ಗೋಕಾಕ್ ನಲ್ಲಿ ಬಂಡೆ ಉರುಳುವ ಭೀತಿ; ಎನ್ ಡಿಆರ್ ಎಫ್ ತಂಡ ಭೇಟಿ
ಬೆಳಗಾವಿ, ಅಕ್ಟೋಬರ್ 22: ಬೆಳಗಾವಿಯಲ್ಲಿ ಮತ್ತೆ ಮಳೆಯಬ್ಬರ ಮುಂದುವರೆದಿದೆ. ಗಂಟೆ ಗಂಟೆಗೂ ಮಳೆಯ ಪ್ರಮಾಣ ಹೆಚ್ಚುತ್ತಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಗೋಕಾಕ್ ನ ಮಲ್ಲಿಕಾರ್ಜುನ ಗುಡ್ಡದ ಮೇಲಿನಿಂದ ಬಂಡೆಗಲ್ಲುಗಳು ಉರುಳುವ ಭೀತಿ ಉಂಟಾಗಿದೆ. ಇದಕ್ಕಾಗಿ ಎನ್ ಡಿಆರ್ ಎಫ್ ತಂಡ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮಳೆಯಿಂದಾಗಿ ಬಂಡೆಗಲ್ಲುಗಳ ಕೆಳಗಿನ ಮಣ್ಣು ಕುಸಿತಗೊಂಡಿದೆ. ಹೀಗಾಗಿ ಅದರ ಮೇಲೆ ನಿಂತಿದ್ದ ಬಂಡೆಗಲ್ಲುಗಳು ಉರುಳಿ ಬೀಳಬಹುದೆಂಬ ಆತಂಕದಲ್ಲಿ ಗೋಕಾಕ ಜನತೆ ಇದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಂಡೆಗಲ್ಲುಗಳು ಉರುಳದಂತೆ ತಡೆಯಲು ಅಥವಾ ಬಂಡೆಗಲ್ಲುಗಳನ್ನು ಸ್ಫೋಟಗೊಳಿಸುವ ಚಿಂತನೆಯಲ್ಲಿ ಅಧಿಕಾರಿಗಳ ತಂಡ ತೊಡಗಿಕೊಂಡಿದೆ.

ಬಂಡೆಗಳನ್ನು ಸ್ಫೋಟಗೊಳಿಸುವ ಪ್ರಯೋಗಕ್ಕೆ ದಾರಿ ಮಾಡಿಕೊಂಡು ತಾಂತ್ರಿಕ ತಂಡ ಮತ್ತು ವಾಹನಗಳು ಗುಡ್ಡ ಹತ್ತುತ್ತಿವೆ.












Click it and Unblock the Notifications