ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತನ ಬರ್ಬರ ಹತ್ಯೆ
ಬೆಳಗಾವಿ, ಸೆಪ್ಟೆಂಬರ್ 25 : ರಾಜ್ಯದಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಅಪ್ಸರಾ ಕೂಟದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತನೊಬ್ಬನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ರೋಹಿತ್ ರಾಜು ಪಾಟೀಲ (26 ವರ್ಷ) ಹತ್ಯೆಯಾದ ಯುವಕ. ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ನಗರದ ಅಪ್ಸರಾ ಕೂಟದ ಸರ್ಕಲ್ ಬಳಿ ಭಾನುವಾರ ತಡರಾತ್ರಿ ರೋಹಿತ್ ನನ್ನು ತಡೆದು ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಈ ಬಗ್ಗೆ ಗೋಕಾಕ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
Sri Ram Sena worker identified as Rohith Raju Patil murdered by unidentified people in Belagavi district's Gokak town y'day; case registered pic.twitter.com/lp7AnKbjjV
— ANI (@ANI) September 25, 2017












Click it and Unblock the Notifications