ಮೆಟ್ರೋ ಪರಿಶೀಲನೆಗಾಗಿ ದೆಹಲಿಯಿಂದ ಅಧಿಕಾರಿಗಳು ಬಂದಿದ್ದಾರೆ:ಡಿಸಿಎಂ
ಬೆಳಗಾವಿ, ಡಿಸೆಂಬರ್.14: 'ನಮ್ಮ ಮೆಟ್ರೋ' ಪರಿಶೀಲನೆಗಾಗಿ ದೆಹಲಿಯಿಂದ ಅಧಿಕಾರಿಗಳು ಬಂದಿದ್ದಾರೆ. ಮೆಟ್ರೋ ಬಿರುಕುವನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಇಂದು ಶುಕ್ರವಾರ ಮಾತನಾಡಿದ ಅವರು ಮೆಟ್ರೋ ಬಿರುಕು ವಿಚಾರ ಹಿನ್ನೆಲೆಯಲ್ಲಿ ತಾಂತ್ರಿಕ ವಿಶ್ಲೇಷಣೆ ನಡೆಸಲಾಗಿದೆ. ಮುಂದೆ ಈ ತರಹ ಆಗದ ಹಾಗೇ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರ ಆತಂಕ ದೂರ ಮಾಡಲಾಗುವುದು.
ಮೆಟ್ರೋಗೆ ನಾಳೆ ನಾನೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಮೆಟ್ರೋ ಕಾಮಗಾರಿ ಕಳಪೆ ಆಗಿದ್ರೆ ತನಿಖೆಗೆ ಆದೇಶ ಮಾಡುತ್ತೇನೆ ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸಿಎಂ ಸಿದ್ದರಾಮಯ್ಯರನ್ನು ಶಾಸಕರು ಭೇಟಿ ಮಾಡುವುದರಲ್ಲಿ ತಪ್ಪಿಲ್ಲ. ಹೈ ಕಮಾಂಡ್ ಭೇಟಿಗೆ ಅವಕಾಶ ಕೇಳಿದ್ದೇನೆ. ಡಿಸೆಂಬರ್ 21ಕ್ಕೆ ದೆಹಲಿಗೆ ಹೋಗಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.












Click it and Unblock the Notifications