ರಮೇಶ ಜಾರಕಿಹೊಳಿ ವಿಜಯ ಸಂಕಲ್ಪಕ್ಕೆ ಸಜ್ಜಾದ ವೇದಿಕೆ
Recommended Video
ಬೆಳಗಾವಿ, ಸೆಪ್ಟೆಂಬರ್ 7: ಗೋಕಾಕ ಕ್ಷೇತ್ರದಲ್ಲಿ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಇಂದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದಕ್ಕೆ ರಮೇಶ ಜಾರಕಿಹೊಳಿ ಅವರ ನಿವಾಸದ ಮುಂದೆ ವೇದಿಕೆ ಸಜ್ಜಾಗಿದ್ದು, ವಿಜಯ ಸಂಕಲ್ಪ ಸಮಾವೇಶ ಆಯೋಜನೆ ಮಾಡಲಾಗಿದೆ.
ಗೋಕಾಕ ಪಟ್ಟಣದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈ ಕ್ಷೇತ್ರದಲ್ಲಿ ತನ್ನ ಹಿಡಿತ ಸಾಧಿಸಲು ರಮೇಶ ಜಾರಕಿಹೊಳಿ ಅವರ ಮೊದಲ ಹೆಜ್ಜೆ ಈ ಸಂಕಲ್ಪ ಎನ್ನಲಾಗಿದೆ. ಈ ನಡುವೆ ಉಪ ಚುನಾವಣೆಗೂ ಸಿದ್ಧತೆ ನಡೆಸಲಾಗುತ್ತಿದೆ.
ರಮೇಶ್ ಜಾರಕಿಹೊಳಿ ಮತ್ತು ಅವರ ಅಳಿಯ ಅಂಬಿರಾವ್ ಪಾಟೀಲ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 5 ಲಕ್ಷ ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಸಹೋದರ ಸತೀಶ ಜಾರಕಿಹೊಳಿ ಮತ್ತು ಲಖನ ಜಾರಕಿಹೊಳಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಸಾಂತ್ವನ ಮತ್ತು ಭರವಸೆ ನೀಡಿ ಜನರನ್ನು ತಮ್ಮತ್ತ ಸೆಳೆದುಕೊಳ್ಳಲು ಕಾರ್ಯತಂತ್ರ ರೂಪಿಸಿದ್ದಾರೆ.

ಹೀಗಾಗಿ ಈಗಿನಿಂದಲೇ ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಸಭೆ ಮೇಲೆ ಸಭೆ ನಡೆಸಲು ಶುರುಮಾಡಿದ್ದಾರೆ. ಈ ಎಲ್ಲ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಗೋಕಾಕ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ನಡುವೆ ಸಮರ ನಡೆಯುವುದು ಗ್ಯಾರಂಟಿ ಎನಿಸಿದೆ. ಹೀಗಾಗಿ ಗೋಕಾಕ ಕ್ಷೇತ್ರ ಈಗಿನಿಂದಲೇ ತೀವ್ರ ಕುತೂಹಲ ಕೆರಳಿಸಿದೆ.












Click it and Unblock the Notifications