ಖಂಡ್ರೆ ಸಂಧಾನ ಯಶಸ್ವಿ: ಲಕ್ಷ್ಮಿ ಬಳಗಕ್ಕೆ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಅವಿರೋಧ ಗೆಲುವು

Recommended Video

      ಲಕ್ಷ್ಮಿ ಹೆಬ್ಬಾಳ್ಕರ್ ಬಣಕ್ಕೆ ಪಿ ಎಲ್ ಡಿ ಬ್ಯಾಂಕ್ ನಲ್ಲಿ ಅವಿರೋಧ ಗೆಲುವು | Oneindia Kannada

      ಬೆಳಗಾವಿ, ಸೆಪ್ಟೆಂಬರ್ 07: ಭಾರಿ ಕುತೂಹಲ ಕೆರಳಿಸಿದ್ದ ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬಳಗಕ್ಕೆ ವಿಜಯವಾಗಿದೆ. ಸತೀಶ್ ಜಾರಕಿಹೊಳಿ ಅವರಿಗೆ ಹಿನ್ನಡೆಯಾಗಿದೆ.

      ಲಕ್ಷ್ಮಿ ಹೆಬ್ಬಾಳ್ಕರ್ ಬಳಗದ ಮಹದೇವ್ ಪಟೇಲ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿಜಾಮ್‌ದಾರ್ ಆಯ್ಕೆ ಆಗಿದ್ದಾರೆ. ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರವನ್ನೇ ಸಲ್ಲಿಸದೆ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.

      ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಅವರ ನಡುವೆ ಸಂಧಾನ ಮಾತುಕತೆ ನಡೆಸಿ, ಸಂಧಾನ ಯಶಸ್ವಿಯಾದ ಕಾರಣ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಆಗಿದೆ. ಆದರೆ ಇಬ್ಬರೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಭ್ಯರ್ಥಿಯೇ ಆಯ್ಕೆ ಆಗಿರುವ ಕಾರಣ ಇದು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗೆಲುವೆಂಬುದು ಖಾತ್ರಿ.

      PLD bank president election: Hebbalkar supported candidate win unanimously

      ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಖಂಡ್ರೆ ಅವರೊಂದಿಗೆ ಸಂಧಾನ ಸೂತ್ರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದರು. ಆದರೆ ಎದುರಾಳಿಗಳು (ಜಾರಕಿಹೊಳಿ ಸಹೋದರರು) ಅವಾಚ್ಯ ಪದಗಳನ್ನು ಬಳಸಿದ್ದೇ ನಮ್ಮ ಸಿಟ್ಟಿಗೆ ಕಾರಣವಾಗಿತ್ತು ಎಂದು ಉತ್ತರಿಸಿದ್ದಾರೆ. ಸಂಧಾನ ಕಾರ್ಯದಲ್ಲಿ ಸಹಕರಿಸಿದ ಪರಮೇಶ್ವರ್, ವೇಣುಗೋಪಾಲ್ ಹಾಗೂ ಈಶ್ವರ್ ಖಂಡ್ರೆಗೆ ಧನ್ಯವಾದ ಹೇಳಿದರು.

      ಸತೀಶ್ ಜಾರಕಿಹೊಳಿಗೆ ಈ ಚುನಾವಣೆಯಲ್ಲಿ ಅವಮಾನವಾದರೆ ಬೆಂಬಲಿಗರೊಂದಿಗೆ ಪಕ್ಷ ಬಿಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಅವರು ಇತ್ತೀಚೆಗಷ್ಟೆ ಎಚ್ಚರಿಸಿದ್ದರು. ಈಗ ಲಕ್ಷ್ಮಿ ಹೆಬ್ಬಾಳ್ಕರ್ ಬಣ್ಕೆ ಗೆಲುವಾಗಿರುವುದರಿಂದ ಇಬ್ಬರು ಸಹೋದರರ ರಾಜಕೀಯ ನಡೆ ಕುತೂಹಲ ಕೆರಳಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+