ಬೆಳಗಾವಿಯ ಕುಡಚಿ ಠಾಣೆ ಪಿಎಸ್ ಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಬೆಳಗಾವಿ, ಮೇ 22: ಇಲ್ಲಿನ ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ಶಿವಶಂಕರ್ ಮುಕರಿ ವಿರುದ್ಧ ನವವಿವಾಹಿತೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಅಡಿಷನಲ್ ಎಸ್ ಪಿ ರವೀಂದ್ರ ಗಡಾದಿ ಅವರಿಗೆ ದೂರು ಕೂಡ ನೀಡಿದ್ದಾರೆ.
ನನ್ನ ಇಚ್ಛೆಗೆ ತಕ್ಕ ಹಾಗೆ ಹುಡುಗನನ್ನು ಮದುವೆಯಾಗಿದ್ದೆ. ಅಂತರ್ಜಾತಿ ವಿವಾಹ ಎಂಬ ಕಾರಣಕ್ಕೆ ಪೋಷಕರು ವಿರೋಧ ಮಾಡಿದರು. ನಮ ಸಮುದಾಯದವರು ಹಲ್ಲೆ ನಡೆಸಿದರು. ಈ ಬಗ್ಗೆ ದೂರು ನೀಡಲು ಕುಡಚಿ ಪೊಲೀಸ್ ಠಾಣೆಗೆ ಹೋದರೆ ನಮ್ಮ ಮೇಲೆ ಹಲ್ಲೆ ನಡೆಸಿದರು. ನನಗೆ ಲೈಂಗಿಕ ಕಿರುಕುಳ ನೀಡಿದರು ಎಂದು ಗುಂಡವಾಡ ಗ್ರಾಮದ ಯುವತಿ ಆರೋಪ ಮಾಡಿದ್ದಾರೆ.

ಯಾವಾಗ ದೂರು ದಾಖಲಿಸಿಕೊಳ್ಳುವುದಕ್ಕೆ ಕುಡಚಿ ಠಾಣೆಯಲ್ಲಿ ನಿರಾಕರಿಸಿದರೋ ಆಗ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕಾಯಿತು ಎಂದು ಆಕೆ ತಿಳಿಸಿದ್ದಾರೆ. ಆಕೆ ನೀಡಿದ ದೂರಿನ ಬಗ್ಗೆ ತನಿಖೆ ನಡೆಸುವುದಕ್ಕೆ ಚಿಕ್ಕೋಡಿ ಡಿವೈಎಸ್ ಪಿಗೆ ಸೂಚನೆ ನೀಡಲಾಗಿದೆ ಎಂದು ರವೀಂದ್ರ ಗಡಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೇ ವೇಳೆ ಪಿಎಸ್ ಐ ಶಿವಶಂಕರ ತಮ್ಮ ವಿರುದ್ಧದ ಆರೋಪವನ್ನು ಅಲ್ಲಗಳೆದಿದ್ದಾರೆ.
{promotion-urls}












Click it and Unblock the Notifications