ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸಿಎಂ ವಿರುದ್ದ ಹೇಳಿಕೆ ನೀಡಿ ನಂತರ ವಾಪಸ್ ಪಡೆದ ಜಾರಕಿಹೊಳಿ

|
Google Oneindia Kannada News

Recommended Video

ಎಷ್ಟೇ ಬೈದ್ರು ಅವರು ನಮ್ಮ ಉಪ ಮುಖ್ಯಮಂತ್ರಿ ಗಳು

ಬೆಳಗಾವಿ, ಸೆ 27: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ದ ಹೇಳಿಕೆ ನೀಡಿ, ನಂತರ ತನ್ನ ಹೇಳಿಕೆಯನ್ನು ರಮೇಶ್ ಜಾರಕಿಹೊಳಿ ವಾಪಸ್ ಪಡೆದಿದ್ದಾರೆ.

ಚಿಕ್ಕೋಡಿಯಲ್ಲಿ ಮಾತನಾಡುತ್ತಿದ್ದ ಜಾರಕಿಹೊಳಿ ' ಒತ್ತಡದಿಂದ ಏನೇನೋ ಮಾತನಾಡಿಬಿಟ್ಟೆ. ನಾನು ನೀಡಿದ ಹೇಳಿಕೆಯನ್ನು ವಾಪಸ್ ಪಡೆಯುತ್ತಿದ್ದೇನೆ" ಎಂದು ಹೇಳಿದರು.

ಸವದಿ ಕುರಿತು 'ವಿಷ ನೀಡಿದರೂ ಅಮೃತವಾಗಲಿ' ಎಂದಿದ್ಯಾಕೆ ಕುಮಟಳ್ಳಿ?ಸವದಿ ಕುರಿತು 'ವಿಷ ನೀಡಿದರೂ ಅಮೃತವಾಗಲಿ' ಎಂದಿದ್ಯಾಕೆ ಕುಮಟಳ್ಳಿ?

" ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಬಗ್ಗೆ ಮಾತನಾಡಬಾರದಿತ್ತು. ಬಾಯಿತಪ್ಪಿ ಮಾತನಾಡಿಬಿಟ್ಟೆ" ಎಂದು ಜಾರಕಿಹೊಳಿ ನೀಡಿರುವ ಸಮಜಾಯಿಶಿ, ರಾಜ್ಯ ರಾಜಕಾರಣದಲ್ಲಿ ಹಲವು ಚರ್ಚೆಗೆ ನಾಂದಿ ಹಾಡಿದೆ.

Ramesh Jarkiholi Taken Back His Statement Against DCM Lakshman Savadi

ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ಅಥಣಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಕುರಿತು ಲಕ್ಷ್ಮಣ ಸವದಿ ಅವಾಚ್ಯ ಶಬ್ದಗಳನ್ನು ಬಳಸಿದ್ದ ವಿಡಿಯೋ ವೈರಲ್ ಆಗಿತ್ತು. ಅದಕ್ಕೆ ಮಹೇಶ್ ಕುಮಟಳ್ಳಿ ಬೇಸರ ವ್ಯಕ್ತಪಡಿಸಿದ್ದರು.

" ಮೊಬೈಲ್ ನಲ್ಲಿ ಮಾತನಾಡುತ್ತಾ ಸವದಿ "ಕುಮಟಳ್ಳಿಯಂಥ ದರಿದ್ರ ಮಕ್ಕಳ ಹೆಸರು ನೆನಪಿಸಬೇಡಿ, ಅವನ ಸುದ್ದಿ ತಗೊಂಡ್ ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ" ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ರಮೇಶ್ ಜಾರಕಿಹೊಳಿ, ಸವದಿ ಈ ರೀತಿಯ ಹೇಳಿಕೆಯನ್ನು ನೀಡಿರುವುದು ದುರ್ದೈವ. ಅಥಣಿಯ ಜನ ತಿರಸ್ಕಾರ ಮಾಡಿದರೂ, ಡಿಸಿಎಂ ಆಗಿದ್ದಾರೆ. ಅವನ ಮಾತಿನಿಂದಲೇ ಆ ಮಟ್ಟಕ್ಕೆ ಬಂದಿದ್ದಾನೆ" ಎಂದು ಜಾರಕಿಹೊಳಿ ಹೇಳಿದ್ದರು.

English summary
Dissident MLA Ramesh Jarkiholi Taken Back His Statement Against Deputy CM Lakshman Savadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X