ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಅಧಿವೇಶನದ ಮೊದಲ ದಿನ: ಅಗಲಿದ ಗಣ್ಯರಿಗೆ ಸಂತಾಪ

|
Google Oneindia Kannada News

ಬೆಳಗಾವಿ, ಡಿಸೆಂಬರ್ 10: ಬೆಳಗಾವಿ ಅಧಿವೇಶನದ ಮೊದಲ ದಿನ ಅಗಲಿದ ನಾಯಕರಿಗೆ ಸಂತಾಪ ಸೂಚಿಸಲಾಯಿತು. ಕಳೆದ ಅಧಿವೇಶನದ ನಂತರ ಅಗಲಿದ ಗಣ್ಯರಿಗೆ ಎಲ್ಲ ಶಾಸಕರು ಗೌರವ ಸಲ್ಲಿಸಿದರು.

ಅಟಲ್ ಬಿಹಾರಿ ವಾಜಪೇಯಿ, ಸಿ.ಕೆ.ಜಾಫರ್ ಷರೀಫ್, ಅನಂತ್‌ಕುಮಾರ್, ಅಂಬರೀಶ್, ಎಂಪಿ ರವೀಂದ್ರ, ಎಂ.ಭಕ್ತವತ್ಸಲಂ, ಎಚ್‌.ಎನ್.ಪ್ರಕಾಶ್, ಬಾಬುರೆಡ್ಡಿ ವೆಂಕಪ್ಪ ತುಂಗಳ, ವಿಶ್ವನಾಥ ಕರಿಬಸಪ್ಪ ಮಾಮನಿ, ಮಲ್ಲಪ್ಪ ವೀರಪ್ಪ ಶೆಟ್ಟಿ, ವಿಮಲಾಬಾಯಿ ದೇಶ್‌ಮುಖ್, ಓಂಪ್ರಕಾಶ್ ಕಣಗಲಿ, ಈಟಿ ಶಂಬುನಾಥ್, ತಿಪ್ಪೇಸ್ವಾಮಿ ಅವರುಗಳಿಗೆ ಮೊದಲ ದಿನ ಸಂತಾಪ ಸೂಚಿಸಲಾಯಿತು.

ಸಿಎಂ ವಿರುದ್ಧ ರೈತರ ಸಿಟ್ಟು, ಕಾಂಗ್ರೆಸ್ ನಲ್ಲಿ ಕಚ್ಚಾಟ, ಭರ್ಜರಿ ಊಟ- ಇದು ಅಧಿವೇಶನಸಿಎಂ ವಿರುದ್ಧ ರೈತರ ಸಿಟ್ಟು, ಕಾಂಗ್ರೆಸ್ ನಲ್ಲಿ ಕಚ್ಚಾಟ, ಭರ್ಜರಿ ಊಟ- ಇದು ಅಧಿವೇಶನ

ಎಲ್ಲ ಅಗಲಿದ ರಾಜಕೀಯ ಧುರಿಣರಿಗೆ ಶಾಸಕರು ನುಡಿ ನಮನಗಳನ್ನೂ ಸಲ್ಲಿಸಿದರು. ಅನಂತ್‌ಕುಮಾರ್ ಅವರ ಬಗ್ಗೆ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಸೇರಿ ಇನ್ನೂ ಹಲವು ವ್ಯಕ್ತಿಗಳು ಮಾತನಾಡಿದರು. ಅನಂತ್‌ಕುಮಾರ್ ಅವರು 1985 ರಲ್ಲಿ 5000 ಹಣ ಸಹಾಯ ಮಾಡಿದ್ದರು ಎಂಬುದನ್ನು ಡಿಕೆಶಿ ನೆನಪಿಸಿಕೊಂಡರು.

MLAs pay respect to politicians who passed away in Belgaum session

ಅಂಬರೀಶ್ ಬಗ್ಗೆಯೂ ಹಲವು ಶಾಸಕರು, ಮಂತ್ರಿಗಳು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಮಾತನಾಡಿ, ಅಂಬರೀಶ್‌ ಅವರೊಂದಿಗಿನ ಹಳೆಯ ನೆನಪುಗಳನ್ನು ಹಂಚಿಕೊಂಡರು. ಡಿ.ಕೆ.ಶಿವಕುಮಾರ್ ಸಹ ಹಳೆಯ ಗೆಳೆಯನನ್ನು ಸ್ಮರಿಸಿದರು.

ಅಧಿವೇಶನಕ್ಕೆ ಹಾಜರಾದ ಅತೃಪ್ತರು, ಕಾಂಗ್ರೆಸ್ ನಿರಾಳಅಧಿವೇಶನಕ್ಕೆ ಹಾಜರಾದ ಅತೃಪ್ತರು, ಕಾಂಗ್ರೆಸ್ ನಿರಾಳ

ಅಟಲ್‌ ಬಿಹಾರಿ ವಾಜಪೇಯಿ ಅವರ ಬಗ್ಗೆಯೂ ಹಲವು ನಾಯಕರುಗಳು ಮಾತನಾಡಿದರು. ಉಳಿದಂತೆ ಸರ್ಕಾರಿ ಅಧಿಕಾರಿಗಳು ಅಗಲಿದ ಎಲ್ಲ ಗಣ್ಯರ ಹೆಸರುಗಳು ಹೇಳಿ ಅವರ ಸಾಧನೆಗಳನ್ನು ಸದನಕ್ಕೆ ಹೇಳಿದರು, ಎಲ್ಲ ಶಾಸಕರು ಅವರಿಗೆ ಸಂತಾಪ ಸೂಚಿಸಿದರು.

English summary
On first day of Belgaum session MLAs pay respect to politicians who passed away recently. Former prime minister Atal Bihari Vajapeye, Ambareesh, Ananth Kumar, CK Jafar Sherif many other politicians were remembered by MLAs and ministers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X