ಮಾತೃಭಾಷೆ ಮರಾಠಿಯಾದ್ರೂ ಕನ್ನಡದಲ್ಲಿ ಪೂರ್ಣಾಂಕ; ಬೆಳಗಾವಿ ಕುವರಿಯರಿಗೆ ವಿಶೇಷ ಗೌರವ
ಬೆಳಗಾವಿ, ಆಗಸ್ಟ್ 20: ಎಸ್ ಎಸ್ ಎಲ್ ಸಿ ಕನ್ನಡ ಭಾಷಾ ಪತ್ರಿಕೆಯಲ್ಲಿ 125ಕ್ಕೆ 125 ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ ಬೆಳಗಾವಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆ ಕ್ರಿಯಾಸಮಿತಿಯಿಂದ ಇಂದು ಅಭಿನಂದಿಸಲಾಯಿತು.
ಬೆಳಗಾವಿಯ ಉಷಾತಾಯಿ ಗೋಗಟೆ ಬಾಲಕಿಯರ ಮಾಧ್ಯಮಿಕ ಶಾಲೆಯ ಪೂರ್ವಾ ಮುತಗೇಕರ ಹಾಗೂ ಪೂಜಾ ಪಾಟೀಲ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಪೂರ್ವ ಮುತಗೇಕರ ಮಾತೃ ಭಾಷೆ ಮರಾಠಿಯಾದರೂ ಕನ್ನಡ ಮಾಧ್ಯಮದಲ್ಲಿ ಓದಿ ಈ ಸಾಧನೆ ಮಾಡಿರುವುದು ವಿಶೇಷ.

ಮರಾಠಿ ಭಾಷಿಕರೇ ಹೆಚ್ಚಿರುವ ಬೆಳಗಾವಿ ತಾಲೂಕಿನ ಧಾಮಣೆ ಗ್ರಾಮದ ಪೂಜಾ ಪಾಟೀಲ ಕೂಡ 125 ಅಂಕ ಪಡೆದಿದ್ದಾರೆ. ಹೀಗಾಗಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಪದಾಧಿಕಾರಿಗಳು ಇಂದು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದರು.












Click it and Unblock the Notifications