• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿನಿಮಾ ಸ್ಟಾರ್ ಗಳೆಲ್ಲ ಈಗ ಎಲ್ಲಿ ಹೋದ್ರಿ? ವೈರಲ್ ಆಗಿದೆ ಬೆಳಗಾವಿ ಟ್ರೋಲ್

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಆಗಸ್ಟ್ 7: ಮಳೆ, ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸುತ್ತಿದೆ. ಜನ ಕಂಗಾಲಾಗಿದ್ದಾರೆ. ಒಂದೊಂದು ಕ್ಷಣದಲ್ಲೂ ಜೀವಭಯ ಹೊತ್ತಿದ್ದಾರೆ. ಆದರೆ ಎಲ್ಲಾ ಸಮಯದಲ್ಲೂ ಮುಂದೆ ಬರುವ ಸಿನಿಮಾ ಮಂದಿ ಈಗ್ಯಾಕೆ ಸಹಾಯಕ್ಕೆ ಬರುತ್ತಿಲ್ಲ ಎಂದು ಕೇಳಿರುವ ಟ್ರೋಲ್ ಪುಟವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಕಾರವಾರದಲ್ಲೂ ಬಿರುಸಾಗಿದೆ ಮಳೆ; ನೆರೆಗೆ ನೂರಾರು ಮನೆಗಳು ಜಲಾವೃತ, ಇಬ್ಬರ ಸಾವುಕಾರವಾರದಲ್ಲೂ ಬಿರುಸಾಗಿದೆ ಮಳೆ; ನೆರೆಗೆ ನೂರಾರು ಮನೆಗಳು ಜಲಾವೃತ, ಇಬ್ಬರ ಸಾವು

ನಿರಾಶ್ರಿತರ ಸಹಾಯಕ್ಕೆ ಬಾರದ ಚಲನಚಿತ್ರ ಮಂಡಳಿ ಕಲಾವಿದರ ವಿರುದ್ಧ ಟ್ರೋಲ್ ಮಾಡಲಾಗಿದೆ. ಈ ಮೂಲಕ ಕಲಾವಿದರು ಮತ್ತು ಚಲನಚಿತ್ರ ಮಂಡಳಿ ವಿರುದ್ಧ ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕಾವೇರಿ ವಿಷಯ ಬಂದಾಗ ಒಂದಾಗುವ ಕಲಾವಿದರು, ಚಲನಚಿತ್ರ ಮಂಡಲಿ ಉತ್ತರ ಕರ್ನಾಟಕ ಐದೂ ಜಿಲ್ಲೆಗೆ ಪ್ರವಾಹ ಬಂದಾಗ ಯಾಕೆ ಈ ನಿರ್ಲಕ್ಷ ತೋರುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಕೊಡಗು, ಕಾವೇರಿ ವಿಷಯ ಬಂದಾಗೆಲ್ಲಾ ಬರುವ ಕಲಾವಿದರು, ಸಂಘ ಸಂಸ್ಥೆಗಳು, ಬುದ್ಧಿಜೀವಿಗಳು ಈಗ ಎಲ್ಲಿ ಹೋಗಿದ್ದೀರಿ? ಎಂದು ಪ್ರಶ್ನಿಸಿರುವ ಈ ಪುಟ ಎಲ್ಲೆಲ್ಲೂ ಹರಿದಾಡುತ್ತಿದೆ.

English summary
North Karnataka hit by rain and floods. But a troll page that has stated that cinema fans are not coming to help is now going viral on social networking sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X