Breaking: ಬೆಳಗಾವಿ; ITBP ಕೇಂದ್ರದಿಂದ ಎರಡು ಎಕೆ 47 ರೈಫಲ್ ನಾಪತ್ತೆ
ಬೆಳಗಾವಿ, ಆಗಸ್ಟ್ 19: ಬೆಳಗಾವಿ ಜಿಲ್ಲೆಯ ಹಾಲಭಾವಿ ಗ್ರಾಮದಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಕ್ಯಾಂಪಿನಿಂದ ಎರಡು ಎಕೆ - 47 ರೈಫಲ್‌ಗಳು ಕಾಣೆಯಾಗಿವೆ.
ಹಾಲಭಾವಿಯಲ್ಲಿರುವ ಐಟಿಬಿಪಿ ಶಿಬಿರದಲ್ಲಿ ನಕ್ಸಲ್ ನಿಗ್ರಹ ತರಬೇತಿ ನಡೆಯುತ್ತಿದೆ. ಎಕೆ-47 ರೈಫಲ್‌ಗಳು ಮಧುರೈನ 45ನೇ ಬೆಟಾಲಿಯನ್ ಪೊಲೀಸ್ ಪಡೆಯ ರಾಜೇಶ್ ಕುಮಾರ್ ಮತ್ತು ಸಂದೀಪ್ ಮೀನಾ ಅವರಿಗೆ ಸೇರಿದವು.
ಸಿಐಜೆಡಬ್ಲ್ಯು (counter-insurgency and jungle warfare) ಶಾಲೆಯಲ್ಲಿ ಆಗಸ್ಟ್ 17ರಂದು ಇರಿಸಲಾಗಿದ್ದ ಎರಡು ಎಕೆ-47 ರೈಫಲ್‌ಗಳು ಕಾಣೆಯಾಗಿವೆ. ಈ ಬಗ್ಗೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಐಟಿಬಿಪಿ ಅಧಿಕಾರಿಗಳು ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ರೈಫಲ್ ಕಳುವು ಪ್ರಕರಣ ಭಾರಿ ಆತಂಕಕ್ಕೆ ಕಾರಣವಾಗಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಪೊಲೀಸ್ ಆಯುಕ್ತ ಎಂ.ಬಿ. ಬೋರಲಿಂಗಯ್ಯ ಅವರು ಪ್ರಕರಣದ ತನಿಖೆಗಾಗಿ ಉಪ ಆಯುಕ್ತರಾದ (ಅಪರಾಧ) ಪಿ.ವಿ.ಸ್ನೇಹಾ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದಾರೆ. ನಗರ ಪೊಲೀಸರ ತಂಡ ಆಗಸ್ಟ್ 18ರಂದು ಸಿಐಜೆಡಬ್ಲ್ಯು ಶಾಲೆಗೆ ಭೇಟಿ ನೀಡಿತ್ತು.
ಐಟಿಬಿಪಿಯು ಜುಲೈ 29ರಿಂದ ಬೆಳಗಾವಿ ಜಿಲ್ಲೆಯ ಹಾಲಭಾವಿ ಗ್ರಾಮದಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಕ್ಯಾಂಪಿನಲ್ಲಿ ನಕ್ಸಲ್ ನಿಗ್ರಹ ತರಬೇತಿ ಶಿಬಿರ ನಡೆಸುತ್ತಿದೆ.
ಕಾಕತಿ ಪೊಲೀಸ್ ಠಾಣೆಯಲ್ಲಿ ದೂರಿನ ಪ್ರಕಾರ, ಮಧುರೈನ 45ನೇ ಬೆಟಾಲಿಯನ್ ಪೊಲೀಸ್ ಪಡೆಯ ರಾಜೇಶ್ ಕುಮಾರ್ ಮತ್ತು ಸಂದೀಪ್ ಮೀನಾ ಅವರು ಹೊತ್ತೊಯ್ದ ಎರಡು ಎಕೆ 47 ರೈಫಲ್‌ಗಳನ್ನು ಆಗಸ್ಟ್ 17 ರಂದು 'ವಾಡಿಕೆಯ ಪ್ರೋಟೋಕಾಲ್ ಮತ್ತು ಮುನ್ನೆಚ್ಚರಿಕೆ' ಪ್ರಕಾರ ಶಾಲೆಯಲ್ಲಿ ಇರಿಸಲಾಗಿತ್ತು, ಆದರೆ ಆಗಸ್ಟ್ 17 ರಂದು ರೈಫಲ್‌ಗಳು ಕಾಣೆಯಾಗಿದ್ದಾವೆ" ಎಂದು ತಿಳಿಸಲಾಗಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications