ನಿರ್ಮಾಪಕ ಆನಂದ ಅಪ್ಪುಗೋಳ ಮನೆಗೆ ಮುತ್ತಿಗೆ ಹಾಕಿದ ಸಾರ್ವಜನಿಕರು

Recommended Video

      ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿರ್ಮಾಪಕ ಆನಂದ್ ಅಪ್ಪುಗೋಳ್ ಮೇಲೆ ಆರೋಪ | Oneindia Kannada

      ಬೆಳಗಾವಿ, ಮೇ.31 : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ನಿರ್ಮಾಪಕ ಆನಂದ ಅಪ್ಪುಗೋಳ ಮನೆಗೆ ಸಾರ್ವಜನಿಕರು ಮುತ್ತಿಗೆ ಹಾಕಿದ್ದಾರೆ. ರಿಯಲ್ ಎಸ್ಟೇಟ್, ಸಿನಿಮಾ, ಅನೇಕ ಕಡೆಗಳಲ್ಲಿ ಸೊಸೈಟಿಯ ಹಣ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

      ಕಳೆದ ವರ್ಷವೂ ಆನಂದ ಅಪ್ಪುಗೋಳ ಮೇಲೆ ಇದೇ ರೀತಿಯ ಆರೋಪ ಕೇಳಿ ಬಂದಿತ್ತು. ಅವರು 'ಸಂಗೊಳ್ಳಿ ರಾಯಣ್ಣ' ಹೆಸರಿನಲ್ಲಿ ಬ್ಯಾಂಕ್ ಒಂದನ್ನೂ ನಡೆಸುತ್ತಿದ್ದು, ಕಡಿಮೆ ಬಡ್ಡಿಗೆ ಜನರಿಗೆ ಹಣ ನೀಡುವುದಾಗಿ ವಂಚನೆ ಮಾಡಿದ್ದರಂತೆ.

      ಇದೀಗ ಸೊಸೈಟಿಯಲ್ಲೂ ಸಾರ್ವಜನಿಕರಿಂದ ವಿವಿಧ ರೀತಿಯ ಠೇವಣಿ ಮತ್ತು ಬಾಂಡ್ ಗಳ ಮೂಲಕ ನೂರಾರು ಕೋಟಿ ಸಂಗ್ರಹ ಮಾಡಿ, ಸಂಗ್ರಹದ ಹಣದ ದುರ್ಬಳಕೆ ಮಾಡಿಕೊಂಡಿದ್ದಾರೆ.
      ಸರಿಯಾದ ಸಮಯಕ್ಕೆ ಸಾರ್ವಜನಿಕರಿಗೆ ಪಾವತಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

      Public has besieged producer Anand Appugols house.

      ಆನಂದ ಅಪ್ಪುಗೋಳ ಅವರು ಪ್ರತಿಸಾರಿ ಸಾರ್ವಜನಿಕರಿಗೆ ಮೂರು ತಿಂಗಳಂತೆ ಕಾಲವಕಾಶ ಕೇಳುತ್ತಾ ಸಮಯ ಮುಂದುಡುತ್ತಾ ಬಂದಿದ್ದರು. ಇದರಿಂದ ರೋಸತ್ತ ಜನರು ಇಂದು ಗುರುವಾರ
      ಆನಂದ ಅಪ್ಪುಗೋಳ ಮನೆಗೆ ಮುತ್ತಿಗೆ ಹಾಕಿದ್ದಾರೆ.

      ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದು ಬಸ್ತ್ ಏರ್ಪಡಿಸಲಾಗಿದೆ. ಇದೀಗ ಆನಂದ ಅಪ್ಪುಗೋಳ ಅವರನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಹಣ ಕೂಡಿದ ನಂತರ ಮತ್ತೇ ನಿಮ್ಮ ಹಣ ಹಿಂದುರುಗಿಸುವುದಾಗಿ ಇದೇ ಸಂದರ್ಭದಲ್ಲಿ ಆನಂದ ಅಪ್ಪುಗೋಳ ಸಾರ್ವಜನಿಕರಿಗೆ ಮತ್ತೆ ಆಶ್ವಾಸನೆ‌ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+