Belagavi: ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಕೋಟಿ ರೂ.ಮೋಸ: ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಬೆಳಗಾವಿ, ಡಿಸೆಂಬರ್ 31: ಜಿಲ್ಲೆಯ ಒಂದೆರಡು ತಾಲೂಕುಗಳಲ್ಲಿ ಕಳೆದ ಒಂದು ತಿಂಗಳಿನಿಂದ ಮೈಕ್ರೋ ಫೈನಾನ್ಸ್‌ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಸಾವಿರಾರು ಮಹಿಳೆಯರು ತಮಗೆ ಗೊತ್ತಿಲ್ಲ ಹಣ ಕಟ್ಟಿ ತೊಂದರೆಗೆ ಸಿಲುಕಿದ್ದಾರೆ. ಈ ಸಂಬಂಧ ಸಭೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ ಅವರು ಒಟ್ಟು ಅಂದಾಜು 100 ಕೋಟಿ ರೂಪಾಯಿಗೂ ಹೆಚ್ಚು ಹಣ ಮೋಸವಾಗಿದೆ ಎಂದು ಮಾಹಿತಿ ನೀಡಿದರು.

ವಿವಿಧೆಡೆ ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಹೆಣ್ಣುಮಕ್ಕಳಿಂದ ಹಣ ಕಟ್ಟಿಸಿಕೊಳ್ಳಲಾಗಿದೆ. ಸಬ್ಸಿಡಿ ಗೆಂದು ಹಣಕಟ್ಟಿಸಿಕೊಂಡು ಜನರಿಗೆ ಗೊತ್ತಿಲ್ಲದೇ ಲೋನ್ ಕೊಡಲಾಗಿದೆ. ಮಹಿಳೆಯರ ಹಣ ಕೊಟ್ಟು ಮೋಸ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ.

Rs 1 Crore Fraud the Name of Microfinance one Arrested Satish Jarkiholi

ಈ ಕುರಿತು ಮಂಗಳವಾರ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಇಲ್ಲಿನ ಮೂರು ನಾಲ್ಕು ತಾಲೂಕುಗಳಲ್ಲಿ ಕಳೆದ ಒಂದು ತಿಂಗಳುಗಳಿಂದ ಮೈಕ್ರೋ ಪೈನಾನ್ಸ್ ಗೊಂದಲ ಸೃಷ್ಠಿಯಾಗಿದೆ. ಒಟ್ಟು ಸುಮಾರು 15000 ಸಾವಿರ ಜನರಿಗೆ ಗೊತ್ತಿಲ್ಲದೆ ಲೋನ್ ಕೊಟ್ಟಿದ್ದಾರೆ ಎಂದರು.

ಸಬ್ಸಿಡಿ ಹಣ ಎಂದು ಹೇಳಿ ಕೊಡಲಾಗಿದೆ. ಆದರೆ ಅದು ಸಬ್ಸಿಡಿ ಹಣ ಅಲ್ಲ, ಬದಲಾಗಿ ಲೋನ್ ಹಣ ಎಂಬುದು ಗೊತ್ತಾಗಿದೆ. ಈ ವಂಚನೆಯ ಹಣ ಸಂಗ್ರಹದಲ್ಲಿ ನಾಲ್ಕದಿಂದ ಐದು ಜನ ಮಹಿಳೆಯರು ನೇತೃತ್ವ ವಹಿಸಿದ್ದರು ಎಂಬುದು ಬೆಳಕಿಗೆ ಬರುತ್ತಿದ್ದಂತೆ ಇಬ್ಬರನ್ನು ವಿಚಾರಣೆ ಮಾಡಲಾಗಿದೆ. ಪೊಲೀಸರು ಒಬ್ಬರನ್ನು ಬಂಧಿಸಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಸಚಿವರು ತಿಳಿಸಿದರು.

ಇಲ್ಲಿ ಹಣ ಕಟ್ಟಿಸಿಕೊಂಡವರಿಂದ ಮೂರನೇ ವ್ಯಕ್ತಿಗೆ ಹಣ ಹೋಗಿದೆ? ಅದು ಹೇಗೆ ಹೋಯಿತು ಎಂಬ ಪ್ರಶ್ನೆ ಉದ್ಭವಿಸಿದೆ. ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಕಟ್ಟಿದ ಹಣ ಮೂರನೇ ವ್ಯಕ್ತಿಗೆ ಹೋಗಿದೆ. ಈ ಸಂಬಂಧ ಪೈನಾನ್ಸ್ ಮಹಿಳೆಯರಿಗೆ ತೊಂದರೆ ಕೊಡದಂತೆ ಜಿಲ್ಲಾಧಿಕಾರಿಗಳು ಮತ್ತು ನಾನು ಸೂಚಿಸಿದ್ದೇನೆ.

40 ಪೈನಾನ್ಸದವರು ಕೂಡಿಕೊಂಡು ಹದಿನೈದು ಸಾವಿರ ಮಂದಿಗೆ ಹಣ ನೀಡಿದ್ದಾರೆ. ಕೊಟ್ಟ ಹಣದ ಮೊತ್ತ ಸುಮಾರು ನೂರು ಕೋಟಿ ರೂ.ಗು ಅಧಿಕ ಎನ್ನಲಾಗಿದೆ. ಇದೀಗ ಈ ಹಣವನ್ನೆ ವಂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಸಲಿಗೆ ನಡೆದದ್ದು ಏನು? ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

ಏನಿದು ಪ್ರಕರಣ, ಅಸಲಿಗೆ ಆಗಿದ್ದೇನು?

ಲೋನ್ ಸಿಗುತ್ತದೆ ಎಂದು ಸಬ್ಸಿಡಿ ಹೆಸರಿನಲ್ಲಿ ಹಣ ಕಟ್ಟಿದ್ದ ಮಹಿಳೆಯರು ಸಬ್ಸಿಡಿಗಾಗಿ ಸಹಿ ಮಾಡಿದ್ದಾರೆ. ಇದಕ್ಕಾಗಿ ಗ್ರಾಮದ ಹಲವು ಭಾಗಗಳಲ್ಲಿ ಸ್ವಸಹಾಯ ಗುಂಪುಗಳನ್ನು ರಚನೆ ಮಾಡಲಾಗಿದೆ ಎಂದು ಈ ಹಿಂದೆ ಮಹಿಳೆಯರು ಸಚಿವರ ಮುಂದೆಯೇ ದೂರಿದ್ದರು.

ಸುಮಾರು 150 ಸ್ವಸಹಾಯ ಗುಂಪು ಮಾಡಿಕೊಂಡು ಸಾವಿರಾರು ಮಹಿಳೆಯರನ್ನು ಸಂಘಟಿಸಲಾಗಿದೆ. ವಾರಕ್ಕೊಮ್ಮೆ ಹಣ ಠೇವಣಿ ಮಾಡಲಾಗುತ್ತಿತ್ತು. ಇದರಿಂದ ನೀವು ಬ್ಯಾಂಕ್‌ಗಳಿಂದ ಸುಲಭವಾಗಿ ಸಾಲ ಪಡೆಯಬಹುದು ಎಂದು ಭರವಸೆ ನೀಡಿ ಹಣ ಕಟ್ಟಿಸಿಕೊಳ್ಳಲಾಗುತ್ತಿತ್ತು. ಇದೀಗ ಆ ಹಣವನ್ನು ವಂಚಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಾಗಿದೆ.

ತನಿಖೆಯಿಂದ ಸತ್ಯ ಹೊರ ಬರಬೇಕು: ಸತೀಶ್ ಜಾರಕಿಹೊಳಿ

ಇದೇ ವೇಳೆ ಗುತ್ತಿಗೆದಾರನ ಸಾವಿನ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಅವರು, ಪ್ರಿಯಾಂಕ್ ಖರ್ಗೆ ಅವರ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಪೋಸ್ಟರ್ ವಾರ್ ನಡೆಸಿದೆ. ಪ್ರಕರಣದಲ್ಲಿನ ಸತ್ಯಾಂಶವು ಹೊರಗೆ ಬರಬೇಕು. ತನಿಖೆ ನಡೆದು ಸತ್ಯಾಂಶ ಹೊರಬರಲಿ. ಆ ಮೇಲೆ ನೋಡೊಣ. ಸದ್ಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+