ಮಲಪ್ರಭಾ ಒಳಹರಿವು ದಿಢೀರ್ ಕುಸಿತ; ನಿಟ್ಟುಸಿರುಬಿಟ್ಟ ನದಿಪಾತ್ರದ ಜನ

ಬೆಳಗಾವಿ, ಆಗಸ್ಟ್ 18: ಪಶ್ಚಿಮ ಘಟ್ಟ ಹಾಗೂ ಬೆಳಗಾವಿಯಲ್ಲಿ ನಿನ್ನೆಯಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಲಪ್ರಭಾ ನದಿಯ ಒಳಹರಿವು 25 ಸಾವಿರದಿಂದ 11 ಸಾವಿರಕ್ಕೆ ತಗ್ಗಿದೆ. ಅದೇ ರೀತಿ ಹೊರಹರಿವೂ ತಗ್ಗಿದೆ.

ನಾಲ್ಕು ದಿನಗಳಿಂದ ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ರಾಮದುರ್ಗ, ರೋಣ, ನರಗುಂದ, ಬದಾಮಿ ತಾಲೂಕುಗಳ ಅನೇಕ ಗ್ರಾಮಗಳು ಜಲಾವೃತಗೊಂಡು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದ್ದವು. ಆದರೆ ಮಂಗಳವಾರ ಹೊರಹರಿವು ಕಡಿಮೆಯಾಗಿದ್ದು ಬುಧವಾರ ಸಂಜೆಯವರೆಗೆ ಆ ಗ್ರಾಮಗಳ ನೀರು ಗಣನೀಯವಾಗಿ ಹಿಂದೆ ಸರಿಯುವ ಸಾಧ್ಯತೆಯಿದೆ.

 Belagavi: People Relaxed As Malaprabha Inflow Water Decreased

ಜಲಾಶಯಕ್ಕೆ ಒಳಹರಿವು ಪ್ರಮಾಣ ಕುಗ್ಗಿದರೆ ನೀರು ಬಿಡುಗಡೆ ಪ್ರಮಾಣ ಕೂಡ ಕಡಿಮೆ ಆಗಲಿದೆ. ಇದರಿಂದ ಪ್ರವಾಹದ ಭೀತಿಯಲ್ಲಿದ್ದ ನದಿಪಾತ್ರದ ಜನರು ಆತಂಕ ತುಸು ದೂರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+