''ಜಾತಿ ಗಣತಿಯಲ್ಲಿ ಮುಸ್ಲಿಂ ನಂ.1: ಧರ್ಮ, ಜಾತಿ ಒಡೆಯುವುದರಲ್ಲಿ ಸಿದ್ದರಾಮಯ್ಯ ನಂ.1''

ಬೆಂಗಳೂರು, ಏಪ್ರಿಲ್ 16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಸ್ಲಿಮರ ಓಲೈಕೆಗಾಗಿ ಕರ್ನಾಟಕವನ್ನು ಮಿನಿ ಪಾಕಿಸ್ತಾನವಾಗಿಸಲು ಮುಂದಾಗಿದ್ದಾರೆ. ಧರ್ಮ, ಜಾತಿ ಒಡೆಯುವುದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಂಬರ್ 01 ರಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಜಾತಿ ಗಣತಿ ವರದಿ ಚರ್ಚೆ ತಾರಕಕ್ಕೇರಿದೆ. ಮಠಾಧೀಶರು ಸೇರಿದಂತೆ ಅನೇಕರು ವರದಿ ವಿರೋಧಿಸಿದ್ದಾರೆ. ವರದಿಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದೆ ಎಂದು ತೋರಿಸಲಾಗಿದೆ. ಈ ವೇಳೆ ಆರ್.ಅಶೋಕ್ ಅವರ ಹೇಳಿಕೆ ಮಹತ್ವ ಪಡೆದುಕೊಳ್ಳಲಿದೆ.

ಬುಧವಾರ ಬೆಳಗಾವಿಯಲ್ಲಿ ನಡೆದ ಬಿಜೆಪಿ ಜನಾಕ್ರೋಶ ಸಭೆಯಲ್ಲಿ ಮಾತನಾಡಿದ ಅವರು, ಇದು ಬಿಜೆಪಿಯ ಆಕ್ರೋಶದ ಯಾತ್ರೆಯಲ್ಲ. ಜನರ ಆಕ್ರೋಶದ ಯಾತ್ರೆ. ಬೆಲೆ ಏರಿಕೆಯಿಂದಾಗಿ ಜನರಿಗೆ ತೊಂದರೆಯಾಗಿರುವುದರಿಂದ ಅವರಿಗಾಗಿ ಬಿಜೆಪಿ ಹೋರಾಟ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯವನ್ನು ಪಾಕಿಸ್ತಾನ ಮಾಡಲು ಮುಂದಾಗಿದ್ದಾರೆ. ಮುಸಲ್ಮಾನರು ನಂ.1 ಎಂದು ಆಗಲು ವಿದೇಶ ಕೈವಾಡ ಇದೆಯೇ ಎಂಬ ಅನುಮಾನ ಬಂದಿದೆ. ಮುಸ್ಲಿಮರ ಓಲೈಕೆಗಾಗಿ ಎಲ್ಲ ಜಾತಿಗಳನ್ನು ಒಡೆದುಹಾಕಿದ್ದಾರೆ. ಈ ಮೂಲಕ ಮಿನಿ ಪಾಕಿಸ್ತಾನ ಸೃಷ್ಟಿಸುತ್ತಿದ್ದಾರೆ. ಭಾರತವನ್ನು ಪಾಕಿಸ್ತಾನ ಮಾಡುತ್ತೇವೆಂದು ಕೆಲವು ಭಯೋತ್ಪಾದಕರು ಪತ್ರದಲ್ಲಿ ಬರೆದು ಹಂಚಿದ್ದಾರೆ ಎಂದು ಗುಡುಗಿದರು.

R Ashoka Accuses CM Siddaramaiah of Dividing People by Religion and Caste Caste Census

ಸಿಎಂ ಸಿದ್ದರಾಮಯ್ಯನವರ ಕುರ್ಚಿಗೆ ನವೆಂಬರ್‌ನಲ್ಲಿ ಬಾಂಬ್‌ ಫಿಕ್ಸ್‌ ಆಗಿದೆ. ಅವರು ನಿರ್ಗಮಿಸುವುದರಿಂದಲೇ ಈ ರೀತಿ ಮಾಡುತ್ತಿದ್ದಾರೆ. ರಾಜ್ಯದ ಬಡವರ ಮೇಲೆ ತೆರಿಗೆಯ ದಾಳಿ ಮಾಡುತ್ತಿದ್ದಾರೆ. ಕರ್ನಾಟಕ ಹಾಗೂ ತೆಲಂಗಾಣ ಕೇಂದ್ರ ಕಾಂಗ್ರೆಸ್‌ನ ಎಟಿಎಂ ಆಗಿದೆ. ಇದು ಕುರ್ಚಿ ಕಿತ್ತುಕೊಳ್ಳಲು ನಡೆಯುತ್ತಿರುವ ರಾಜಕೀಯ ಎಂದರು.

ಮದ್ಯ, ಮರಣ ಪ್ರಮಾಣಪತ್ರಕ್ಕೂ ದರ ಹೆಚ್ಚಳ

ಕರ್ನಾಟಕದಲ್ಲಿ ಗೃಹ ಸಚಿವರೇ ಇಲ್ಲ. ಎಷ್ಟೇ ಅಪರಾಧ ನಡೆದರೂ ಇದು ಸಾಮಾನ್ಯ ಎಂದು ಡಾ.ಜಿ.ಪರಮೇಶ್ವರ್ ಹೇಳುತ್ತಾರೆ. ಮುಂದಿನ ಸಲ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್‌ ನಾಯಕರಿಗೆ ಗೊತ್ತಾಗಿದೆ. ಹಾಲು, ಆಲ್ಕೋಹಾಲ್‌ ಹಾಗೂ ಡೆತ್‌ ಸರ್ಟಿಫಿಕೇಟ್‌ಗೂ ದರ ಏರಿಸಿದ್ದಾರೆ. ಕಸಕ್ಕೂ ತೆರಿಗೆ ಹಾಕಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಕಸದ ಪ್ರಮಾಣ ಲೆಕ್ಕ ಹಾಕಿ ತೆರಿಗೆ ಹಾಕುತ್ತಾರೆ. ವಾಹನ ಪಾರ್ಕಿಂಗ್‌ ಮಾಡಿದರೂ ತೆರಿಗೆ ವಿಧಿಸುತ್ತಾರೆ ಎಂದರು.

R Ashoka Accuses CM Siddaramaiah of Dividing People by Religion and Caste Caste Census

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರು ರೂಪಿಸಿದ್ದ ಪತ್ರಿಕಾ ಸಂಸ್ಥೆಗೆ 50 ಲಕ್ಷ ರೂ. ಬಂಡವಾಳ ಹೂಡಿ, ಇಡೀ 7,500 ಕೋಟಿ ರೂ. ಹಣವನ್ನು ಕಾಂಗ್ರೆಸ್‌ನ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಲೂಟಿ ಮಾಡಿದ್ದಾರೆ. ಇದು ಕೋರ್ಟ್‌ ಆದೇಶದ ಪ್ರಕಾರ ನಡೆದಿರುವ ತನಿಖೆ. ಆದರೆ ಕಾಂಗ್ರೆಸ್‌ ನಾಯಕರು ಇದರ ವಿರುದ್ಧ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇಂತಹ ಭ್ರಷ್ಟಾಚಾರ ಮಾಡಿರುವ ಕಾಂಗ್ರೆಸ್‌ ಯಾವ ನೈತಿಕೆಯ ಮೇಲೆ ಬಿಜೆಪಿಯ ಮೇಲೆ ಆರೋಪ ಮಾಡುತ್ತಿದೆ? ಎಂದು ಅವರು ಪ್ರಶ್ನಿಸಿದರು.

Take a Poll

ಸ್ವಾತಂತ್ರ್ಯ ಹೋರಾಟಗಾರರು ಕಟ್ಟಿದ ಸಂಸ್ಥೆ ಸರ್ಕಾರಕ್ಕೆ ಸೇರಬೇಕು. ಅಪರಾಧ ಮಾಡಿದ ಇವರಿಬ್ಬರಿಗೂ ಸರಿಯಾದ ಶಿಕ್ಷೆಯಾಗಬೇಕು. ಇಡಿ, ಸಿಬಿಐ ಸ್ವಾಯತ್ತ ಸಂಸ್ಥೆಗಳಾಗಿದ್ದು, ಸುಮ್ಮಸುಮ್ಮನೆ ಯಾರ ಮೇಲೂ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗಲೇ ಕೋರ್ಟ್‌ ಅವರ ವಿರುದ್ಧ ಕ್ರಮ ವಹಿಸಿತ್ತು. ಅದು ನ್ಯಾಯಾಂಗಕ್ಕೆ ಇರುವ ಶಕ್ತಿ. ಅದೇ ರೀತಿ ಇದು ಕೂಡ ಕೋರ್ಟ್‌ನಲ್ಲಿ ವಿಚಾರಣೆಯಾಗಿ ತೀರ್ಮಾನವಾಗಿದೆ. ಈ ಪ್ರಕರಣದಲ್ಲಿ ಕ್ಲೀನ್ ಚಿಟ್‌ ನೀಡಲು ಕಾಂಗ್ರೆಸ್‌ ಪಕ್ಷಕ್ಕೆ ಯಾವ ಅಧಿಕಾರವಿದೆ? ಎಂದು ಕೇಳಿದರು.

ಡಿಕೆಶಿಗೆ ಸಿಎಂ ಸ್ಥಾನದ ಆಸೆ..

ಸಿದ್ದರಾಮಯ್ಯನವರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಎಲ್ಲ ಅಧಿಕಾರ ನೀಡಿದ್ದರು. ಅಧಿಕಾರ ಸಿಗದೇ ಹೋದಾಗ ಜೆಡಿಎಸ್‌‌ ಬಿಟ್ಟು ಕಾಂಗ್ರೆಸ್‌ಗೆ ಬಂದರು. ಈಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧಿಕಾರ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಧರ್ಮ, ಜಾತಿ ಒಡೆಯುವುದರಲ್ಲಿ ಅವರು ನಂ.1 ಎಂದು ಅವರು ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+