೋಪಿಸಿದ್ದರು. ತಂದೆ ಸಿದ್ದಪ್ಪ ತಾನೇ ಕೃತ್ಯ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದು, ಪೊಲೀಸರು ಮಗುವಿನ ತಂದೆ ಸಿದ್ದಪ್ಪನನ್ನು ಅರೆಸ್ಟ್ ಮಾಡಿದ್ದಾರೆ.

ಮಗುವಿನ ಕಾಲಿಗೆ ಬಟ್ಟೆ ಕಟ್ಟಿ ತಂದೆ ಸಿದ್ದಪ್ಪನೇ ಮಗುವನ್ನು ತೋಟದ ಮನೆಯ ಸಮೀಪದಲ್ಲಿದ್ದ ಬೋರ್‌ವೆಲ್‌ಗೆ ಹಾಕಿದ್ದ ಎಂದು ಹೇಳಲಾಗುತ್ತಿದೆ. ಮಗುವಿನ ಶವವನ್ನು ಬೋರ್‌ವೆಲ್‌ನಿಂದ ಹೊರ ತೆಗೆಯಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+