ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಪತ್ರಕರ್ತರ ಮೇಲೆ ದರ್ಪ ಪ್ರದರ್ಶಿಸಿದ ಪೊಲೀಸರು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ನವೆಂಬರ್.14:ಕಬ್ಬು ಬೆಳೆಗಾರರು ನವೆಂಬರ್.15ರಂದು ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಸಿ ಬೊಮ್ಮನಹಳ್ಳಿ ಇಂದು ಬುಧವಾರ ರೈತರ ಸಭೆ ಕರೆದಿದ್ದರು.

ಅವಹೇಳನಕಾರಿ ಹೇಳಿಕೆ ನೀಡುವ ಎಲ್ಲರ ವಿರುದ್ಧ ಕ್ರಮ: ಪರಮೇಶ್ವರ್‌ಅವಹೇಳನಕಾರಿ ಹೇಳಿಕೆ ನೀಡುವ ಎಲ್ಲರ ವಿರುದ್ಧ ಕ್ರಮ: ಪರಮೇಶ್ವರ್‌

ಆಯ್ದ ರೈತ ಮುಖಂಡರನ್ನು ಕರೆದು ಡಿಸಿ ನಡೆಸುತ್ತಿದ್ದ ಸಭೆಗೆ ಪತ್ರಕರ್ತರೂ ಬಂದರು. ಆಗ ಅಲ್ಲಿಯೇ ಇದ್ದ ಪೊಲೀಸರು ಸಭೆ ನಡೆಯುವ ಸ್ಥಳಕ್ಕೆ ಹೋಗದಂತೆ ಮಾಧ್ಯಮದವರನ್ನು ತಡೆದು, ಅಸಭ್ಯವಾಗಿ ನಡೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

 ಟಿಪ್ಪು ವಿರುದ್ಧ ಮಾತನಾಡಿದ್ದಕ್ಕೆ ಬಂಧಿಸಿದ್ದ ಪತ್ರಕರ್ತನಿಗೆ ಜಾಮೀನು ಟಿಪ್ಪು ವಿರುದ್ಧ ಮಾತನಾಡಿದ್ದಕ್ಕೆ ಬಂಧಿಸಿದ್ದ ಪತ್ರಕರ್ತನಿಗೆ ಜಾಮೀನು

ಈ ಸಂದರ್ಭದಲ್ಲಿ ಪೊಲೀಸರು ಪತ್ರಕರ್ತರ ಜೊತೆ ಅಸಭ್ಯವಾಗಿ ವರ್ತಿಸಿದ್ದು ಅಲ್ಲದೇ, ಸಭೆಗೆ ಹಾಜರಾಗದಂತೆ ಡಿಸಿ ಕಚೇರಿ ದ್ವಾರದಲ್ಲಿ ತಡೆದಿದ್ದಾರೆ. ಇದೀಗ ಪತ್ರಕರ್ತರ ಮೇಲೆ ಪೊಲೀಸರು ನಡೆಸಿದ ದರ್ಪ ಹಾಗೂ ಜಿಲ್ಲಾಡಳಿತ ಕ್ರಮ ಕಂಡು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Police have been misbehaving with journalists

ಪೊಲೀಸರು ಹೀಗೆ ಮಾಧ್ಯಮದವರ ಮೇಲೆ ದರ್ಪ ತೋರಿಸುತ್ತಿರುವುದು ಇದೇ ಹೊಸತೇನಲ್ಲ. ಈ ಹಿಂದೆಯೂ ಇಂತಹ ಘಟನೆಗಳು ಸಾಕಷ್ಟು ನಡೆದಿವೆ. ಇತ್ತೀಚೆಗಷ್ಟೇ ವಿಜಯಪುರದಲ್ಲಿ ಖಾಸಗಿ ವಾಹಿನಿ ಕ್ಯಾಮರಾಮನ್ ಮೇಲೆ ನಾಲ್ವರು ಪೇದೆಗಳು ಮನಬಂದಂತೆ ಹಲ್ಲೆ ನಡೆಸಿದ್ದರು.

English summary
In Belgaum, police have been misbehaving with journalists. Farmers are outraged at the district administration's action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X