ಮಾತು ತಪ್ಪಿದ ಮೇಲೆ ಅವರೆಂಥಾ ಶಿಷ್ಯ - ಸಿದ್ದರಾಮಯ್ಯ
ಬೆಳಗಾವಿ, ನವೆಂಬರ್.11: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂಬ ಆರೋಪ ಮೇಲಿಂದ ಮೇಲೆ ಕೇಳಿ ಬಂದಿತ್ತು. ಸ್ವತಃ ಹಲವೆಡೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಯಾಕಂದರೆ ಅದಕ್ಕೂ ಒಂದು ಕಾರಣವಿದೆ.
ದೋಸ್ತಿ ಸರ್ಕಾರಕ್ಕೆ ಕೈ ಕೊಟ್ಟು ನಡು ನೀರಿನಲ್ಲೇ ಬಿಟ್ಟು ಹೋದರಲ್ಲ. ಕಾಂಗ್ರೆಸ್ ಅಷ್ಟು ಮಂದಿ ಶಾಸಕರು ಒಂದಾನೊಂದು ಕಾಲದಲ್ಲಿ ಸಿದ್ದರಾಮಯ್ಯ ಶಿಷ್ಯರಂತೆ ಗುರುತಿಸಿಕೊಂಡವರು. ಸಿದ್ದು ಅಪ್ಪಣೆ ಇಲ್ಲದೇ ಅವರು ಹೀಗೆ ಮಾಡಲಿಕ್ಕೆ ಸಾಧ್ಯವಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದರು. ಇದಕ್ಕೆಲ್ಲ ಸಿದ್ದರಾಮಯ್ಯ ಇಂದು ಬೆಳಗಾವಿಯಲ್ಲಿ ಉತ್ತರ ಕೊಟ್ಟಿದ್ದಾರೆ.
ಅನರ್ಹಗೊಂಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬಗ್ಗೆ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ನನ್ನ ಮಾತನ್ನು ಪಾಲಿಸದ ಅವನೆಂಥಾ ಶಿಷ್ಯ ಕಣ್ರಿ. ಅವರು ನನ್ನ ಶಿಷ್ಯನಲ್ಲ, ಕಾಂಗ್ರೆಸ್ ಪಕ್ಷದಲ್ಲಿದ್ದ ಒಬ್ಬ ಶಾಸಕರಷ್ಟೇ ಅಂತಾ ಹೇಳಿದ್ದಾರೆ.

ಮಾತು ತಪ್ಪಿದ ಮೇಲೆಂಥಾ ಶಿಷ್ಯ:
ರಮೇಶ್ ಜಾರಕಿಹೊಳಿ ಏನು ಚಿಕ್ಕ ಮಗುವಲ್ಲ. ನನಗೆ ಯಾವತ್ತೂ ಅವನು ಶಿಷ್ಯ ಅಲ್ಲ, ನಾನು ಅವನಿಗೆ ಗುರುವೂ ಅಲ್ಲ. ನಾನು ಹೋಗಬೇಡ ಅಂದಮೇಲೆ ಅವರು ಮತ್ಯಾಕೆ ಹೋಗಬೇಕು. ಮಾತು ಮೀರಿ ಹೋದ ಮೇಲೆ ಇನ್ನೆಲ್ಲಿ ಗುರು-ಶಿಷ್ಯ ಅಂತಾ ರಮೇಶ್ ಜಾರಕಿಹೊಳಿ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ.












Click it and Unblock the Notifications