ರೇಣುಕಾಚಾರ್ಯ ಕಾಂಗ್ರೆಸ್ ಸೇರ್ತಾರೆ ಅನ್ನೋಕಾಗುತ್ತಾ: ರಮೇಶ್ ಜಾರಕಿಹೊಳಿ
Recommended Video

ಬೆಳಗಾವಿ, ಸೆಪ್ಟೆಂಬರ್ 11: "ಬಿಜೆಪಿ ನಾಯಕರನ್ನು ನಾವು ಭೇಟಿ ಮಾಡಿದರೆ ತಪ್ಪೇನು? ಎರಡು ದಿನಗಳ ಹಿಂದೆ ಬಿಜೆಪಿಯ ರೇಣುಕಾಚಾರ್ಯ ನಮ್ಮನೆಗೆ ಬಂದಿದ್ದರು. ಹಾಗಂತ ಅವರು ಕಾಂಗ್ರೆಸ್ ಸೇರ್ತಾರೆ ಅನ್ನೋಕಾಗುತ್ತಾ?" ಎಂದು ಪತ್ರಕರ್ತರನ್ನು ಪ್ರಶ್ನಿಸಿದರು ಕಾಂಗ್ರೆಸ್ ಮುಖಂಡ, ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ.
ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ದಿಢೀರ್ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಸಹೋದರ ಸತೀಶ್ ಜಾರಕಿಹೊಳಿ ಅವರಿಗೆ ಲೋಕಸಭಾ ಟಿಕೇಟ್ ನೀಡಬೇಕು ಎಂದು ಒತ್ತಾಯಿಸಿದರು.
"ಮಹಾರಾಷ್ಟ್ರದಲ್ಲೂ ನಮ್ಮ ಸಕ್ಕರೆ ಕಾರ್ಖಕಾನೆಗಳಿವೆ. ಆದ್ದರಿಂದ ನಾವು ಅಲ್ಲಿನ ಬಿಜೆಪಿ ಸಚಿವರನ್ನೂ ಒಮ್ಮೊಮ್ಮೆ ಭೇಟಿ ಮಾಡುತ್ತೇವೆ. ಬಿಜೆಪಿ ನಾಯಕರನ್ನು ಭೇಟಿ ಮಾಡಿದರೆ ಅದಕ್ಕೆ ಊಹಾಪೋಹಗಳನ್ನು ಅಂಟಿಸುವುದು ಏಕೆ? ಇತ್ತೀಚೆಗೆ ಬಿಜೆಪಿಯ ರೇಣುಕಾಚಾರ್ಯ ನಮ್ಮ ಮನೆಗೆ ಬಂದಿದ್ದರು. ಹಾಗಂತ ಅವರು ಕಾಂಗ್ರೆಸ್ ಗೆ ಏರುತ್ತಾರೆ ಎನ್ನುವುದಕ್ಕಾಗುತ್ತದೆಯೇ?" ಎಂದು ರಮೇಶ್ ಪ್ರಶ್ನಿಸಿದರು.

ಸತೀಶ್ ಜಾರಕಿಹೊಳಿ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ ಎಂದ ಅವರು, ಬೆಳಗಾವಿ ರಾಜಕೀಯವನ್ನು ನಾವು ಬಗೆಹರಿಸಿಕೊಳ್ಳುತ್ತೇವೆ, ಅದಕ್ಕೆ ಮತ್ತೊಬ್ಬರ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.












Click it and Unblock the Notifications