Shiva Rajkumar: ಬೆಳಗಾವಿಗೂ ಡಾ.ರಾಜ್‌ಕುಮಾರ್‌ ಕುಟುಂಬಕ್ಕೂ ಅವಿನಾಭಾವ ಸಂಬಂಧ: ನಟ ಶಿವಣ್ಣ ಹೀಗೆ ಹೇಳಿದ್ಯಾಕೆ?

ಬೆಳಗಾವಿ, ಮಾರ್ಚ್‌, 12: ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ರಾಜಕೀಯ ನಾಯಕರ ಪ್ರಚಾರ ಈಗಿನಿಂದಲೇ ಶುರುವಾಗಿಬಿಟ್ಟಿದೆ. ಅಷ್ಟೇ ಅಲ್ಲದೆ ಈ ಬಾರಿ ಸಿನಿತಾರೆಯರು ಕೂಡ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಈಗಾಗಲೇ ನಟ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವರಾಜ್‌ ಕುಮಾರ್‌ಗೆ ಶಿವಮೊಗ್ಗದಿಂದ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. ಇನ್ನು ಇಂದು (ಮಾರ್ಚ್‌ 12) ಶಿವಣ್ಣ ಬೆಳಗಾವಿಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಹಾಗಾದರೆ ಈ ವೇಳೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನಟ ಶಿವರಾಜ್‌ಕುಮಾರ್‌ಗೆ ಇದೀಗ ಎರಡು ಕೆಲಸಗಳ ಜವಾಬ್ದಾರಿ ವಹಸಿಕೊಂಡಂತಾಗಿದೆ. ಒಂದು ಶಿವಮೊಗ್ಗದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗಿಳಿಯಲಿರುವ ಗೀತಾಕ್ಕನ ಪರವಾಗಿ ಪ್ರಚಾರ ಮಾಡುವುದು. ಮತ್ತೊಂದು ಇತ್ತೀಚೆಗಷ್ಟೇ "ಕರಟಕ ದಮನಕ‌" ಸಿನಿಮಾ ತೆರೆಕಂಡಿದ್ದು, ಈ ಹಿನ್ನೆಲೆ ಶಿವಣ್ಣ ಹಲವು ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಚಿತ್ರದುರ್ಗ, ಇಂದು ಬೆಳಗಾವಿಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ.

Shiva Rajkumar Inseparable relationship bwtween Belagavi and Dr Rajkumar family

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಶಿವಣ್ಣ, ಬೆಳಗಾವಿಗೂ ಡಾ.ರಾಜ್‌ಕುಮಾರ್‌ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಈ ಭಾಗದ ಜನರ ಪ್ರೀತಿ ವಿಶ್ವಾಸಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು ನಟ ಡಾ.ಶಿವರಾಜಕುಮಾರ್‌ ಹೇಳಿದರು. ಹಾಗಾದರೆ ಶಿವಣ್ಣ ಹೀಗೆ ಹೇಳಲು ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇನ್ನು ಕರಟಕ ದಮನಕ‌ ಸಿನಿಮಾದ ಬಗ್ಗೆ ಮಾತನಾಡಿ, ಈ ಸಿನಿಮಾ ಯೋಗರಾಜ ಭಟ್ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದ ಭಾಷೆಯ ಸೊಗಡು, ಖ್ಯಾತ ನಟರಾದ ಪ್ರಭುದೇವ ಅವರ ಜೊತೆಗಿನ ನಟನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಜನರಿಂದಲೂ ಉತ್ತಮ ಬೆಂಬಲ‌ ಸಿಗುತ್ತಿದೆ. ಅದರಲ್ಲೂ ಈ ಸಿನಿಮಾದಲ್ಲಿ ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ‌ಕುಡಿಯುವ ನೀರಿನ ಮಹತ್ವದ ಬಗ್ಗೆ ತಿಳಿಸಲಾಗಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+